ಆಕೆ ಎಲೆನಾಳನ್ನು ಹುಡುಕಿಕೊಂಡು ಹೊರಟಳು

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ.

ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ.

। ಕಳೆದ ವಾರದಿಂದ ।

“ಡಿಸೆಂಬರ್ 1936, ಸ್ಪೇನಿನವರು ಅರಾಜಕತೆ ಮುಗಿಲುಮುಟ್ಟಿತ್ತು. ಕತಲೂನ್ಯಾದ ವರ್ಕಿಂಗ್ ಕ್ಲಾಸ್ ಸುತ್ತಿಗೆ, ಕತ್ತಿಗಳನ್ನ ಹಿಡಿದುಕೊಂಡು ಓಡಾಡುತ್ತಿದ್ದರು, ಎಲ್ಲಾ ಅಂಗಡಿಗಳ ಮೇಲೂ “ಇದು ಸ್ಪೇನ್, ಇದು ಸ್ಪೇನಿನವರ ಕೊಡುಗೆ” ಎಂದು ಬೇಕೂ ಅಂತ ಬರೆಸಿದ್ದರು.

ಪ್ರಾಯಶಃ ಹೊಸದಾಗಿ ಬಂದ ಜನಕ್ಕೆ ಇಲ್ಲಿ ಯಾರ ಆಡಳಿತ ಇದೆ ಎಂದು ತಿಳಿಯಲು ಹೀಗೆ ಮಾಡಿದ್ದರೋ ಏನೋ ಗೊತ್ತಿಲ್ಲ, ಆದರೆ ಹೊಸದಾಗಿ ಬಾರ್ಸಾಗೆ ಬಂದಿಳಿದವರಿಗೆ ಇದು ಸ್ಪೇನ್ ಎಂದು ಮನಮುಟ್ಟುವಂತೆ ತಿಳಿಸುತ್ತಿದ್ದರು. ಸ್ಪೇನಿನಿಂದ ಬಂದ ವರ್ಕಿಂಗ್ ಕ್ಲಾಸ್ ಟಿಪ್ಸ್ ನ ಎಲ್ಲೂ ಮುಟ್ಟುತ್ತಿರಲ್ಲಿಲ್ಲ. ಅಂದರೆ ಅಷ್ಟು ಸಹಾಯ ಸರ್ಕಾರ ಮಾಡುತ್ತಿತ್ತು, ಎಲ್ಲಾ ಕಡೆ ಲೆನಿನ್ ಬರಾಕ್ಸ್ ಹಾಕಿ ತಮ್ಮ ದರ್ಪವನ್ನು ಮೆರೆಯುತ್ತಿದ್ದರು.

ಅವತ್ತು ನಾನು ಬಂದು ಇಳಿದಾಗ ಇಂಥದನ್ನೆಲ್ಲಾ ನೋಡಿ ನನ್ನ ಕಣ್ಣುಗಳು ತುಂಬಿದವು. ನನಗೆ ಯಾವುದೋ ಜೈಲಿಗೆ ಬಂದಂತಹ ಅನುಭವ ಆಯಿತು, ಕತಲನ್ನ ಕಣ್ಣಿನಲ್ಲಿ ಶರಣಾಗುವ ಲಕ್ಷಣ ಕಾಣಲೇ ಇಲ್ಲ. ಬಹಳ ಉತ್ಸುಕರಾಗಿ ಯುದ್ಧ ಮಾಡಲು ಹೊರಟಿದ್ದಾರೆ” ಎಂದು ಮೊದಲ ಅಧ್ಯಾಯದಲ್ಲಿ ಜಾರ್ಜ್ ಆರ್ವೆಲ್ ಹೋಮೇಜ್ ಟು ಕತಲೂನ್ಯ ಪುಸ್ತಕದಲ್ಲಿ ಬರೆದಿದ್ದಾರೆ.

ಹುಡುಗಿ ಮೊದಲ ದಿವಸ ಬಾರ್ಸಾಗೆ ಬಂದಾಗ ಆದ ಅನುಭವಗಳು ಇದಕ್ಕಿಂತ ಭಿನ್ನವಾಗಿದ್ದವು. 2016ರಲ್ಲಿ ಹುಡುಗಿ ಬಂದಿಳಿದ ಎಲ್ ಪ್ರಾಟ್ ಏರ್ಪೋರ್ಟ್ ಬಹಳ ಭಿನ್ನವಾಗಿತ್ತು. ಗ್ಲೋಬಲೈಸೇಶನ್ ಪರಿಣಾಮವಾಗಿ ