ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಟವೇ ಮುಗಿದಿತ್ತು..

– ಎಚ್.ಆರ್. ನವೀನ್ ಕುಮಾರ್

—-

ಆಟವೇ ಮುಗಿದಿತ್ತು

ಆಕಾಶದಿಂದ ಆಟಿಕೆಗಳು ಬೀಳುತ್ತಿವೆ ಎಂದು ನೋಡುವಷ್ಟರಲ್ಲಿ

ಆಡಲು ಕೈ ಕಾಲುಗಳಿಲ್ಲ

ಮೈದಾನವೆಲ್ಲ ಹೆಣದ ರಾಶಿ

ನಿನ್ನೆ ಆಡಲು ಬಂದವರು ಇಂದು ಯಾರೂ ಕಾಣುತ್ತಿಲ್ಲ.

ಇದ್ದಕ್ಕಿದ್ದಂತೆ ಬಂದೆರಗಿದ ಆ ಸದ್ದು, ಬೆಳಕು ಏನೆಂದು ನೋಡುವಷ್ಟರಲ್ಲಿ

ಎಲ್ಲವೂ ಬೂದಿ

ನಿಮ್ಮ ಮನೆಯ ಮಕ್ಕಳು ಆಟವಾಡುವುದನ್ನೊಮ್ಮೆ ನೆನೆಯಿರಿ

ನೀವು ಮಕ್ಕಳಾಗಿದ್ದಾಗ ಆಡಿದ್ದನ್ನೂ ಒಮ್ಮೆ ನೆನೆಯಿರಿ

ನಿಮಗಿಲ್ಲದ ಶಿಕ್ಷೆ‌ ನಮಗೇಕೆ

ನಾವು ಮಾಡಿದ ತಪ್ಪಾದರೂ ಏನು

ಈ ಭೂಮಿಯಲ್ಲಿ ತಪ್ಪಾಗಿ ಹುಟ್ಟಿದೆವಾ

ನಮ್ಮನ್ನು ಶಾಶ್ವತವಾಗಿ ಮಲಗಿಸಿ ನೀವು ಸಾಧಿಸುವುದಾದರೂ ಏನನ್ನ

ನಾವಿಲ್ಲದ, ಸಾವೇ ತುಂಬಿರುವ ಸಮಾಜದಲ್ಲಿ ನಿಮ್ಮ ದರ್ಬಾರು ಜೋರಾಗಿ ನಡೆಯಲ್ಲಿ

ಬಿದ್ದ ಗೋಡೆಗಳಿಗೆ, ಕರುಕಲಾದ ವಾಹನಗಳಿಗೆ ನಿಮ್ಮ ರಾಜಕೀಯ ಧ್ವೇಶದ ಆದೇಶವನ್ನು ನೀಡಿ ಬೋಪರಾಕ್ ಹಾಕಿಸಿಕೊಳ್ಳಿ.

‍ಲೇಖಕರು avadhi

11 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading