ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಎನ್ ದರ್ಗಾದವರ ಕವಿತೆ- ದೇವರು ಮತ್ತು ಚಿಕನ್…

ಆರ್ ಎನ್ ದರ್ಗಾದವರ

ಅರ್ಧದಷ್ಟು ಓಣಿಗೆ ಈಗಾಗಲೇ ತಲುಪಿರುತ್ತದೆ.
ಪೇಟೆಗೆ ಹೋದ ಅಬ್ಬಾ
ಚಿಕನ್ ತರುತ್ತಾರೆ
ಎನ್ನುವ ಪುಕಾರು
ಅಥವಾ
ರವಿವಾರ ಅಲ್ಲವೇ
ಚಿಕನ್
ಇಲ್ಲವೇ ಮಟನ್ ಪಕ್ಕಾ ಎನ್ನುವ
ಖಾತ್ರಿಯೊಂದಿಗೆ ಮೈದಾನಕ್ಕೆ
ಯಾವಾಗಲೂ ಆಟಕ್ಕೆ ಹೋಗುವ
ಮಕ್ಕಳು ಮನೆ ಸುತ್ತ
ಗಿರಕಿ ಹೊಡೆಯುತ್ತಾರೆ.

ಮಿಕ್ಸಿಯಲಿ ಕೊಬ್ಬರಿ ರುಬ್ಬುವಾಗ
ಏನು ಇವತ್ತು ಮತ್ತೆ ಚಿಕನ್…?
ಎಂದು ಕೇಳುತ್ತಾನೆ
ಎಂಟರ ಪೋರ

ಕೊತ್ತಂಬರಿ, ಬೆಳ್ಳುಳ್ಳಿ, ಟೊಮ್ಯಾಟೋ
ಏಲಕ್ಕಿ, ದಾಲ್ಚಿನ್ನಿ ಲವಂಗ
ಎಲ್ಲದರೊಂದಿಗೆ ಮಿಕ್ಸಾದ ಬೆಚ್ಚನೆ ಮಸಾಲೆ
ಗವ್ವನೆ ಓಣಿಯಲ್ಲ ತಿರುಗುವಾಗ
ತಟ್ಟನೆ ಹಾಜರಾದವಳು
ಏನೂ ತಿಂಡಿಪೋತ ಬಂದಿದ್ದಾನಾ ಇಲ್ಲಿ?
ಎಂದು ಪೋರನ ತಾಯಿ ಕೇಳುತ್ತಾಳೆ.

ಬಂದವಳು ಲಚಗುಟ್ಟುತ್ತಾಳೆ,
‘ನಮ್ಮ ಮೂಗಿಗಿರುವ ಅದೃಷ್ಟ
ಬಾಯಿಗಿಲ್ಲ ನೋಡಿ,’ ಎಂದು
ಪೆಚ್ಚು ಮೊರೆ ಹಾಕಿ

ಅಯ್ಯೋ ಇರಿ,
ರುಚಿಗಾದರೂ ತಿಂದು ಹೋಗಿರುವಂತೆ ಎಂದಾಗ
ಅರೆ ಮನಸ ಗೃಹಿಣಿ ಚಕ್ಕಳ ಹಾಕುತ್ತಾಳೆ
‘ಸ್ವಲ್ಪ ಕೊಡಿ ಮತ್ತು ಯಾರಿಗೂ ಹೇಳಬೇಡಿ
ನಮ್ಮ ಮನೆ ದೇವರು ಬೆಂಕಿ.’

‍ಲೇಖಕರು Admin

26 September, 2022

2 Comments

  1. ಕೊಟ್ರೇಶ್ ಅರಸೀಕೆರೆ

    ತುಂಬಾ ಚೆನ್ನಾಗಿದೆ

  2. prathibha nandakumar

    ಎಂದಿನಂತೆ ಚೆನ್ನಾಗಿದೆ ನಿಮ್ಮ ಕವನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading