ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಸಾಕಿ ತೀರಾ ಕಾಡುತ್ತಿದ್ದಾಳೆ..

ಸತೀಶ್ ಕುಮಾರ್ ಕೆ

ಅದೇಕೋ ಆ ಸಾಕಿ ತೀರಾ ಕಾಡುತ್ತಿದ್ದಾಳೆ
ಕಡಲಿನ ತೀರದಂತೆ, ನೋವುಂಡ ನನಗೆ
ಆ ಮಧುಶಾಲೆ ತೀರಾ ಹತ್ತಿರವಾಗುತ್ತಿದೆ
ಮಧುವೇರಿಸಲೋ ಆ ಸಾಕಿಯ ನೂಡಲೋ

ಅವಳಿಟ್ಟ ಬಟ್ಟಲು ಬೇತ್ತಲಾಗುತ್ತಿಲ್ಲ
ಎಷ್ಟುಂಡರು ಬರಿದಾಗಿದೆಯಷ್ಟೆ
ಆದರಿಸುವ ಅವಳ ಕೈ ಎಷ್ಟೊಂದು ಮೃದು
ಮುತ್ತಿಟ್ಟ ಮಧುವಿನ ಅದರಗಳ ಹಾಗೆ

ಮತ್ತೆ ಮತ್ತೆ ಕರೆದಂತಿದೆ ಮಾಧುಶಾಲೆ
ಅಮಲಿನ ತೇವಲಿಗಾಗಿ ಅಲ್ಲವೇ ಅಲ್ಲ
ಸಾಕಿಯ ಸೋಲ್ಲ ಆಲಿಸಿ ಆಲಂಗಿಸಲು,
ಅರುಣೋದಯದ ಹೊಂಗಿರಣದಂತೆ

ಇಂದೇಕೋ ನನಗೆ ತೀರ ಹುಷಾರಿಲ್ಲ
ನೆನಪೇ ಆಗುತ್ತಿಲ್ಲ ಹತ್ತಿರದ ದವಾಖಾನೆ
ಬಂಧಿಯಾಗಿದ್ದೇನೆ ಅವಳ ಕಣ್ಣುಗಳಲ್ಲಿ
ವಾಸಿಯಾಗಲು ಒಲವಿನ ಬಟ್ಟಲ ಮಧು ಸಾಕೆನಗೆ

ಮತ್ತೆ ಆ ಸಾಕಿ ತೀರಾ ಕಾಡುತ್ತಿದ್ದಾಳೆ
ಮನದಲಿ ತುಸು ಕರುಣೆ ಇದ್ದರೆ ಸಾಕು
ಆವಳಿಗಾಗಿ ಮೀಸಲಿಟ್ಟುಬಿಡುತ್ತೇನೆ
ಎದೆಯೊಳಗಿನ ಕವಿತೆಯ ಕೊನೆ ಸಾಲುಗಳ

‍ಲೇಖಕರು Avadhi

10 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading