ಲಿಂಗರಾಜ ಸೊಟ್ಟಪ್ಪನವರ ಕವಿತೆ- ಉತ್ತರಿಸು…

ಲಿಂಗರಾಜ ಸೊಟ್ಟಪ್ಪನವರ

ನೀನು ಪ್ರಶ್ನೆಯಾಗಿ ನಿಂತಿರುವಿ
ನಾನು ಉತ್ತರಿಸುತ್ತ ಹೋಗುವೆ
ನೀನು ಒಗಟಾಗಿರು
ತತ್ಪರ್ಯವಾಗಿ ನಿನ್ನೊಳಗೆ ಸ್ಪುರಿಸುವೆ
ಹಿಮವಾಗು ನೀನು
ದ್ರವಿಸುವೆ ನಾನು
ಪದಬಂಧವಾಗು
ಬಿಡಿ ಬಿಡಿ ಅಕ್ಷರ ಅಕ್ಷರವಾಗಿ ಹೆಣೆದುಕೊಳ್ಳುವೆ ನಾನು
ಪದವಾಗುವೆಯಾದರೆ
ಅರ್ಥ ನಾನು
ಶಬ್ದವಾಗುವೆಯಾದರೆ
ನಾದ ನಾನು

ತೊರೆಯುವಿಯಾದರೆ
ಅರ್ಧ ನಾನು
ಜೊತೆಯಾಗು
ಪೂರ್ಣಗೊಳ್ಳುವೆ ನಾನು

ಚಾಚಿಕೊಳ್ಳುವೆಯಾದರೆ ಹೇಳು
ದಿಗಂತವಾಗುವೆ
ನೀನು ಮುಗಿಯಬಾರದೆಂದೆ ಅನಂತವಾಗಿರುವೆ ನಾನು

ನಾನು ಇದಿರು
ನನ್ನೆದಿರು ನೀನು

ನಾನು ಉತ್ತರವಾಗಿ ನಿಂತಿರುವೆ
ನೀನೊ ನಿರುತ್ತರ

ಇನ್ನು ಪ್ರಶ್ನೆ ಬೇಡ
ನೀನು ಉತ್ತರಿಸುತ್ತ ಹೋಗು
ನಾನು ನಿರುತ್ತರವಾಗುವೆ

‍ಲೇಖಕರು avadhi

March 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: