ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆದರೆ ಅವಳಿಲ್ಲ , ಇವಳಿದ್ದಾಳೆ, ಪ್ರೀತಿ ಮಾತ್ರ ಅದೇ!

ಅವಳು-ಇವಳು-ನಾನು-ಪ್ರೇಮಿಗಳು!!

– ಸಿದ್ದು


ಪ್ರೀತಿಗಾಗಿ ನಾ ಕೊಟ್ಟ..
ಆ ಕೆಂಪು ಗುಲಾಬಿ
ಇನ್ನೂ ಇದೆ ; ಅವಳ ಜಡಿಯಲ್ಲಿ
ಆದರೆ ಆದಲ್ಲ , ಬೇರೆ
ಅದರ ನೆನಪಿಗಾಗಿ ಮಾತ್ರ
ಅದೇ ಕೆಂಪು ಗುಲಾಬಿ.!
 
ನನಗಾಗಿ ಆಕೆ ಕೊಟ್ಟ..
ಆ ಮುಗ್ಧ ಪ್ರೀತಿ
ಇನ್ನೂ ಇದೆ ; ಇವಳ ಹೃದಯದಲ್ಲಿ
ಆದರೆ ಅವಳಿಲ್ಲ , ಇವಳಿದ್ದಾಳೆ
ಪ್ರೀತಿ ಮಾತ್ರ ಅದೇ!
 
ಆ ಮಧುರ ನೆನಪು
ಇನ್ನೂ ಇದೆ ; ನನ್ನ ಕಣ್ಣುಗಳಲ್ಲಿ
ಆದರೆ ಅವಳಿಲ್ಲ , ದಿನಗಳು
ಮಾತ್ರ ಅದನ್ನು ನೆನಪಿಸಲು
ಒಂದು ವರ್ಷವೂ ಮಿಸ್ ಮಾಡಿಲ್ಲ.!
 
ಪ್ರೀತಿಗಾಗಿ ಸಾಯಲು
ಇನ್ನೂ ಇದ್ದಾರೆ ; ಅನೇಕ ‘ ಮಮತಾಜರು’
ಆದರೆ ಅವರ ನೆನಪಿಗಾಗಿ
‘ ತಾಜ್ ಮಹಲ್ ‘ ಕಟ್ಟಿಸಲು
ಇಂದಿಲ್ಲ ‘ ಷಹಜಹಾನ ‘ ನಂಥ ಸುಲ್ತಾನರು.!
 

‍ಲೇಖಕರು G

12 November, 2013

1 Comment

  1. Gururaj katriguppe

    good poem, thanx for your poem.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading