‘ಆರ್ಟ್ ಹೌಜ್’ನಲ್ಲಿ 18 ಕಲಾವಿದೆಯರ ಕಲಾಕೃತಿಗಳ ಪ್ರದರ್ಶನ…

ಗಣಪತಿ ಅಗ್ನಿಹೋತ್ರಿ

ಮಹಿಳೆ ಸಂವೇದನಾಶೀಲೆ. ಆಕೆ ಜಗತ್ತನ್ನು ನೋಡುವ ಬಗೆಯೇ ಬೇರೆ. ಆಕೆಯ ದೃಷ್ಟಿಕೋನವೇ ಬೇರೆ. ಆಕೆ ಗ್ರಹಿಕೆ, ನಡೆ, ನುಡಿ ಎಲ್ಲವೂ ಭಿನ್ನ. ತನ್ನ ಪರಿಧಿಯಲ್ಲಿ ಎಷ್ಟು ಜಾಗ್ರತೆಯಿಂದ ಇರಲು ಸಾಧ್ಯ ಎಂಬ ಪರಿಜ್ಞಾನವಿಲ್ಲದೆ ಆಕೆ ಯಾವ ಕೆಲಸವನ್ನೂ ಮಾಡಲಾರಳು ಎಂದನಿಸಿದ ಸಂದರ್ಭ ಬಹಳ.

ಅಮೆರಿಕದ ಕವಯತ್ರಿ, ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಮಾರ್ಜ್ ಪಿಯರ್ಸಿ ಅವರು ಹೀಗೊಂದು ಹೇಳಿಕೆ ನೀಡ್ತಾರೆ. “A strong woman is a woman determined to do something others are determined not be done.” ಇದು ಸತ್ಯ, ಒಪ್ಪಲೇಬೇಕು. ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮಿಥ್ಯವಾಗಲು ಸಾಧ್ಯವಿಲ್ಲ. ಮಾಡಬಾರದೆಂದು ನಿರ್ಧರಿಸಿದ ಕೆಲಸವನ್ನು, ಮಾಡಲಾಗದೆಂದು ನಿರ್ಧರಿಸಿದ ಕೆಲಸವನ್ನೂ ಮಾಡಿ ತೋರಿಸಿದ್ದಾಳೆ. ಸಾಧಿಸಿ ತೋರಿಸಿದ್ದಾಳೆ. ಇತ್ತೀಚಿನ ದಿನಗಳಲ್ಲಿಯೂ ಆಗಾಗ ಇದಕ್ಕೆ ಸಾಕ್ಷಿ, ಪುರಾವೆಗಳು ದೊರಕಿವೆ. ಮತ್ತೆ ಮತ್ತೆ ಸಾಬೀತು ಪಡಿಸುತ್ತಾ ಹೋಗಿದ್ದಾಳೆ.

ಬೆಂಗಳೂರಿನ ಆರ್ಟ್ ಹೌಜ್ ಗ್ಯಾಲರಿಯಲ್ಲಿ ಮೊನ್ನೆಯಷ್ಟೇ ಉದ್ಘಾಟನೆಗೊಂಡಿರುವ ಕಲಾಪ್ರದರ್ಶನ ಇದಕ್ಕೊಂದು ಸಣ್ಣ ನಿದರ್ಶನ. ಒಂದಿಬ್ಬರು ಕಲಾವಿದೆಯರ ಕಲಾಕೃತಿಗಳನ್ನು ಹೊರತುಪಡಿಸಿ ಉಳಿದವರ ಕಲಾಕೃತಿಗಳು ನೋಡುಗನನ್ನು ಹಿಡಿದು ನಿಲ್ಲಿಸುತ್ತವೆ. ಕಲಾವಿದೆಯ ಸಂವೇದನೆ, ತುಮುಲ, ಭಾವ ಅಭಿವ್ಯಕ್ತಗೊಂಡಿರುವ ರೀತಿ ಸ್ಪಷ್ಟ. ಹೀಗಾಗಿ ನೋಡುಗ ಕ್ಷಣಕಾಲ ಪುಟ್ಟ ಪುಟ್ಟ ಕಲಾಕೃತಿಗಳ ಒಳನೋಟಕ್ಕೆ ಇಳಿಯುವ ಪ್ರಯತ್ನ ಮಾಡಬಲ್ಲ. ಕಲಾಕೃತಿ ಇಷ್ಟರಮಟ್ಟಿಗೆ ಸ್ಪಂದಿಸುತ್ತಿವೆ ಎಂದರೆ ಅಲ್ಲಿ ಕಲಾವಿದೆಗೂ, ಆಯೋಜಕರಿಗೂ ಸಾರ್ಥಕ ಭಾವವೇ ಮೂಡಬೇಕು. ಈ ನಿಟ್ಟಿನಲ್ಲಿ ಕಲಾಪ್ರದರ್ಶನ ಯಶಸ್ವಿಯಾಗಿದೆ.

Congratulations to all ಶುಭವಾಗಲಿ.

ಮಾರ್ಚ್ 31ರ ತನಕ ಈ ಕಲಾಪ್ರದರ್ಶನ ವೀಕ್ಷಣೆಗೆ ಲಭ್ಯ. 18 ಕಲಾವಿದೆಯರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.

‍ಲೇಖಕರು avadhi

March 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: