ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಗವರು ಬಂದರು.. ಠಕ್ ಠಿಕ್ ಠಕ್ ಠಿಕ್

ಕಿತ್ತಲೆಯ ಕಳವಳ

B Suresh                                                                                                      ಬಿ. ಸುರೇಶ

ಆಟಕ್ಕೆ ಸಿದ್ಧವಿದ್ದೆವು.
ಕೈಯಲ್ಲಿ ಅಮ್ಮನಿತ್ತ ಕಿತ್ತಳೆ ಇತ್ತು.
ಅಡಗಿ ತಿನ್ನಲು ಹಣ್ಣು
ತಾಣ ಹುಡುಕುತ್ತಿತ್ತು ಎಳೆಗಣ್ಣು.

childಆಗವರು ಬಂದರು…
ಠಕ್ ಠಿಕ್ ಠಕ್ ಠಿಕ್
ಬೂಟುಗಾಲಿನ ನಾದದವರು.
ಕಲ್ಲಂಗಡಿಯ ಸಮವಸ್ತ್ರ ತೊಟ್ಟವರು.
ಸಾಲು ಸಾಲು ದೈತ್ಯರು.
ಕೈಯಲ್ಲಿ ಫರಂಗಿ ಗನ್ನು
ಸಿಟ್ಟು ತುಂಬಿದ ಕೆಂಗಣ್ಣು
ಸಿಡಿದಿತ್ತು ಶತಮಾನಗಳ ಹಳೆಯ ಹುಣ್ಣು.

ನೋಡುತ್ತಿದ್ದ ಬೆರಗುಗಣ್ಣು
ಬಿದ್ದಿತ್ತು ಬುಡಕಡಿದ ಬಾಳೆಯ ಹಾಗೆ
ಆಟಗಳೆಲ್ಲ ಇನ್ನು ಮುಗಿದ ಹಾಗೆ.

ಮಗುವಿನ ಕೈಯಲ್ಲಿದ್ದ
ಕಿತ್ತಳೆ ಕೇಳಿತ್ತು…
“ಇನ್ನು ನನ್ನ ಚರ್ಮಕ್ಕೆ
ಅಂಟಿದ ನೆತ್ತರು
ಒರೆಸಲು ತರುವವರಾರು
ಅರೇಬಿಯಾದ ಅತ್ತರು?”
ಕಾಶ್ಮೀರದಲ್ಲಿ ಹೆಣವಾದ ಪುಟ್ಟ ಕಂದಮ್ನನ ಪೋಟೊ ನೋಡಿ, ರಘು ಅಪಾರ ನೀಡಿದ ಪದಗಳನ್ನು ಬಳಸಿ.

‍ಲೇಖಕರು admin

3 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading