ಆಳ್ವಾಸ್ ನುಡಿಸಿರಿ 2011-ಎಂ.ಎಂ.ಕಲಬುರ್ಗಿ ಅಧ್ಯಕ್ಷರು


ಆಳ್ವಾಸ್ ನುಡಿಸಿರಿ 2011 ಇದೇ ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ. ಇದರ ಸರ್ವಾಧ್ಯಕ್ಷರಾಗಿ ಎಂ.ಎಂ.ಕಲಬುರ್ಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿರುವ  ಎಂಟನೇ ವರುಷದ ” ಆಳ್ವಾಸ್ ನುಡಿಸಿರಿ”ಯ ಸವರ್ಾಧ್ಯಕ್ಷರಾಗಿ ಸಂಶೋಧಕ ಎಂ.ಎಂ.ಕಲಬುಗರ್ಿ ಸವರ್ಾನುಮತದಿಂದ ಆಯ್ಕೆಗೊಂಡಿದ್ದಾರೆ. ನುಡಿಸಿರಿ ಸ್ವಾಗತ ಸಮಿತಿ ಈ ನಿಧರ್ಾರ ಕೈಗೊಂಡಿದೆ. ಹಂಪಿ ವಿಶ್ವವಿದ್ಯಾನಿಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿರುವ ಎಂ.ಎಂ.ಕಲಬುಗರ್ಿ ನವೆಂಬರ್ 11ರಿಂದ 13ರ ತನಕ ಮೂಡಬಿದಿರೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ಸಾರಥ್ಯ ವಹಿಸಿ  ಮೂರು ದಿನಗಳ ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಸಿಕೊಡಲಿದ್ದಾರೆ.ಕಳೆದ ವರುಷ ಲೇಖಕಿ ವೈದೇಹಿ ಆಳ್ವಾಸ್ ನುಡಿಸಿರಿ ಸಮ್ಮೇಳನದ ಸಾರಥ್ಯ ವಹಿಸಿ ಯಶಸ್ವಿಯಾಗಿ ಸಮ್ಮೇಳನ ನಡೆಸಿಕೊಟ್ಟಿದ್ದರು.
“ಕನ್ನಡ ಮನಸ್ಸು ಸಂಘರ್ಷ ಮತ್ತು ಸಾಮರಸ್ಯ ” ಪರಿಕಲ್ಪನೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಯಲಿದೆ.  ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಸದಸ್ಯರಾಗಿ ಭಾಗವಹಿಸುವ ನಿರೀಕ್ಷೆಯಿದೆ. ಇದಕ್ಕಾಗಿ ಈಗಾಗಲೇ ಪೂರ್ವಭಾವೀ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಕಳೆದ ಏಳು ವರುಷಗಳಿಂದ ಆಳ್ವಾಸ್ ಸಮೂಹ ಸಂಸ್ಥೆ ಯಾವುದೇ ಸರಕಾರಿ ನೆರವನ್ನೂ ಪಡೆಯದೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನುಡಿಸಿರಿಯನ್ನು ಆಯೋಜಿಸುತ್ತಾ ಬಂದಿದ್ದು, ಸಮಯಪ್ರಜ್ಞೆ, ವ್ಯವಸ್ಥೆ,ಶಿಸ್ತುಬದ್ಧ ಕಾರ್ಯಕ್ರಮ ಸಂಯೋಜನೆಗಳ ಮೂಲಕ “ಮಾದರಿ ಸಮ್ಮೇಳನ” ಎಂಬ ಪ್ರಶಂಸೆಯನ್ನು ಸಮಸ್ತ ಕನ್ನಡಿಗರಿಂದ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯೂ ಸಮ್ಮೇಳನವನ್ನು ಸಂಪೂರ್ಣ ಪಾರದರ್ಶಕವಾಗಿ, ವ್ಯವಸ್ಥಿತ ರೀತಿಯಲ್ಲಿ ಸಂಯೋಜನೆಗೊಳಿಸುವ ನಿಟ್ಟಿನಲ್ಲಿ , ಸಮ್ಮೇಳನದಲ್ಲಿ ಜನತೆಯ ಸಹಭಾಗಿತ್ವ ಇನ್ನಷ್ಟು ಮೂಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಕನರ್ಾಟಕದ ವಿವಿಧ ಕಡೆಗಳಲ್ಲಿ ನುಡಿಸಿರಿ ಪೂರ್ವಭಾವೀ ಸಮಾಲೋಚನಾ ಸಭೆಗಳನ್ನು ನಡೆಸುವ ಬಗ್ಗೆ ಚಿಂತಿಸಲಾಗಿದೆ.

