ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಗಾಗ ನನ್ನ ಕೆನ್ನೆ ಸವರುವ ನಿನ್ನ ರೆಪ್ಪೆಗಳು…

11031089_1127421377272194_5178096277984158598_n

ರೇಣುಕಾ ನಿಡಗುಂದಿ

ನಿನ್ನ ಕಣ್ಣಿನ ಮಿಂಚನ್ನು
ಎಳೆಎಳೆಯಾಗಿ ಹಿಂಜಿ 2
ಹೊಳಪಿನ ಒಂದು ದುಪ್ಪಟಿಯನ್ನು ನೂತಿದ್ದರೆ ಇವತ್ತಿನ ರಾತ್ರಿ ಅದನ್ನೇ ಹೊದ್ದಿರುತ್ತಿದ್ದೆ….

ದುಂಡಗಿನ ಪುಟ್ಟ

ಕೊಳವೆಬಾವಿಯೊಳಗೆ ಇಳಿಯುವಂತೆ ಸರಸರನೆ ಜಾರಿ
ಮಿರಮಿರನೇ ಹೊಳೆಯುವ ಪುಟ್ಟಪುಟ್ಟ ಮೀನುಗಳನ್ನೆಲ್ಲ ಬಾಚಿಕೊಳ್ಳುತ್ತಿದ್ದೆ….

ಆಗಾಗ ನನ್ನ ಕೆನ್ನೆ ಸವರುವ
ನಿನ್ನ ರೆಪ್ಪೆಗಳು ಸಮುದ್ರದ ಅಲೆಗಳಂತೆ
ಬರಸೆಳೆದುಕೊಂಡಾಗೆಲ್ಲ ನಾನೊಂದು
ನೀಲಿ ಮೀನಂತೆ ಆಕಾಶದ ತುಂಬೆಲ್ಲ
ಈಜಾಡುತ್ತಿರುತ್ತಿದ್ದೆ……

‍ಲೇಖಕರು Admin

1 January, 2016

4 Comments

  1. sangeetha raviraj

    ಕವಿತೆ ತುಂಬಾ ಚೆನ್ನಾಗಿದೆ ಹೊಸ ವರುಷದ ಶುಭಾಶಯಗಳು

  2. prajna

    wow! very nicely written. superb Renuka

  3. ಚೈತ್ರಿಕಾ

    ನೈಸ್…

  4. Rekha Gowda

    Awesome <3

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading