Siddaiah Chikkamadegowda fb wallನಿಂದ..
ವೈದ್ಯರೊಬ್ಬರು “ಏಯ್ ಆಟೋ, ಆಸ್ಪತ್ರೆ ಹತ್ರ ಬಿಡಪ್ಪ”
ಎನ್ನುತ್ತ ಆಟೋ ಹತ್ತಿ ಕುಳಿತರು.
ವೈದ್ಯರ ಮುಷ್ಕರದ ಬಗ್ಗೆ ತಿಳಿದಿದ್ದ ಆಟೋ ಚಾಲಕ ವೈದ್ಯರನ್ನು ಆಸ್ಪತ್ರೆ ಹತ್ತಿರ ಇಳಿಸಿದ ನಂತರ
“ಇನ್ನೂರು ಕೊಡಿ ಸಾರ್” ಎಂದ.
ಕೋಪಗೊಂಡ ವೈದ್ಯರು
“ಯಾಕಯ್ಯ, 50 ರೂಪಾಯಿಗೆ ಇನ್ನೂರು ಕೇಳ್ತೀಯಾ? ಸರ್ಕಾರ ದರ ನಿಗದಿ ಮಾಡಿರೋದು ಯಾಕೆ? ಯಾಕ್ರಯ್ಯ ಈ ರೀತಿ ಸುಲಿಗೆ ಮಾಡ್ತೀರಿ? ಪೊಲೀಸರಿಗೆ ಕಂಪ್ಲೇಂಟ್ ಕೊಡ್ತೀನಿ ನಡಿ ಸ್ಟೇಷನ್ನಿಗೆ.”
ಚಾಲಕ ವಿಚಲಿತನಾಗದೆ ಹೇಳಿದ
“ನನ್ ಆಟೋ, ನನ್ ಬಂಡವಾಳ ಸಾರ್. ನಾವು ಮಾಡೊ ಸೇವೆಗೆ ದರ ನಿಗದಿಮಾಡಲು ಅವರ್ಯಾರು ಸಾರ್?”
“ಏನೋ, ಎಷ್ಟೋ ಅಹಂಕಾರ ನಿಂಗೆ? ಸರ್ಕಾರವನ್ನೇ ಪ್ರಶ್ನೆ ಮಾಡ್ತಿಯಲ್ಲೊ. ಸರ್ಕಾರ ದರ ನಿಗದಿ ಮಾಡ್ದೆ ಇದ್ರೆ ಜನರನ್ನ ಅದೆಷ್ಟು ಸುಲಿಗೆ ಮಾಡ್ತಿದ್ರೊ ಈ ಆಟೋದರ್ವು.”
“ಸಾರ್, ಆಟೋದವರು ಹೀಗೆಲ್ಲಾ ಮಾತಾಡುದ್ರೆ ಅಹಂಕಾರ ಅಂತೀರಿ. ಖಾಸಗಿ ವೈದ್ಯರು ಇದೇ ಮಾತಾಡೋದು, ನಮಗೆ ನಿಯಂತ್ರಣ ಬೇಡ ಅನ್ನೋದು ಸರೀನ ಸಾರ್? ನೀವು ಮಾಡೊ ಸೇವೆಗೂ ಒಂದು ದರ ನಿಗದಿ ಮಾಡ್ಬೇಕಲ್ವ ಸಾರ್.”
ಚಾಲಕನ ಪ್ರಶ್ನೆಗೆ ವೈದ್ಯ ಉತ್ತರಿಸಲಾರದೆ ಪೆಚ್ಚಾಗಿ ನಿಂತ. ವೈದ್ಯರಿಗೆ ಏನು ಹೇಳಬೇಕೆಂದಿದ್ದನೊ ಅದನ್ನು ಹೇಳಿದ ತೃಪ್ತಿ ಚಾಲಕನಿಗೆ. ಮೀಟರ್ ದರ ಪಡೆದು ಅಲ್ಲಿಂದ ಮುಂದೆ ಹೊರಟ.






ವೈದ್ಯರು ಎಷ್ಟು ಕೇವಲ ಆಗಿಬಿಟ್ರಲ್ಲ ,ಜನತೆಯ ಕಣ್ಣಲ್ಲಿ!!!!! ಇದೆಂಥ ಶೋಚನೀಯ ಪರಿಸ್ಥಿತಿ !!! ಆಟೋದವರು ಸೇವೆ ಡಾಕ್ಟರ್ ಸೇವೆ ಎರಡೂ ಒಂದೇನಾ ????ವೈದ್ಯೋ ನಾರಾಯಣೋ ಹರಿ ಅಂತಾರೆ ಬಲ್ಲವರು.ತಮ್ಮ ಜೀವ ಒತ್ತೆ ಇಟ್ಟು, ತಮ್ಮ ಸುಖ ದುಃಖ ಗಮನಿಸದೇ ರೋಗಿಗಳ ಗೋಳಾಟ ಕ್ಕೆ ಸ್ಪಂದಿಸುವ ವೈದ್ಯರನ್ನು ಈ ರೀತಿ ಉಡಾಫೆ ಮಾಡುವುದು ಎಷ್ಟು ಸಮಂಜಸ?? ಒಂದು ಹಾಸ್ಪಿಟಲ್ ಸೆಟ್ ಮಾಡಲು ಬೇಕಾಗುವ ಹಣದ ಅಂದಾಜು ಇದೆಯಾ? ಉನ್ನತ ಮಟ್ಟದ ಚಿಕಿತ್ಸೆ ಬೇಕಾದರೆ , ಅದಕ್ಕೆ ತಕ್ಕ ಸಲಕರಣೆ ಬೇಕು ತಾನೆ ?? ಅದನ್ನು ಸರ್ಕಾರ ಒದಗಿಸ್ತದಾ? ಸರ್ಕಾರಿ ಆಸ್ಪತ್ರೆಯ ಪರಿಸ್ಥಿತಿ ನೋಡಿದವರ್ಯಾರೂ ಜೀವದಾಸೆ ಇದ್ದವರು ಹೋಗಲ್ಲ ಅನ್ಕೊಂಡೀನಿ. ಇದಕ್ಕೆ ಅಪವಾದ ಇಲ್ಲ ಅಂತೇನಿಲ್ಲ.ಆದರೂ ಜೀವ ಉಳಿಸಿದರೆ ದೇವರು ಇಲ್ಲ ಅದೇ ವೈದ್ಯ ಯಮದೂತ ಅನ್ನೋ ಸಮಾಜ.ಇಂಥವರ ಮಧ್ಯೆ ತಮ್ಮ ವೈಯಕ್ತಿಕ ಜೀವನ ಕೂಡ ಗೌಣ ಅಂತ ಸೇವೆ ಮಾಡೋ ಡಾಕ್ಟರ್ ಗೆ ,ಸಮಾಜ , ಸರ್ಕಾರ ಕೊಡೋ ಗೌರವ ಇದು.ಈಥರದ ಒತ್ತಡದ ಮಧ್ಯೆ , ನಿಯಂತ್ರಣ ಗಳ ಮಧ್ಯೆ ನಿರಾತಂಕವಾಗಿ ರೋಗಿಗಳ ಉಪಚಾರ ಮಾಡಲಾದೀತಾ ? ವೈದ್ಯರು ಮೇಲೆ ನಿಯಂತ್ರಣ ಸೇರೋ ಸರ್ಕಾರ ಅವರು ಕಾಲೇಜು ಫೀಸ್ ನ ನಿಯಂತ್ರಿಸಲಿ.ಎಲ್ಲಕ್ಕೂ ಅಪವಾದ ಇರುವಂತೆ ಹೆಚ್ಚು ಹಣ ವಸೂಲಿ ಮಾಡೋ ವೈದ್ಯರೂ ಇಲ್ಲ ಅಂತ ಇಲ್ಲ.ಆದರೂ ಅವರದು ಒಂದು ಜೀವ ಉಳಿಸುವ ನಿಟ್ಟಿನಲ್ಲಿ ಹೆಣಗೋ ಸೇವೆ ಎಂಬುದು ಗಮನದಲ್ಲಿರಲಿ.ನಿಮಗೆ ಖಾಸಗಿ ವೈದ್ಯ ರೆ ಸೇವೆ ಬೇಡವಾದರೆ ಸರ್ಕಾರೀ ವೈದ್ಯರನ್ನು ಭೇಟಿಯಾಗಿ. ಆದರೆ ಈ ಥರ ಬೇಜವಾಬ್ದಾರಿ, ಗೌರವಹೀನ ಮಾತು ಗಳನ್ನಾಡುವುದು ಸರ್ವಥಾ ಸಲ್ಲ. ಆಟೋ ಚಾಲಕನ ಮೇಲೆ ನಿಯಂತ್ರಣ ಹೇರುವುದು,ವೈದ್ಯರ ಸೇವೆಯ ಮೇಲೆ ನಿಯಂತ್ರಣ ಹೇರುವುದು ಒಂದೇಯೋ ಹೇಗೆ ಅಂತ ಯೋಚಿಸಿ ಹೇಳಿ.
I am sorry ,I have to disagree here Madam . I have experienced how Dr in Private hospitals work. everything is percentage business. 45 lacks for 1.5 months hospital stay ? (Even after that patient did not survive). Do you think India can afford such high cost of medical services ?. I support government here .. There has to be regulation
The notorious Congress party has thrown another dice in the form of this act just in time for the elections and those with the liberal, welfare mentality and suffering from foot in mouth disorder are blindly supporting it as they usually do…
Of course the medical practice needs a well structured framework, some rather strict guidelines, a code of ethical conduct on the practitioners’ side, but generally demonizing them citing some bad ones is just foolish.
If the govt. really cared for public health they would rather focus on establishing a well maintained, staffed and equipped hospitals for every 1 lakh of population and regulate them well. If this happens most people wouldn’t even visit the private hospitals and that would automatically control them…
A good govt. should have a vision and work from bottom up, not top-down..