ರಾಜ್ಯದ ಆಯ್ದ ಪ್ರದೇಶಗಳಲ್ಲಿ ಈ ಸಮಾಲೋಚನಾ ಸಭೆ ನಡೆಸಲು ಉದ್ದೇಶಿಸಲಾಗಿದೆ.ರಾಜ್ಯದಾದ್ಯಂತ ಪ್ರತಿಯೊಂದು ಜಿಲ್ಲೆಗಳಲ್ಲೂ ಆಳ್ವಾಸ್ ನುಡಿಸಿರಿಯ ಸ್ಥಳೀಯ ಸಮಿತಿಗಳನ್ನು ರಚಿಸುವ ಬಗ್ಗೆ ಚಿಂತಿಸಲಾಗಿದೆ. ಆಳ್ವಾಸ್ ನುಡಿಸಿರಿ ಪೂರ್ವಭಾವೀ ಸಮಾಲೋಚನಾ ಸಭೆಗಳನ್ನು ತಮ್ಮ ಕ್ಷೇತ್ರಗಳಲ್ಲಿ ನಡೆಸಲು ಆಸಕ್ತ ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಲ್ಲಿ ಆಳ್ವಾಸ್ ಸಂಸ್ಥೆಯ ನುಡಿಸಿರಿ ಕಛೇರಿಯನ್ನು  ಸಂಪಕರ್ಿಸಬಹುದು.(ದೂರವಾಣಿ ಸಂಖ್ಯೆ : 08258 – 261229,238104 – 111) ಸಮಾಲೋಚನಾ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಸಮ್ಮೇಳನಕ್ಕೆ ಸದಸ್ಯರಾಗಿ ಭಾಗವಹಿಸಲು ಉತ್ಸಕರಾಗಿರುವವರು ಸ್ಥಳದಲ್ಲೇ ಹೆಸರು ನೋಂದಾಯಿಸಿ ಸದಸ್ಯತ್ವ ಪಡೆದುಕೊಳ್ಳಲು ಅವಕಾಶವಿರುತ್ತದೆ. ಪ್ರತಿವರ್ಷದಂತೆ ಈ ಬಾರಿಯೂ ನುಡಿಸಿರಿ ಸಮ್ಮೇಳನದ ಮೂರೂ ದಿನಗಳಲ್ಲೂ  ರಾತ್ರಿ ಅಗ್ರಮಾನ್ಯ ಕಲಾವಿದರಿಂದ ಸಾಂಸ್ಕೃತಿಕ ವೈಭವ ಏರ್ಪಡಿಸಲಾಗುವುದು.

ಜಾಗತಿಕ ಸಮ್ಮೇಳನ: ಹತ್ತನೇ ವರುಷದ ನುಡಿಸಿರಿ ಸಮ್ಮೇಳನವನ್ನು ಜಾಗತಿಕ ಮಟ್ಟದ ಸಮ್ಮೇಳನವಾಗಿ ಆಯೋಜಿಸಲಾಗವುದು. ಇದಕ್ಕೆ ಪೂರಕ ಯೋಜನೆ, ಯೋಚನೆಗಳು ಪ್ರಗತಿಯಲ್ಲಿವೆ. ವಿಭಿನ್ನವಾಗಿ, ಅತ್ಯಂತ

ವೈಭವಯುತವಾಗಿ ಅಷ್ಟೇ ವ್ಯವಸ್ಥಿತವಾಗಿ ಹತ್ತನೇ ವರುಷದ ನುಡಿಸಿರಿ ಸಮ್ಮೇಳನ ಮೂಡಿಬರಲಿದೆ. ಎಲ್ಲಾ ಜಿಲ್ಲೆಯಿಂದ ಪ್ರತಿನಿಧಿಗಳು: ಈ ಬಾರಿಯ ನುಡಿಸಿರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಕನ್ನಡಾಸಕ್ತರು ಪ್ರತಿನಿಧಿಗಳಾಗಿ ಭಾಗವಹಿಸಬೇಕೆಂಬ ಆಸೆ ನಮ್ಮದು. ಕಳೆದ ವರುಷವೂ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಪ್ರತಿನಿಧಿಗಳು ಆಗಮಿಸಿದ್ದಾರೆ. ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳಾಗಿ ಕನ್ನಡಿಗರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮ ಆಸೆ. ಇದಕ್ಕಾಗಿ ಪ್ರತೀ ಜಿಲ್ಲೆಯಲ್ಲಿಯೂ ನುಡಿಸಿರಿಯ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗುವಂತೆ ಪ್ರಚಾರ ಕೈಗೊಳ್ಳಲಾಗುವುದು ಎಂದರು.ಯುವ ಮನಸ್ಸು ಪಾಲ್ಗೊಳ್ಳಲಿ: ಯುವ ಮನಸ್ಸುಗಳು ಕನ್ನಡವನ್ನು ಕಟ್ಟುವ, ಬೆಳೆಸುವ ಕಾರ್ಯ ಮಾಡಬೇಕಾಗಿದೆ. ಇಂತಹ ಯುವ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ನುಡಿಸಿರಿ ಸಮ್ಮೇಳನದಲ್ಲಿ ಭಾಗವಹಿಸಬೇಕಾಗಿದೆ. ಯುವ ಜನತೆಯಲ್ಲಿ ಕನ್ನಡದ ಬಗೆಗಿನ ಆಸಕ್ತಿ ಉಂಟಾದಲ್ಲಿ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ. ಆ ನಿಟ್ಟಿನಲ್ಲಿ ಯುವ ಮನಸ್ಸುಗಳು ಈ ಸಮ್ಮೇಳನದಲ್ಲಿ ಭಾಗವಹಿಸಲು ಉತ್ಸುಕರಾಗಬೇಕು.

 

‍ಲೇಖಕರು avadhi

September 27, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತಪ್ಪು

ತಪ್ಪು

2 ಪ್ರತಿಕ್ರಿಯೆಗಳು

  1. D.RAVIVARMA

    alwas nudisirige,kalburgi avarannu aykemadiddu nijakku santasada vishaya, kannada sahitigalalli kelavu arogyavanta mansugalli kalaburgi obbaru,sahityika rajakeeyadinda doora ulidu,tammastakke tave ,sahityika krushi nadesutta bandiruva ee chintakarannu alwas nudisiri guritisiddu abhinanarha,alwas nudisiriyalli palgollalu utsukanagiddene,ee kannada vaicharika,vyavastita habbakke,tumbuhrudaya shubhashayagalu
    d.ravi varma hospet

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: