ಮಚ್ಚೆ
ಕಾಜೂರು ಸತೀಶ್
(ಮಲಯಾಳಂ ಮೂಲ: ಎಸ್. ಜೋಸೆಫ್)

ಆ ಹುಡುಗಿಯ ಬಲಕೆನ್ನೆಯಲ್ಲೊಂದು ಮಚ್ಚೆಯಿತ್ತು.
ಬೆಟ್ಟದಾಚೆ ಗೇರುಮರಗಳ ನಡುವೆ ಅವಳ ಮನೆ.
ನನ್ನ ಮನೆಯ ಸಮೀಪದ ಓಣಿಯಲ್ಲಿ
ಅವಳು ನಡೆದುಹೋಗುವಾಗಲೆಲ್ಲ
ನೋಟದಲ್ಲೇ ಅವಳ ಮಚ್ಚೆಯನ್ನು ಅಳಿಸಿಹಾಕುತ್ತಿದ್ದೆ.
ಅವಳು ತಲೆಬಾಗಿಸಿ ನಡೆದುಹೋಗುತ್ತಿದ್ದಳು.
‘ಅವಳೊಬ್ಬಳು ಮನೆಗೆಲಸದವನ ಮಗಳಲ್ಲವೇ?
ಗೆಳೆಯರೇ ಇಲ್ಲ ಅವಳಿಗೆ’-ಅಮ್ಮ ಹೇಳಿದಳು.
ಆಮೇಲೆ ಮರಗೆಲಸದವನೊಬ್ಬ ಅವಳನ್ನು ಮದುವೆಯಾದ.
ಅವಳಿಗೆ ಮಕ್ಕಳೂ ಆಗಿ ತುಂಬು ಸಂಸಾರ.
ಈಗ,ಅಲ್ಲಿ ಒಂದು ಗೇರುಮರವೂ ಕಾಣಸಿಗುವುದಿಲ್ಲ.
ನನ್ನ ಕವಿತೆಗೆ ಏನೋ ಕೊರತೆಯಿದೆ-
ಯಾರೋ ಹೇಳಿದರು.
ನಾನು ಕೇಳಿದೆ-
‘ಒಂದು ದೊಡ್ಡ ಮಚ್ಚೆಯ ಕೊರತೆಯಲ್ಲವೇ?’






sateeshravare…kavite istavayithu.chennagide-smitha
beautifull….
Ishtavayithu … 🙂
very nice saar..
ಚೆಂದದ ಅನುವಾದ 🙂
nice..
ಮತ್ತೆ ಮತ್ತೆ ಓದಿಸಿಕೊಂಡ ಕವಿತೆ, ನಿಜಕ್ಕೂ ಸವಿದೆ.
thumba arthavathada kaviteyannu namage odalu anuvu madida nimge vandanegalu….
Tumba chanda…