ಆ ಮುದುಕಿ ನಿಲ್ಲಿಸುತ್ತಾಳೆ..

ಮುದುಕಿ

ಅರುಣ ಕೋಲಟ್ಕರ್
ಕನ್ನಡಕ್ಕೆ: ನಾಗರೇಖಾ ಗಾಂವಕರ

ಆ ಮುದುಕಿ ನಿಲ್ಲಿಸುತ್ತಾಳೆ
ನಿಮ್ಮ ತೋಳು ಹಿಡಿದು
ಬಿಡದೇ ಜೊತೆಯಾಗುತ್ತಾಳೆ.

ಆಕೆ ಬೇಡುವುದು ಕೇವಲ
ಐವತ್ತು ಪೈಸೆ
ಅದಕ್ಕೆ ನಿಮ್ಮನ್ನು ಖಂಡೋಬಾ ದೇಗುಲಕ್ಕೆ
ಕರೆದೊಯ್ಯುವೆ ಎನ್ನುತ್ತಾಳೆ.

ನೀವಿದನ್ನು ಆಗಲೇ ನೋಡಿದ್ದಿರಿ
ಆದರೂ ಆಕೆ ಹೇಗೋ ತಡವರಿಸುತ್ತಾ
ಕರೆದೊಯ್ಯುತ್ತಾಳೆ
ಆಗೆಲ್ಲ ನಿಮ್ಮ ಶರ್ಟ್ ನ ಮೇಲಿನ ಆಕೆಯ ಹಿಡಿತ
ಗಟ್ಟಿಯಾಗುತ್ತದೆ.

ನಿಮ್ಮನ್ನು ಹೋಗಗೊಡುವುದಿಲ್ಲ ಆಕೆ
ಗೊತ್ತಲ್ಲ ನಿಮಗೆ ಮುದುಕಿಯರು
ಹೇಗಿರುತ್ತಾರೆಂದು
ಆಕೆ ಬಿಡದೆ ಅಂಟಿಕೊಳ್ಳುತ್ತಾಳೆ
ಬೇಡದ ಹಿಣಿಜಿನಂತೆ

ನೀವೊಮ್ಮೆ ಸುತ್ತಲೂ ತಿರುಗಿ ನೋಡುತ್ತೀರಿ
ಶ್ರೇಷ್ಟತೆಯ ಹಮ್ಮಿನಲ್ಲಿ
ಆಕೆಯೆಡೆಗೆ ನೋಡುತ್ತಾ
ಈ ಪ್ರಹಸನಕ್ಕೊಂದು ಅಂತ್ಯ ಬಯಸುತ್ತೀರಿ

ನಿಮಗಾಗ ಆಗಸವೇ ಗೋಚರಿಸುತ್ತದೆ
ಆಕೆಯ ಕಣ್ಣುಗಳಿದ್ದಲ್ಲಿ
ಕೊರೆದ ರಂಧ್ರದ
ಮೂಲಕ ನಿಚ್ಚಳವಾಗಿ
ಮತ್ತು ನೀವು ನೋಡ ನೋಡುತ್ತಲೇ
ಆಕೆಯ ಕಣ್ಣುಗಳ ಸುತ್ತ ಎದ್ದ ಬಿರುಕುಗಳು
ಚರ್ಮದ ಮೇಲೂ ಹಬ್ಬಿ ಬೆಳೆಯುತ್ತವೆ
ಈಗ ಬೆಟ್ಟಗುಡ್ಡಗಳಲ್ಲಿ ಬಿರುಕು
ದೇಗುಲಗಳಲ್ಲಿ ಬಿರುಕು
ಆಕಾಶವೇ ನೆಲಕ್ಕುರುಳುತ್ತದೆ

ತಗಡಿನ ಕರ್ಕಶ ಸದ್ದು
ಸುತ್ತಲೂ
ಸದ್ದಿಗೆ ಜಗ್ಗದ ಈ ಹಣ್ಣು ಹಣ್ಣು ಮುದುಕಿ
ಒಬ್ಬಂಟಿಯಾಗಿ ನಿಲ್ಲುತ್ತಾಳೆ.

ಮತ್ತೀಗ ನೀವು ಇಳಿದು ಹೋಗುತ್ತಿರಿ
ಒಂದಿಷ್ಟು ಚಿಲ್ಲರೆಯನ್ನು
ಆಕೆಯ ಕೈಗಿತ್ತು.

 

‍ಲೇಖಕರು avadhi

February 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಸಂಗನಗೌಡ

    ಕವಿತೆ ಎಷ್ಟು ಸರಳವಾಗಿ ಪ್ರಾರಂಭವಾಗಿ ಗಂಭೀರದೊಂದಿಗೆ ಮುಕ್ತಾಯ ವಾಗುತ್ತದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: