ಆರ್ ಬಿ ಗುರುಬಸವರಾಜ ಓದಿದ ‘ಒಂದು ಡೈರಿಯ ಪರಿಮಳ’

ಮುಚ್ಚಿಟ್ಟರೂ ಕಾಡುವ ಡೈರಿಯ ಪರಿಮಳ

ಆರ್ ಬಿ ಗುರುಬಸವರಾಜ

ಪರಿಮಳ- ಇದು ಕೇವಲ ಹೆಸರಲ್ಲ. ಇದೊಂದು ಆಸ್ವಾದದ ಅನುಭೂತಿ. ಇಂತಹ ಅನುಭವದ ಅನುಭೂತಿಯನ್ನು ಅನುಭವಿಸಲು ಹಚ್ಚಿದವರು ವಾಸುದೇವ ನಾಡಿಗ್ ಅವರು. ಒಂದು ಡೈರಿಯ ಪರಿಮಳ ಎಂಬುದು ಪುಸ್ತಕದ ಹೆಸರು ಮಾತ್ರವಲ್ಲ, ಅದು ಅನೇಕ ಜೀವ-ಭಾವಗಳ ಬದುಕಿನ
ಬಣ್ಣಗಳ ಸಮಿಶ್ರಣ. ನಿತ್ಯವೂ ನಮ್ಮ ಸುತ್ತಲೂ ನಡೆಯುವ ಭಾವಾಂತರಂಗದ ತುಡಿತ-ಮಿಡಿತಗಳ ಹೂರಣ. ಒಂದು ಡೈರಿಯ ಪರಿಮಳ ಓದುತ್ತಾ ಹೋದಂತೆ ಮನಸ್ಸಿಗೆ ಏನೋ ಒಂದು ರೀತಿಯ ಆಪ್ತತೆ ಆವರಿಸುತ್ತದೆ. ಈ ಡೈರಿಯಲ್ಲಿ ೯೬ ಚಿಕ್ಕ ಚಿಕ್ಕ ಕತೆಗಳಿವೆ. ಕತೆಗಳು ಚಿಕ್ಕವಾದರೂ ಬದುಕಿನ ಅಗಾಧದತೆಯನ್ನು ಬಿಂಬಿಸುತ್ತವೆ. ಒಂದೊಂದು ಮಾತು, ಒಂದೊಂದು ಪದ, ಒಂದೊಂದು ಗಳಿಕೆ, ಒಂದೊಂದು ನರಳಿಕೆಯೂ ಇಲ್ಲಿ ಕತೆಯಾಗಿದೆ.

ಮೇಲುನೋಟಕ್ಕೆ ಇಲ್ಲಿನ ಕತೆಗಳಿಗೆ ಸೀಮಿತ ಎಲ್ಲೆ ಕಾಣಿಸುತ್ತದೆ. ಆದರೆ ಆಂತರ್ಯದಲ್ಲಿ ಅಪರಿಮಿತ ವ್ಯಾಪ್ತಿ ಹೊಂದಿವೆ. ಓದುತ್ತಾ ಹೋದಂತೆ ಅಮಿತಾನಂದ ನೀಡುತ್ತವೆ. ಕತೆಗಳು ಚಿಕ್ಕದಾಗಿರುವುದುರಿಂದ ಓದಿದ್ದೆ ತಿಳಿಯುವುದಿಲ್ಲ. ಪುಟ ತಿರುಗಿಸಿದಾಗ ‘ಅಯ್ಯೋ! ಮುಗಿದೇ ಹೋಯ್ತಾ!’ ಎನ್ನುವಂತಾಗುತ್ತದೆ. ಇನ್ನಷ್ಟು ಮುಂದುವರೆದಿದ್ದರೆ ಚೆನ್ನಾಗಿತ್ತು ಅನ್ನಿಸಿಬಿಡುತ್ತದೆ. ಕತೆ ಹೆಣೆಯುವ ತಂತ್ರಗಾರಿಕೆಯಲ್ಲಿ ವಾಸುದೇವ ನಾಡಿಗ್ ಅವರ ಪರಿಶ್ರಮ ಮತ್ತು ಪರಿಭಾವ ಅಪರಿಮಿತ ಎಂಬುದು ಎದ್ದು ಕಾಣುತ್ತದೆ.

ಇಲ್ಲಿನ ಕತೆಗಳು ನಮ್ಮ ಬದುಕಿನ ಭಾವಭಿತ್ತಿಯನ್ನು ಬೆಂಬಿಡದೇ ಕಾಡುತ್ತವೆ. ಪ್ರತಿ ಕತೆಯೂ ಒಂದೊಂದು ಅತ್ತರಿನ ಪರಿಮಳದಂತಿವೆ. ವಿಭಿನ್ನ ಸುವಾಸನೆ ಬೀರುತ್ತ, ವೈವಿಧ್ಯಮಯ ಆಸ್ವಾದವನ್ನು ಉಣಬಡಿಸುತ್ತವೆ. ಒಂದೊಂದು ಕತೆಯೂ ಒಂದೊಂದು ಚಾಕೋಲೇಟ್ ಇದ್ದಂತೆ.
ಚಾಕೋಲೇಟ್ ಚಿಕ್ಕದಿದ್ದರೂ ಅದರ ಆಸ್ವಾದ ಬೇಗ ಸವೆಯುವುದಿಲ್ಲ. ತಿಂದ ಮೇಲೂ ಮತ್ತೆ ಮತ್ತೆ ಬಾಯಾಡಿಸವಂತೆ ಮಾಡುತ್ತವೆ. ಅಂದರೆ ಮತ್ತೆ ಮತ್ತೆ ಓದಬೇಕೆಂಬ ಹಳಹಳಿಯನ್ನು ಹುಟ್ಟುಹಾಕುತ್ತವೆ. ಒಂದೊಳ್ಳೆ ಡೈರಿಯ ಪರಿಮಳವನ್ನು ನೀಡಿದ ವಾಸುದೇವ ನಾಡಿಗ್ ಅವರ ಸಾಹಿತ್ಯ ಸೇವೆಗೆ ನನ್ನ ನಮನಗಳು..

‍ಲೇಖಕರು avadhi

February 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: