‘ಆದರೂ ಅಮ್ಮ ಎಲ್ಲ ಮುಚ್ಚಿಟ್ಟಳಲ್ಲ..’ – ಬಿ ವಿ ಭಾರತಿ

ಭಾರತಿ ಬಿ ವಿ

ಭಾರತದ ಸಂಸ್ಕೃತಿ ಅಂಥಾ ಮಹತ್ವದ್ದು, ಪುರಾತನವಾದದ್ದು ಅಂತೆಲ್ಲ ಕೊಚ್ಚಿಕೊಳ್ಳುತ್ತಾ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತೇವಲ್ಲ, ಆಗೆಲ್ಲ ಒಂದು ಸಣ್ಣ ವಿಷಾದದ ಎಳೆ ಮನಸ್ಸಿನಲ್ಲಿ. ಜಗತ್ತಿನ ಎಲ್ಲ ಕಡೆಯೂ ಇರುವಂತೆ ಇಲ್ಲೂ ಒಳ್ಳೆಯವರು, ಕೆಟ್ಟವರು ಎಲ್ಲ ಇದ್ದೇವೆ … ಜೊತೆಗೆ ದೆಹಲಿಯ ಅತ್ಯಾಚಾರದ ಕೇಸ್‌ನಲ್ಲಿ ಕೆಟ್ಟಾಕೊಳಕ ರಾಕ್ಷಸರಾದಂಥ ಜನರು ಕೂಡಾ! ಎಲ್ಲ ಗಂಡಸರು ಕೆಟ್ಟವರು ಅಂತೆಲ್ಲ generalise ಮಾಡುತ್ತಿಲ್ಲ ಇಲ್ಲಿ. ಆದರೆ ಆ ಥರ ವರ್ತಿಸುವ ಮನಃಸ್ಥಿತಿ ಗಂಡಸಿಗೆ ಬರುತ್ತದಲ್ಲ, ಅವನು ಆ ಮಟ್ಟಕ್ಕೆ ಮುಟ್ಟಲು ನಾವು ಅನ್ಯಾಯಕ್ಕೆ ಪ್ರತಿಭಟಿಸದೇ ಒಳಗೊಳಗೇ ಮುಚ್ಚಿಟ್ಟುಕೊಳ್ಳುತ್ತೇವಲ್ಲ ಅದೂ ಒಂದು ಕಾರಣವಾಗಿರಬಹುದಾ? ಹೆಣ್ಣುಮಕ್ಕಳು ದೌರ್ಜನ್ಯಕ್ಕೊಳಗಾದಾಗ ಸುಮ್ಮನೆ ನುಂಗಿ ನಡೆಯುತ್ತೀವಲ್ಲ ಅದು ಯಾಕಾಗಿ? ಜಗತ್ತಿನ ಜನರು ನಮ್ಮನ್ನು ನೋಡುವ ದೃಷ್ಟಿ ಬದಲಾಗುತ್ತದೆ ಅಂತ ಇರಬಹುದಾ? ನಾಳೆ ಇನ್ನೆಂತಾದರೂ ತೊಂದರೆಯನ್ನು ಯಾಕೆ ಮೈ ಮೇಲೆ ಎಳೆದುಕೊಳ್ಳುವುದು ಅಂತಲೋ ಅಥವಾ ಎಷ್ಟೋ ಸಲ ಮನೆತನದ ಮಾನ-ಮರ್ಯಾದೆ ಹಾಗೂ ಸಂಬಂಧಗಳನ್ನು ಕಾಪಾಡಿಕೊಳ್ಳುವುದಕ್ಕಾಗಿಯೂ ಇರಬಹುದಾ?

ನಾನು ಸಣ್ಣವಳಿರುವಾಗ ನಮ್ಮ ಮನೆಯಲ್ಲಿ ಒಬ್ಬ ಕೆಲಸದವನಿದ್ದ. ಆತ ನನ್ನ ತಂದೆಯ ಆಫೀಸಿನಲ್ಲಿ ಕೆಲಸ ಮಾಡುವವನ ತಮ್ಮ. ಹಾಗಾಗಿ ಅವನ ಮೇಲೆ ಅಮ್ಮನಿಗೆ ತುಂಬ ನಂಬಿಕೆಯಿತ್ತು. ಆಕೆ ಸಣ್ಣ ಪುಟ್ಟ outing ಹೋಗುವಾಗ ನಮ್ಮನ್ನು ಅವನ ಸುಪರ್ದಿಗೆ ಒಪ್ಪಿಸಿ ಹೋಗುತ್ತಿದ್ದಳು. ನನಗೆ ಆಗ 5-6 ವರ್ಷ ವಯಸ್ಸಿರಬೇಕು. ಅಕ್ಕ ನನಗಿಂತ ಒಂದೆರಡು ವರ್ಷ ದೊಡ್ಡವಳು. ಸ್ವಭಾವತಃ ಸ್ವಲ್ಪ ಮೊದ್ದು ಮೊದ್ದಾಗಿದ್ದೆ ನಾನಾಗ. ಅಮ್ಮ-ಅಪ್ಪ ಹೊರಟ ಮೇಲೆ ಆ ಹುಡುಗ- ಅವನಿಗೆ ಆಗ 12 ವರ್ಷವಿರಬಹುದೇನೋ- ಅವನು ತನ್ನ ಅಂಗಾಂಗಗಳನ್ನು ತುಂಬ ವಿಕೃತವಾಗಿ ಪ್ರದರ್ಶಿಸುತ್ತಿದ್ದ. ಅದೇನೇನೋ ಮಾತುಗಳನ್ನು ಹೇಳುತ್ತಿದ್ದ. ಅದು ತುಂಬ ಹಳೆಯ ಕಾಲವಾಗಿದ್ದರಿಂದ ಆಗೆಲ್ಲ ಬುದ್ಧಿಗೆ ಅದೆಲ್ಲ ಅರ್ಥವಾಗುತ್ತಲೇ ಇರಲಿಲ್ಲ. ಆದರೂ ಅದೇನೋ ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದಾನೆ ಅನ್ನುವುದಷ್ಟಂತೂ ಅರಿವಾಗುತ್ತಿತ್ತು. ಆದರೆ ಅಪ್ಪನಿಗೆ ಮತ್ತು ಅವನ ಅಣ್ಣನಿಗೆ ಆಫೀಸಿನ connection ಇತ್ತು ಅಂತಲೋ ಏನೋ ಅವನು ಸಧ್ಯ ನನ್ನ ಮೈಯ್ಯನ್ನಂತೂ ಎಂದೂ ಮುಟ್ಟಲಿಲ್ಲ. ಹಾಗೇನಾದರೂ ಮಾಡಿದ್ದರೆ ಬಹುಶಃ ಅಮ್ಮನ ಹತ್ತಿರ ಇದೆಲ್ಲ ಹೇಳುವಷ್ಟು ನೆನಪಿರುತ್ತಿತ್ತು ಅನ್ನಿಸುತ್ತದೆ. ಬರಿದೇ ಅವನ ದೇಹದ ಬಗ್ಗೆ ಅವನು ಎಂಥದ್ದೋ ಮಾಡಿಕೊಳ್ಳುತ್ತಿದ್ದಾನೆ ಅನ್ನಿಸಿದ್ದಕ್ಕೋ ಏನೋ ನಾನು ದೊಡ್ಡವರ ಬಳಿ ಇದನ್ನೆಲ್ಲ ಹೇಳಲೇ ಇಲ್ಲ. ಅಂಥಾ ಸಣ್ಣ ಊರಿನಲ್ಲಿ ಇಷ್ಟೆಲ್ಲ ಆಫೀಸಿನ ಕನೆಕ್ಷನ್ ಇರುವ ಕಡೆಯಲ್ಲೇ ಇಂಥದ್ದೆಲ್ಲ ನಡೆಸುವಷ್ಟು ಮತ್ತು ಅದನ್ನು ಜೀರ್ಣಿಸಿಕೊಳ್ಳುವಷ್ಟು ತಾಕತ್ತು ಅವನಿಗಿತ್ತು ಅಂದರೆ ಅವನ ಧೈರ್ಯ ಲೆಕ್ಕ ಹಾಕಿ …

 

ನಾವೆಲ್ಲ ಕಾಲೇಜಿನಲ್ಲಿರುವಾಗ ಸಿನೆಮಾ ನೋಡಬೇಕೆಂದರೆ ಮೆಜೆಸ್ಟಿಕ್‌ಗೇ ಹೋಗಬೇಕಿತ್ತು. ಆಗೆಲ್ಲ ಈಗಿನ ಥರ online booking ಅನ್ನುವುದೆಲ್ಲ ಎಲ್ಲಿತ್ತು? ಹಾಗಾಗಿ ಆ ರಷ್‌ನಲ್ಲಿ ಕ್ಯೂನಲ್ಲಿ ನಿಂತು ಟಿಕೆಟ್ ಮಾಡಿಸಲೇ ಬೇಕಿತ್ತು. ಆ ದಿನಗಳಲ್ಲಿ ಮೆಜೆಸ್ಟಿಕ್ ಅಂದರೆ ಹೆಣ್ಣು ಮಕ್ಕಳ ಮೈ ತಡವುವುದಕ್ಕೆಂದೇ ಅಲ್ಲಿಗೆ ಬರುತ್ತಿದ್ದ ಪೋಲಿಗಳ ಗುಂಪೂ ಇರುತ್ತಿತ್ತು. ಅವತ್ತೊಂದು ದಿನ ನಾನು ಅಪ್ಪನ ಜೊತೆ ಯಾವುದೋ ಸಿನೆಮಾ ಟಿಕೆಟ್ ಬೇಟೆಗೆ ಹೊರಟಿದ್ದೆ. ಇಬ್ಬರೂ ಮಾತಾಡುತ್ತಾ ಹೋಗುತ್ತಿದ್ದಾಗ ಜನತಾ ಬಜ಼ಾರ್ ಎದುರು ಯಾವನೋ ನನ್ನ ಮೈಮೇಲೆ ಕೈ ಹಾಕಿಬಿಟ್ಟ. ಅಲ್ಲಿಯವರೆಗೆ ಗೆಳತಿಯರ ಜೊತೆ ಹೋಗುವಾಗ ಇಂಥವೆಲ್ಲ ಆದರೆ ದೊಡ್ಡವರು ಜೊತೆಗಿಲ್ಲ ಅಂತ ತುಟಿ ಕಚ್ಚಿ ಸಹಿಸಿಕೊಳ್ಳುತ್ತಿದ್ದೆ. ಆದರೆ ಅವತ್ತು ಅಪ್ಪ ಜೊತೆಗಿದ್ದರಲ್ಲ, ಹಾಗಾಗಿ ಸಿಕ್ಕಾಪಟ್ಟೆ ರೋಷ ಉಕ್ಕಿಬಂದು ನನ್ನ ಮೈ ತಡವಿದವನನ್ನು ಅಟ್ಟಿಸಿಕೊಂಡು ಹೋಗಿ ಅವನ ಕೈ ಹಿಡಿದು ತಿರುಚಲು ಶುರು ಮಾಡಿದ್ದೆ. ಎರಡೇ ನಿಮಿಷದಲ್ಲಿ ಸುತ್ತಲೂ ಜನರ ಗುಂಪು. ಅಪ್ಪ ನಾನು ಪಕ್ಕದಲ್ಲಿ ಇದ್ದೀನಿ ಅಂತ ಅಂದುಕೊಂಡು ಮಾತಾಡುತ್ತಾ ಮುಂದೆ ಹೋಗುತ್ತಲೇ ಇದ್ದಾರೆ. ಆಮೇಲೆ ಹಿಂದೆ ಏನೋ ಗಲಾಟೆಯಾಯ್ತಲ್ಲ ಅಂತ ಕುತೂಹಲಕ್ಕೆ ವಾಪಸ್ ಬಂದರೆ ಚಂಡಿ ಅವತಾರದಲ್ಲಿ ನಾನು ನಿಂತಿದ್ದೀನಿ! ಅವರಿಗೆ ಶಾಕ್ !! ಅಷ್ಟರಲ್ಲಿ ನಾನು ರಣಚಂಡಿಯ ಥರ ಆ ಮನುಷ್ಯನ ಕೈ ಎಲ್ಲ ರಕ್ತ ಬರುವಷ್ಟು ಪರಚಿ ಆಗಿತ್ತು. ಕಾಲರ್ ಹಿಡಿದು ಅವನನ್ನು ತಪ್ಪಿಸಿಕೊಳ್ಳಲೂ ಬಿಡದೇ ಸಿಕ್ಕಾಪಟ್ಟೆ `manhandle’ ಮಾಡಿಬಿಟ್ಟಿದ್ದೆ!! ಅವನು ಅವತ್ತು ನನ್ನ ಕೈಯ್ಯಿಂದ ತಪ್ಪಿಸಿಕೊಂಡು ಓಡಿದ್ದು ಈಗಲೂ ನೆನಪಿದೆ …

ನನ್ನ ಸ್ನೇಹಿತೆಯೊಬ್ಬಳಿಗೆ ೫ ವರ್ಷದ ಮಗಳು. ನೆಂಟರ ಹುಡುಗನಲ್ಲೇ ಒಬ್ಬ ಯಾರೋ ಆ ಪುಟ್ಟ ಮಗುವನ್ನು ತೀರಾ ಅಸಹ್ಯವಾಗಿ ನಡೆಸಿಕೊಳ್ಳುತ್ತಿದ್ದನಂತೆ. ಅದು ಈ ಕಾಲದ ಮಗು. ನಮ್ಮ ಹಾಗೆ ಪೆದ್ದು ಪೆದ್ದಾಗಿರಲಿಲ್ಲ. ಹಾಗಾಗಿ ಅದು ತಕ್ಷಣ ಅಮ್ಮನಿಗೆ ಬಂದು ವಿಷಯ ಹೇಳಿ ನನ್ನ ಗೆಳತಿ ಮತ್ತು ಅವಳ ಗಂಡ ಆ ನೆಂಟರ ಹುಡುಗನಿಗೆ ಜಾನ್ ನಿಕಾಲ್ ಮಾಡಿಬಿಟ್ಟಿದ್ದರಂತೆ. ಆ ಥರ ಮಗು ಬಂದು ಹೇಳಿದ್ದನ್ನು ಹೇಳುವಾಗ ಅವಳು ತುಂಬ ಭಾವೋದ್ವೇಗಕ್ಕೆ ಒಳಗಾಗಿದ್ದಳು. ತನ್ನ ಪುಟ್ಟ ಮಗುವನ್ನು ಆ ರೀತಿ ಬಳಸಿಕೊಂಡಿದ್ದನ್ನು ಹೇಳುವಾಗ ಅವಳು ನಡುಗುತ್ತಿದ್ದಳು. ಅದೂ ನಂಬಿಕಸ್ತ ನೆಂಟರ ಹುಡುಗ ಹೀಗೆ ಮಾಡಿದ್ದು ಅವಳಿಗೆ ಇನ್ನೂ ಸಿಟ್ಟೇರಿಸಿತ್ತು. ಅಲ್ಲೇ ಇದ್ದ ಅವಳ ಅಮ್ಮ ಹಳೆಯ ಕಾಲದವಳು. ಇದನ್ನೆಲ್ಲ ಎಲ್ಲರ ಮುಂದೆ ಹೇಳಿದರೆ ಆ ಪುಟ್ಟ ಮಗುವಿನ ವಿಷಯ ಜಗಜ್ಜಾಹೀರಾಗುತ್ತದೆ ಅನ್ನುವ ಭಯದಿಂದಲೋ ಏನೋ ಅವಳ ಮಾತಿಗೆ ಬ್ರೇಕ್ ಹಾಕಲು ನೋಡಿದರು. ಆಗ ನನ್ನ ಗೆಳತಿ ‘ಥೂ ನೀನು ಹೀಗೆ ಮಾಡಿ ಮಾಡಿಯೇ ನಮ್ಮ ಬಾಯನ್ನು ಆಗಲೂ ಮುಚ್ಚಿಸಿಬಿಟ್ಟೆ’ ಅಂದುಬಿಟ್ಟಳು. ಅವಳ ಅಮ್ಮನ ಮುಖ ಕೆಂಪಾಗಿಹೋಯಿತು. ಅವರು ಅವಳನ್ನು ಸಮಾಧಾನಿಸಲು ‘ಯಾವತ್ತೋ ಆದ ಕಥೆ. ಇವತ್ಯಾಕೆ ಅದರ ಮಾತು ಬಿಡು’ ಅಂತ ಮಾತು ಮರೆಸಲು ನೋಡಿದರು. ಅವಳಿಗೆ ಯಾಕೋ ಅವತ್ತು ತುಂಬ ಸಿಟ್ಟು ಕೆರಳಿತ್ತು. ಹಾಗಾಗಿ ಅವರ ಮಾತಿಗೆ ಕೇರ್ ಮಾಡದೇ ನನ್ನ ಕಡೆ ತಿರುಗಿ ‘ನಾನು ಸಣ್ಣವಳಿರುವಾಗ ಅಮ್ಮನ ಚಿಕ್ಕಪ್ಪನ ಮಗ ನಾವೆಲ್ಲ ರಜಕ್ಕೆ ಅಂತ ಸೇರಿದಾಗ ಮನೆಯಲ್ಲಿದ್ದ ಹೆಣ್ಣುಮಕ್ಕಳನ್ನು ಅವನ ವಿಕೃತ ಕಾಮಕ್ಕೆ ಬಳಸಿಕೊಳ್ಳುತ್ತಿದ್ದ. ಪುಟ್ಟ ಎಳೆಯ ದೇಹ … ಅವನ ವಿಕೃತಿಗೆ ಸಿಕ್ಕಿ ತುಂಬ ನೋವು ಅನುಭವಿಸುತ್ತಿತ್ತು. ನಾನು ಸ್ವಲ್ಪ ಧೈರ್ಯದವಳು. ಆ ನೋವನ್ನೆಲ್ಲ ಸಹಿಸಿ ಸಾಕಾಗಿ ಒಂದು ದಿನ ಅಮ್ಮನ ಹತ್ತಿರ ಬಂದು ಅವನು ಹೀಗೆ ಮಾಡುತ್ತಾನೆ ಅಂತ ಹೇಳೇಬಿಟ್ಟೆ. ಅಮ್ಮ ಅವನ ಹತ್ತಿರ ಹೋಗಿ ಅವನ ಗತಿಕಾಣಿಸುತ್ತಾಳೆ ಅಂತ ನಾನು ಅಂದುಕೊಂಡಿದ್ದೆ. ಆದರೆ ಅಮ್ಮನಿಗೆ ಮನೆತನದ ಮಾನ ಮರ್ಯಾದೆಯ ಯೋಚನೆ. ನಾನು ಹೇಳುತ್ತಿದ್ದ ಹಾಗೆ ಮೊದಲು ಅವಳು ಮಾಡಿದ ಕೆಲಸವೆಂದರೆ ಬೇರೆಯವರಿಗೆ ಕೇಳಿಸದ ಹಾಗೆ ನನ್ನ ಬಾಯಿ ಮುಚ್ಚಿದ್ದು. ಅವನನ್ನ ಬಯ್ಯಿ ಅಮ್ಮ ಅಂತ ನಾನೆಂದರೆ ಅಮ್ಮ ಒಂದೂ ಮಾತಾಡದೇ ಮರುದಿನ ನಮ್ಮನ್ನು ಕರೆದುಕೊಂಡು ಊರಿಗೆ ಬಂದುಬಿಟ್ಟಳು ಅಷ್ಟೇ ! ಆಮೇಲೆ ಕೂಡಾ ಅವಳು ರಜೆಗೆ ಹೋದಾಗ ನಮ್ಮ ಜೊತೆ ಇದ್ದು ನಮ್ಮನ್ನು ಕಾಯುತ್ತಿದ್ದಳೇ ಹೊರತು ಅವನ ವಿಷಯ ಯಾರ ಹತ್ತಿರವೂ ಹೇಳಲೇ ಇಲ್ಲ. ತಾತನ ಹತ್ತಿರ ಹೇಳಿದ್ದರೆ ಅವನು ಅವತ್ತೇ ಸತ್ತುಹೋಗಿರುತ್ತಿದ್ದ. ಅಷ್ಟು ಸಿಟ್ಟು ನನ್ನ ತಾತನಿಗೆ. ಆದರೂ ಅಮ್ಮ ಎಲ್ಲ ಮುಚ್ಚಿಟ್ಟಳಲ್ಲ ಅಂತ ಇವತ್ತಿಗೂ ನನಗೆ ಮೈ ಉರಿಯುತ್ತೆ …’ ಅವಳ ಅಮ್ಮ ಸುಮ್ಮನೇ ಕೂತುಬಿಟ್ಟಿದ್ದರು … ನಾನು ಕೂಡಾ.

ಈ ರೀತಿ ಸಂಬಂಧಿಕರಿಂದ, ತಿಳಿದವರಿಂದ ಸಣ್ಣ ಪುಟ್ಟ ಹೆಣ್ಣುಮಕ್ಕಳು ದೌರ್ಜನ್ಯಕ್ಕೊಳಗಾದಾಗ ತಾನು ಮಾಡಿದ್ದು ಬಹಿರಂಗವೇ ಆಗದೆ ದೌರ್ಜನ್ಯಕ್ಕೊಳಗಾದವರು ತಾವೇ ಏನೋ ತಪ್ಪು ಮಾಡಿದ್ದೇವೆ ಅನ್ನುವ ಹಾಗೆ ಅದನ್ನು ಮುಚ್ಚಿಡುವಾಗ ‘ಎಲ್ಲ ಜೀರ್ಣಿಸಿಕೊಳ್ಳಬಲ್ಲೆ’ ಅನ್ನುವ ದೆಹಲಿಯ ಗ್ಯಾಂಗ್ ರೇಪ್‌ ಪ್ರಕರಣದಲ್ಲಿದ್ದಂಥ ಒಬ್ಬ gym instructor ಅಥವ driver … ಅಥವಾ ಮಗದೊಬ್ಬ ಕುಡಿಯೊಡೆಯುತ್ತಾನಾ ….?

 

‍ಲೇಖಕರು G

December 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

42 ಪ್ರತಿಕ್ರಿಯೆಗಳು

  1. anu pavanje

    ಹೆಚ್ಚಿನ ಮನೆಯ ಕಥೆಯೂ ಹಿ೦ಗೇ…..ಇನ್ನಾದರೂ ಒಳಗಡಗಿರೋ ದನಿ ಹೊರಬರಲಿ………..

    ಪ್ರತಿಕ್ರಿಯೆ
  2. veena s

    ಎಲ್ಲ ಕಡೆ ಇದೇ ಸಮಸ್ಯೆ. ನಾವು ಈಗಿನ ತಾಯಂದಿರು ಮಕ್ಕಳಿಗೆ ಇಂಥಹ ವಿಚಾರಗಳನ್ನು open ಆಗಿ ಹೇಳಬೇಕು ಮತ್ತು ಮಕ್ಕಳೊಂದಿಗೆ open ಆಗಿ ವಿಚಾರ ವಿನಿಮಯ ಮಾಡಬೇಕು . ಮಕ್ಕಳ ಮಾತುಗಳನ್ನು ಗಮನವಿಟ್ಟು ಕೇಳಿ ಸ್ಪಂದಿಸಿ ನಿಮ್ಮೊಟ್ಟಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಬೇಕು. ಆವಾಗ ಮಕ್ಕಳು ನಮ್ಮ ಬಳಿ ಎಲ್ಲ ವಿಷಯ ಹೇಳಿಯಾರು . Parenting is 24 x 7 job ! ಪುತ್ತೂರಿನ ಒಬ್ಬ ಅಜ್ಜ ಹೋಮಿಯೋಪತಿ ವೈದ್ಯನಿಗೆ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ಮುಟ್ಟುವ ಚಟವಿತ್ತು.

    ಪ್ರತಿಕ್ರಿಯೆ
  3. N.VISWANATHA

    Lekhana chennagide.Hengasaralli athava hudugiyaralli defence mechanism eke jothejothege beleyuvadillavo tiliyadu.Adannu prakruthi yennabahuda?Sakashtu gandasaru beediyalli hoguvaga hinthirugi hinthirugi hudugiyarannu noduvudu asahyavagi kanuttade (Vayassu adda illa).Gandasaralli sakashtu parivarthane agabekagide.EEga Dehaliyalli nadediruvudu amanusha.Deterrent punishment onde idakke uttara

    ಪ್ರತಿಕ್ರಿಯೆ
  4. Veena Bhat

    ನಿಜ,ಹೆಣ್ಣು ಮಕ್ಕಳಿಗೆ ಅಮ್ಮನ ಸಪೋರ್ಟ್ ಬೇಕು. ಇಂತಹ ಅನುಭವ ಹೆಚ್ಚು ಕಡಿಮೆ ಎಲ್ಲರಿಗೂ ಆಗಿರುತ್ತೆ.

    ಪ್ರತಿಕ್ರಿಯೆ
  5. bhagyashree

    ಇವತ್ತು ಈ ರೀತಿ ಘಟನೆಗಳು ಆಗುತ್ತಿವೆ ಮತ್ತು ಇನ್ನು ಹೆಚುತ್ತಿವೆ ಅಂದ್ರೆ ಈ ರೀತಿ ಆಗಿದಕ್ಕೆ ಜನ ಪ್ರತಿಭಟಿಸದೇ ಇರುವುದು ಅದರಲ್ಲೂ ಹೆಣ್ಣೇ ಹೆಣ್ಣಿಗೆ ಶತುವಾಗಿ ನಿಂತಿರೋದು. ಎಲ್ಲಿ ತನ್ನ ಗೌರವ ಕಡಿಮೆ ಆಗುತ್ತದೆ ಅನ್ನಿಸೋದಾದರೆ ತನ್ನ ಮಕ್ಕಳಿಗೆ ಆಗುವ ದೌರ್ಜನ್ಯ ವನ್ನು ಕಂಡಿಸಲಿಕ್ಕೆ ಆಗೋದಿಲ್ಲ ಅದರಿಂದ ತನ್ನ ಗೌರವ ಹಾಳಾಗುತ್ತದೆ ಅನ್ನೋದಾದರೆ ತಾಯ್ತನ ಅನ್ನೋದುದಾದರು ಅವಳಿಗೆ ಯಾಕೆ ??ತನ್ನ ದೊಡ್ಡ ಮನೆತನದ, ಪ್ರೆಸ್ತಿಜ್ ಇದರಿಂದ ಹಾಳಾಗುತ್ತದೆ ಅನ್ನೋ ಸಣ್ಣ ಭ್ರಮೆ .ಇಂತಹ ವಿಕ್ರುತಗಳನ್ನು ಕಂಡಾಗ ಅಲ್ಲೇ ಹೊಸಕಿ , ಒಂದು ತರಾಟೆಗೆ ತಗೋಳೋದು ಮತ್ತು ಅಂತಹ ವ್ಯಕ್ತಿಗಳು ಮುಂದೆ ಇಂತಹ ಒಂದು ದುಷ್ಕೃತ್ಯಕ್ಕೆ ಕೈ ಹಾಕದ ಹಾಗೆ ಎಚ್ಚರಿಕೆ ನೀಡೋದು ಸಹ ಸಣ್ಣ ಪ್ರಮಾಣದಲ್ಲೇ ನಡೆಯುವ ದೊಡ್ಡ ಪ್ರತಿಭಟನೆ .

    ಪ್ರತಿಕ್ರಿಯೆ
  6. Tejaswini Hegde

    ಸಹನೆಯ ಮಿತಿ… ಪ್ರತಿಭಟನೆಯ ತಾಕತ್ತು ಎರಡೂ ಅರಿವಾದಗಲಷ್ಟೇ ಸಮಾಜ ಎಚ್ಚೆತ್ತುಕೊಳ್ಳಬಹುದು.. ಎಲ್ಲವುದಕ್ಕೂ ಮೊದಲು ಅಯಾಯಕ್ಕೊಳಗಾದವ ಪ್ರತಿಭಟಿಸಬೇಕು.. ಅವನೊಂದಿಗೆ ಪ್ರಜ್ಞಾವಂತ ಸಮಾಜವೂ ಜೊಗೂಡಿದಲ್ಲಿ ಖಂಡಿತ ಅನ್ಯಾಯಕ್ಕೆ ಗತಿ ಕಾಣಿಸಬಹುದು! ಉತ್ತಮ ಲೇಖನ!!

    ಪ್ರತಿಕ್ರಿಯೆ
  7. Shadakshari.Tarabenahalli.

    ……….NO……………..
    shouldn’t …be tolerated….

    ಪ್ರತಿಕ್ರಿಯೆ
  8. Shama Nandibetta

    ಇಲ್ಲಿನ ಻ಷ್ಟೂ ಸಂವೇದನಾಶೀಲ ದನಿಗೆ ನನ್ನ ನಮನ…

    ಭಾರತೀಈಈಈಈಈಈಈ…

    ಪ್ರತಿಕ್ರಿಯೆ
  9. Roopa

    ಭಾರತಿ ನಿಜಕ್ಕೂ ಭಯ ಆಗ್ತಿದೆ. ಇನ್ನೆಂಥಾ ಕೆಡುಗಾಲ ಕಾದಿದೆಯೋ ಮಕ್ಕಳಿಗೆ ಅಂತ. . ನನ್ನ ಮಗಳಿಗೆ ಹೇಳಿದ್ದೇನೆ ಯಾವುದೇ ಥರದ ಸ್ಪರ್ಶ್ಗವಿದ್ದರೂ ನಂಗೆ ಹೇಳಬೇಕು ಅಂತ. ಭಯ ಪಡಬೇಡ ಅಂತ ಹೇಳಿದ್ದೇನೆ. ಮುಗ್ಧ ಮನಸಿಗೆ ಎಷ್ಟುನೋವಾಗುತ್ತೆ ಅನ್ನೋದನ್ನ ನೆನೆಸಿಯೇ ಕಣ್ಣಲ್ಲಿ ನೀರು ತರುತ್ತೆ

    ಪ್ರತಿಕ್ರಿಯೆ
  10. Ravi Kumar G

    ನಾವು ಗೌಪ್ಯತೆಯ ಕಾಪಾಡುವ ಪ್ರಯತ್ನವ ಮಾಡಿದಷ್ಟೂ ಅಂತಹ ವರ್ತನೆಗೆ ಪರೋಕ್ಷವಾಗಿ ಪ್ರೋತ್ಸಾಹಿಸಿದನ್ತಾಗುತ್ತೆ. ನಮ್ಮಲ್ಲಿ ಜನ ರೇಪ್ ಮಾಡಿದವನಿಗಿಂತಲೂ ರೇಪ್ ಆದವಳು ಕೇಳು ಅಂತ ಕಾಣ್ತಾರೆ – ಅದು ಶುದ್ಧ ತಪ್ಪು, ಅದು ಯಾಕೆ ಗೊತ್ತಾಗಲ್ವೋ ನನಗೆ ತಿಳಿಯೋಲ್ಲ. ಹಾಗೆ ಹುಡುಗರಿಗೆ, ಹುಡುಗಿಯರ ಬಗ್ಗೆ ಗೊತ್ತಿಲ್ಲ, ಶಿಕ್ಷಣ ದೊರೆಯುವುದೇ ಇಲ್ಲ. ಹುಡುಗಿಯರು ಬ್ಹೊಗಿಸುವ ಒಂದು ವಸ್ತು ಅನ್ನುವ ರೀತಿಯಲ್ಲೇ ಬೆಳೆದು ಬಿಡ್ತಾರೆ. ಹದಿ ಹರೆಯದಲ್ಲಿ ಬೇರೆ ಹುಡುಗರ ಮೂಲಕವೋ, ಅಥವಾ ಪೋರ್ನೋಗ್ರಫಿ ಮೂಲಕವೋ ಕೆಟ್ಟ “orientation ” ಸಿಗುತ್ತೆ ಅವರಿಗೆ ಸೆಕ್ಸ್ ಬಗ್ಗೆ….. ಅದು ಒಂದು ತರಹ ವಿಷ ಬೀಜವೇ ಸರಿ, ಮನಸಿನಲ್ಲೇ ಅದು ವಿಕಾರವಾಗಿ ಬೆಳೆದು ಬಿಡುತ್ತೆ, ಹೊರಗೆ ಯಾರಿಗೂ ತಿಳಿಯುವುದೇ ಇಲ್ಲ…ಬೆಳೆದಿರುವ ವಿಕಾರತೆಯನ್ನು ಕತ್ತರಿಸೋದು ಒಂದು ಪ್ರಯತ್ನವಾದರೆ ಹೊದೊಂದು ಬೀಜ ಭಿತ್ತದೆ ಇರುವ ಹಾಗೆ ನೋಡಿಕೋ ಬೇಕು… ಎಲ್ಲ ಟೀನೇಜ್ ಹುಡುಗರ ಅಪ್ಪ -ಅಮ್ಮ ಈ ಬಗ್ಗೆ ಗಮನ ಕೊಡಬೇಕು
    ನನ್ನ ಕಾಲೇಜಿನ ಬೆಂಗಾಲಿ ಗುಂಪಿನ ವಿಧ್ಯಾರ್ಥಿಗಳು ಸೆಮಿಸ್ಟರ್ ಮುಗಿಸಿ ಮರಳುವ ಪ್ಲಾನ್ ಮಾಡುವಾಗ ನಾನು ಆ ಹುಡುಗರು, ತಮ್ಮ ಜೊತೆ ಬರಬೇಕಿದ್ದ ಹುಡುಗಿಗೆ ಮತ್ತನ್ನು ಕುಡಿಸಿ ಗ್ಯಾಂಗ್ ರೇಪ್ (ಹುಡುಗರು ಪ್ಲಾನ್ ಮಾಡುವಾಗ ಅವರು ರೇಪ್ ಎಂದುಕೊಳ್ಳೊಲ್ಲ, ದೈಹಿಕವಾಗಿ ಅನುಭವಿಸುವ ಒಂದು ಪ್ಲಾನ್) ಮಾಡುವ ಪ್ಲಾನ್ ಮಾಡಿದ್ದರು. ಆ ಹುಡುಗಿಯೋ ಅವರೆಲ್ಲರ ಕ್ಲೋಸ್ ಫ್ರೆಂಡ್ (ಬೆಂಗಾಲಿ-ಬೆಂಗಾಲಿ ಫ್ರೆಂಡ್ಸ್). ಮತ್ತೆ, ಅವರಲ್ಲೇ ಒಬ್ಬ,ಆ ಹುಡುಗಿಗೆ ಮಾರ್ಮಿಕವಾಗಿ ತಿಳಿಸಿ ಬೇರೆ ರೈಲಿನಲ್ಲಿ ಹೋಗುವಂತೆ ಮಾಡಿದ.
    ಇನ್ನೊಮ್ಮೆ ಒಂದು ಬಾರ್ ನಿಂದ ಹೊರಬರುತ್ತಿದ್ದ ಇಬ್ಬರು ಸ್ನೇಹಿತರ ಮಾತು ನನ್ನ ಕಿವಿಗೆ ಬಿತ್ತು, “ಮಗ, ನೀನು ಅವಳನ್ನ ಎತ್ತಾಕಂದು ಹೋಗಿ ರೇಪ್ (ಇನ್ನು ಹೊಲಸಾದ ಪದ ಬಳಸಿದ) ಮಾಡೋ… ಅದೇನೇ ಬರಲಿ ನಾನು ನೋಡ್ಕೋತೀನಿ. ಅದು ಒಂದ್ಸಾರಿ ಮುಗೀತು ಅಂದ್ರೆ ಅವಳು ನಿನ್ನೆ ಮಾಡುವೆ ಆಗ್ಬೇಕು”
    ಎಂಥ ವಿಕಾರ ಅಲ್ವ? ಇವುಗಳ ಮೂಲವನ್ನ ಸರಿ ಪಡಿಸಬೇಕು! but i don’t know how exactly!

    ಪ್ರತಿಕ್ರಿಯೆ
  11. Harsha N.M.

    barahakke salam
    anyaayada virudda maataaduva pratibhatisuva manastiti hennige barabeku.

    ಪ್ರತಿಕ್ರಿಯೆ
  12. Sumathi Deepa Hegde

    ಬಹುಶಃ ಪ್ರತಿಯೊಬ್ಬ ಹೆಣ್ಣು ತನ್ನ ಜೀವನದಲ್ಲಿ ಒಮ್ಮೆಯಾದರೂ ಈ ಕೆಟ್ಟ ಅನುಭವ ಅನುಭವಿಸಿಯೇ ಇರುತ್ತಾಳೆ… ಮುಂದಿನ ಮಕ್ಕಳು ಇದರಿಂದ ಬಚಾವಾಗಲು ತಾಯಿಯ ನೆರವು ಅತ್ಯಗತ್ಯ… ನಮ್ಮನ್ನು ನಾವೇ ತಿದ್ದಿಕೊಳ್ಳಲು ತುಂಬಾ ಒಳ್ಳೆಯ ಲೇಖನ ….

    ಪ್ರತಿಕ್ರಿಯೆ
  13. jyothinag

    dhairyavante neenu. aa dhairya ninna gelatiya amma nu madiddidre chenngithu ansalva?

    ಪ್ರತಿಕ್ರಿಯೆ
  14. hema

    olleya thayi thanna hennu makkalannnu paaru maduvantheye, thanna gandu makkalige samskara koda beku… aaga gandasara dourjanya kadime yagabahudu

    ಪ್ರತಿಕ್ರಿಯೆ
  15. Paresh Saraf

    ಬದಲಾವಣೆ ನಮ್ಮಿಂದ ಶುರುವಾಗಬೇಕಿದೆ. ಉತ್ತಮ ಲೇಖನ

    ಪ್ರತಿಕ್ರಿಯೆ
  16. ಆರಗ ರವಿ

    ನಮ್ಮ ಸುತ್ತಮುತ್ತ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. “ಮರ್ಯಾದೆ”ಗೆ ಅಂಜಿ ಹೆಣ್ಮಕ್ಕಳು ಸುಮ್ಮನಾಗುವುದೇ ಬಹುಶಃ ಕಾಮುಕರು ಮತ್ತಷ್ಟು ಕ್ರೂರಿಗಳಾಗಲು ಪ್ರೇರಣೆ. ಸ್ಥಳದಲ್ಲೇ ಮುಖ ಮೂತಿ ಜಜ್ಜಿ ಹಾಕಿದರೆ ಅವರ ಚಟಕ್ಕೆ ಒಂದಷ್ಟು ಬ್ರೇಕ್ ಬೀಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಗಂಡು ಮಕ್ಕಳನ್ನು ಜವಾಬ್ದಾರಿಯುತವಾಗಿ ಬೆಳೆಸುವ ಹೊಣೆಗಾರಿಕೆಯೂ ಮನೆಯವರ ಮೇಲಿದೆ. ಗಂಡು ಗೂಳಿಯಾಗಿ ಬೀದಿಗೆ ಬೀಳದಂತೆ ಮೂಗುದಾರ ಹಾಕಿ ಬಗ್ಗಿಸುವ ಕೆಲಸವಾಗಬೇಕು.

    ಪ್ರತಿಕ್ರಿಯೆ
  17. shanthi k.a.

    houdu parivarthane nammellarolagoo aagabeku…
    modalu maneyindale idu shuruvaagabeku.pratiyobba taayoyoo tanna maganolage hennu makkalatta gouravadinda noduva bhavavannu belesabeku.mattu magalige aatmarakshane kasarattugalannu kalisikoduvada jotege dhairyashaaliyaagiyoo belesa beku.

    ಪ್ರತಿಕ್ರಿಯೆ
  18. Anuradha.rao

    ಈ ತರಹದ ಘಟನೆಗಳು ಸಣ್ಣ ಪ್ರಮಾಣದಲ್ಲಿ ಇಲ್ಲವೇ ದೊಡ್ಡ ಪ್ರಮಾಣದಲ್ಲಿ ಹೆಚ್ಚಿನ ಸಂಸಾರಗಳಲ್ಲಿ ನಡೆದಿರುತ್ತದೆ …ವಿರೋಧಿಸದೆ ಸಮಾಜಕ್ಕೆ ಹೆದರಿ ಸುಮ್ಮನಿದ್ದಿದ್ದದ್ದೂ ಹೀಗಾಗಲು ಕಾರಣ ವಿರಬಹುದು …ಭಾರತೀ ನಿಮ್ಮ ಬರಹ ಎಚ್ಚರಿಕೆಯ ಘಂಟೆ ಯಾಗಿದೆ .

    ಪ್ರತಿಕ್ರಿಯೆ
  19. usha

    Sometimes, I wonder what kind of world we are going to leave for our future generation.

    ಪ್ರತಿಕ್ರಿಯೆ
  20. Aparna Rao..

    ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳಿಗೆ ಭಾವನಾತ್ಮಕ ಸಂಬಂಧಗಳ ಬಗ್ಗೆ ಒತ್ತು ಕೊಟ್ಟು ಅವುಗಳ ಪ್ರಾಮುಖ್ಯತೆಯ ಬಗ್ಗೆ ತಿಳಿಸಿ ಹೇಳಬೇಕು.

    ಪ್ರತಿಕ್ರಿಯೆ
  21. venkatakrishna.kk

    ಎಲ್ಲ ಕಡೆ ಇದೇ ಸಮಸ್ಯೆ.
    ಈಗಿನ ತಾಯಂದಿರು ಮಕ್ಕಳಿಗೆ ಇಂಥಹ ವಿಚಾರಗಳನ್ನು, ಮಡಿವಂತಿಕೆಗಳನ್ನು ಪಕ್ಕಕ್ಕಿಟ್ಟು ಮುಕ್ತವಾಗಿ ಹೇಳಬೇಕು ಮತ್ತು ಮಕ್ಕಳೊಂದಿಗೆ ಮುಕ್ತವಾಗಿ ವಿಚಾರ ವಿನಿಮಯ ಮಾಡಬೇಕು . ಮಕ್ಕಳ ಮಾತುಗಳನ್ನು ಗಮನವಿಟ್ಟು ಕೇಳಿ ಸ್ಪಂದಿಸಿ ನಿಮ್ಮೊಟ್ಟಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಬೇಕು.
    ಕೀಳು ಅಭಿರುಚಿಯ ಮತ್ತು ಮನೆಯಲ್ಲಿ ಸರಿಯಾದ ಪ್ರೀತಿ ದೊರೆಯದ ಜನರೇ ಇಂತಹ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ ಅಂತ ನನ್ನ ಅನಿಸಿಕೆ.
    ಒಟ್ಟಿನಲ್ಲಿ ಇಡಿಯ ಸಮಾಜವೇ ಈ ರಿತಿಯ ಘಟನೆಗಳಿಗೆ ಹೊಣೆಗಾರ ಖಂಡಿತ.
    ಸಕಾಲಿಕ ಲೇಖನ.

    ಪ್ರತಿಕ್ರಿಯೆ
  22. samyuktha

    ನಿಜ! ಇಂತಹ ಅಮಾನವೀಯ ಕೃತ್ಯಗಳ ವಿರುಧ್ಧ ಹೆಣ್ಣು ಮಕ್ಕಳು ಧೈರ್ಯದಿಂದ ತಮ್ಮ ಧ್ವನಿ ಏರಿಸಬೇಕು ಎಂಬ ನಿಮ್ಮ ಮಾತನ್ನು ಖಂಡಿತ ಒಪ್ಪುತ್ತೇನೆ!

    ಪ್ರತಿಕ್ರಿಯೆ
  23. Dr. Azad Ismail Saheb

    ಭಾರತಿಯವರೇ, ಸಮಸ್ಯೆ ನೀವಿ ಹೇಳಿದಂತೆ ಮುಂಚಿನಿಂದಲೇ ಇರುವುದೇ, ನಾಚಿಕೆಗೋ, ಬೇರೆಯವರು ತನ್ನ ಬಗ್ಗೆ ಏನೆಂದುಕೊಳ್ಳುತ್ತಾರೋ ಎನ್ನುವ ಭಾವಕ್ಕೆ ಕಟ್ಟು ಬಿದ್ದೋ ಹೆಣ್ಣು ಮಕ್ಕಳು ಹೇಳಿಕೊಳ್ಳುವುದಿಲ್ಲ. ನಿಮ್ಮ ಹಾಗೆ ಧೈರ್ಯ ತೋರುವವರು ಆಗ ಅಪರೂಪ. ಹೆಣ್ಣು ಈಗ ಸಬಲಳಾಗುತ್ತಿದ್ದಾಳೆ ಆದರೆ ದುರದೃಷ್ಟವಶಾತ್ ಗಂಡು ಹೆಚ್ಚು ಕಾಮಪೀಪಾಸು ಮತ್ತು ವಿಕೃತಕಾಮಿಯಾಗುತ್ತಿದ್ದಾನೆ. ನಮ್ಮ ಕಿಶೋರ ಕಾಲೇಜ್ ದಿನಗಳಲ್ಲಿ..ನೀವು ಹೇಳಿದಹಾಗೆ ಮೆಜೆಸ್ಟಿಕ್ಗೆ “ಸೈಡ್ ಹೊಡೆಯೋಕೆ” ಹೋಗ್ತಿದ್ದೀವಿ ಬರ್ತೀರೇನೋ ಎನ್ನುತ್ತಿದ್ದ ಕಾಲವಿತ್ತು. ನಿಜಕ್ಕೂ ಆಗ ಅದು ಅಷ್ಟಕ್ಕೇ ಸೀಮಿತವಾಗಿತ್ತು ಎಂದು ನನ್ನ ಪ್ರಾಮಾಣಿಕ ಅಭಿಪ್ರಾಯ. ಆದರೆ ಇಂದು ಅತಿರೇಕದ ವರ್ತನೆ, ಕಾಮಪೀಪಾಸೆಗೆ ವಿಕೃತ ಕಾರ್ಯರೂಪ ಕೊಡುವುದು ಸರ್ವೇ ಸಾಮಾನ್ಯವಾಗಿದೆ. ಶಾಲಾ ಹೆಣ್ಣುಮಕ್ಕಳ, ಏನೂ ಅರಿಯದ ಕಂದಮ್ಮಗಳ ಮೇಲೆ ಅತ್ಯಾಚಾರ ಪಾಶವೀ ಪ್ರವೃತ್ತಿಯಲ್ಲದೇ ಮತ್ತೇನೂ ಅಲ್ಲ. ಹೆಣ್ಣಿಗೆ ಇಂದು ಹೆಚ್ಚಿನ ಬೆಂಬಲ ಮತ್ತು ತರಬೇತಿ ಅಗತ್ಯ. ಸಂದರ್ಭಗಳನ್ನು ಚಾಣಾಕ್ಷ ರೀತಿಯಿಂದ ಎದುರಿಸುವ ಶಕ್ತಿ ಯುಕ್ತಿ ಎರಡೂ ಅಗತ್ಯ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಬಲ ಕಾನೂನು ಮತ್ತು ಅದನ್ನು ಕ್ಷಿಪ್ರಗತಿಯಲ್ಲಿ ಆಚರಣೆಗೆ ತರುವ ಏರ್ಪಾಡು ಮುಖ್ಯ. ಬಾಲತ್ಕಾರಿಗಳಿಗೆ ಮತ್ತು ವಿಕೃತ ಕಾಮಕೇಳಿಗರಿಗೆ ಅತಿ ಕಠಿಣ ಶಿಕ್ಷೆ ಕೊಟ್ಟರೆ ಮಾತ್ರ ’ದೆಹಲಿ” ಘಟನೆಗಳನ್ನು ತಡೆಯಲು ಸಾಧ್ಯ.
    ಚನ್ನಾಗಿದೆ ಲೇಖನ..ಮನದ ಮಾತು ಸ್ವಾಭಾವಿಕವಾಗಿ ಹೊರಬಂದಿದೆ.

    ಪ್ರತಿಕ್ರಿಯೆ
  24. Chinmay Mathapati

    ಇಲ್ಲಿ ಹೆದರಿಸಿ ಬದುಕಿದರೆ ಬದುಕು ಎನ್ನುವ ಮಾತು ಸತ್ಯವಾಯ್ತು. ಇಲ್ಲವಾದರೆ ದಾರಿಯಲ್ಲಿನ ಪುಂಡ ಪೋಕರಿಗಳೆಲ್ಲ ಹುಲಿಯಂತೆ ಭಾಸವಾಗುತ್ತಾರೆ. ನಿಮ್ಮಲ್ಲಿರುವ ಮನೋಬಲ ಎಲ್ಲ ಮಹಿಳೆಯರಲ್ಲೂ ಇರುವಂತಾಗಲಿ…………..

    ಪ್ರತಿಕ್ರಿಯೆ
  25. RK

    ಇದಕ್ಕೆ ಕೊನೆ ಇಲ್ಲವೆ ಎಂಬ ಪ್ರಶ್ನೆ ಅಸಹಾಯಕತೆಯಂತೆ ಕೇಳುತ್ತೆ.
    ಇದೆಲ್ಲಕ್ಕೂ ಅಸಹಾಯಕತೆಯೇ ಕಾರಣ ಎಂಬುದೂ ನಿಜ.ಧೈರ್ಯವಾಗಿ ಎದುರಿಸಿ ನಿಲ್ಲುವ ಜನ ಇದನ್ನು ಮೀರಿ ಬದುಕಬಲ್ಲರು.

    ಇಲ್ಲಿ ಕಾನೂನಿಗಿಂತ ಮನಸ್ಥಿತಿ ಬದಲಿಸುವ ಸಾಮಾಜಿಕ ಪರಿಸ್ಥಿತಿ ನಿರ್ಮಾಣ ಾಗಬೇಕಿರುವುದು ಇಂದಿನ ತುರ್ತು

    ಪ್ರತಿಕ್ರಿಯೆ
  26. Anupama Gowda

    Modlige naav badlaagbeku,ee thara misbehave maadorige matthe lifenalli intha thap maadbaardu anno levelge punishment kodbeku……..

    ಪ್ರತಿಕ್ರಿಯೆ
  27. Saraswathi

    Kudos to your writing Bharathi. Certainly yes, it sends an “Echcharikeya gante” everywhere. Nanna-ninna kaaladalli, ivella nadeyuttiddaroo pratibhatisuva athavaa naalku janarige helikolluva dhairya iralilla. The present day kids are very smart. It is evident from the fact, that we are watching in all media.

    ಪ್ರತಿಕ್ರಿಯೆ
  28. sahana prasad

    most Indian families think of ‘honor’ rather than to get back at d oppressor. Those scoundrels know that they can get away as most ppl hesitate to bring such matters to open..it thus grows n grows, till someone gets away from such thinking n starts takin action

    ಪ್ರತಿಕ್ರಿಯೆ
  29. Vinod Kumar

    ಹೆಣ್ಣು ಮಕ್ಕಳಿಗೆ ಹೊರಗಿನವರಿಗಿಂತಾ, ಪರಿಚಯದವರೇ ಹೆಚ್ಚು ಅಪಾಯಕಾರಿ

    ಪ್ರತಿಕ್ರಿಯೆ
  30. Sunanda

    ನಿಜ ಇದು ಹೆಚ್ಚಿನ ಮನೆಯ ಕತೆಯು. ಅಮ್ಮಂದಿರು ಮುಚ್ಚಿಡುತ್ತಾರೆ ಸಮಾಜಕ್ಕೆ ಬೆದರಿ..ಮಕ್ಕಳೂ ಅಮ್ಮನಲ್ಲಿ ಓಪನ್ ಆಗಿ ಮಾತಾಡಲು ಭಯಪಡುತ್ತಿದ್ದರು ..ಆ ಕಾಲ ಹೀಗಿನ ಹಾಗೆ ಇರಲಿಲ್ಲ . .ಆದರೂ ನಿಮ್ಮ ಧೈರ್ಯಕ್ಕೆ ಮೆಚ್ಚಿದೆ. ಉತ್ತಮ ಲೇಖನ! …

    ಪ್ರತಿಕ್ರಿಯೆ
  31. usha rai

    ಈ ಅನುಭವಗಳನ್ನು ಓದಿ ಮನಸ್ಸೆಲ್ಲಾ ಕೆಟ್ಟು ಹೋಗಿದೆ. ಯಾಕೆ ಯಾಕೆ ಹೀಗೆಲ್ಲಾ ಆಗುತ್ತಿದೆ? ಗಂಡು ಮಕ್ಕಳನ್ನು ಬೆಳೆಸುವಲ್ಲಿ ದಾರಿತಪ್ಪಿದೆಯಾ? ಆದರೆ ಮುದುಕರೂ ಇಂತಹ ಹೀನ ಕೃತ್ಯವನ್ನು ಮಾಡುವುದು ನೋಡುವಾಗ ಜಗತ್ತಿನ ಕೊನೆ ಇದೇ ಏನೋ ಎಂದು ಅನಿಸುತ್ತದೆ. ಈ ಸಲ ಎಲ್ಲರೂ ಒಟ್ಟಾಗಿ ಬೀದಿಗಿಳಿದು ಗಲಾಟೆ ಮಾಡಿದ್ದು ಬಹಳ ಬಹಳ ಒಳ್ಳೆಯದಾಯಿತು.ನಮ್ಮನ್ನು ಆಳುವ ಕುರುಡರ ಕಣ್ಣು ಈಗಲಾದರೂ ತೆರೆಯಲಿ. ಎಲ್ಲಾ ತಾಯಂದಿರೂ ಮಕ್ಕಳ ರಕ್ಷಣೆಗಾಗಿ ಜಾಗೃತರಾಗಿರಲಿ. ಮಕ್ಕಳಿಗೆ ತಿಳಿಹೇಳುವ ಅಗತ್ಯ ಈಗ ಬಹಳ ಬಹಳ ಅಗತ್ಯವಿದೆ. ನಮ್ಮ ಗಂಡು ಮಕ್ಕಳಿಗೂ ಇದೆಲ್ಲದರ ಮಾಹಿತಿ ಇರಲೇ ಬೇಕು.ಮನಸಿಗೆ ಬಹಳ ನೋವಾಗುತ್ತಿದೆ.

    ಪ್ರತಿಕ್ರಿಯೆ
  32. ವಿಜಯ್ ಹೆರಗು

    ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಇಂಥ ಹತ್ತಾರು ಘಟನೆಗಳು ಕಂಡೂ ಕಾಣದಂತೆ ಮುಚ್ಚಿಹೋಗುತ್ತವೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದರಿಂದ ಹಾಗೂ ಸಾಮಾಜಿಕ ಅರಿವು ಮೂಡಿಸುವುದರಿಂದ ಇಂಥಹ ಘಟನೆಗಳನ್ನು ತಡೆಯಬಹುದು.

    ಪ್ರತಿಕ್ರಿಯೆ
  33. ಸಹ್ಯಾದ್ರಿ ನಾಗರಾಜ್

    ಬೆಚ್ಚಿಬೀಳಿಸಿದ ವಾಸ್ತವ ಸಂಗತಿಗಳ ಲೇಖನ. ನಮಗೆ ನಾವೇ ಹೇರಿಕೊಂಡ ಕಟ್ಟಳೆಗಳ ಬಗ್ಗೆ ಅನೇಕರನ್ನು ಚಿಂತನೆಗೆ ದೂಡಿರುವುದು ಈ ಪರಿಣಾಮಕಾರಿ ಬರಹಕ್ಕಾಗಿ ಭಾರತಿ ಮೇಡಮ್’ಗೆ ಥ್ಯಾಂಕ್ಸ್.

    ಪ್ರತಿಕ್ರಿಯೆ
  34. Prasad V Murthy

    ಏನಾಗಿದೆ ನಮ್ಮ ಸಾಂಸ್ಕೃತಿಕವಾಗಿ ಉಚ್ಛಸ್ಥಾನದಲ್ಲಿರುವ ಸಮಾಜಕ್ಕೆ! ಹೇಸಿಗೆಯಾಗುತ್ತಿದೆ, ನಾವು ಇಂತಹ ರಕ್ಕಸರ ನಡುವೆ ಬದುಕುತ್ತಿದ್ದೇವೆ ಎಂದು ತಿಳಿದು. ಅಮ್ಮ ತನ್ನ ಮರ್ಯಾದೆಯನ್ನು ಕಾಯ್ದಂತೆ ಆ ಪಿಶಾಚಿಯನ್ನೂ ಕಾಯಬಾರದಿತ್ತು! ಮಕ್ಕಳಿಗೆ ಧೈರ್ಯವಾಗಿ ಇಂತಹ ಸಂದರ್ಭಗಳನ್ನು ಎದುರಿಸುವುದನ್ನು ಕಲಿಸಬೇಕು. ಗುಬ್ಬಿ ಮರಿ ಗೂಡಲ್ಲಿ ತನ್ನ ಮರಿಗಳನ್ನು ಕವುಚಿಟ್ಟು ಗುಟುಕಿರಿಸುವುದಷ್ಟೇ ಅಲ್ಲ, ಹಾರಲು ಕಲಿಸಬೇಕು, ಆಪತ್ತುಗಳು ಬಂದೆರಗಿ ಶತ್ರುಗಳು ಎರಗಿಬರುವಾಗ ಅವರನ್ನು ಹೇಗೆ ಬಡಿಯಬೇಕೆಂಬುದನ್ನೂ ಕಲಿಸಬೇಕು. This article is an eye opener.

    ಪ್ರತಿಕ್ರಿಯೆ
  35. sunil rao

    we have come with this same mindeset where we dont possess ourselves to adjust this module. we depend and defend the structure that has been fed from decades….we fear to revolt….to raise our voice….to protest.!!
    really felt low reading this….have read sooo many writeups and practical problems facing these kind of situations
    i have seen many fathers and brothers doing the same rubbish…
    its really intolerable.

    kudos to u bvb

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: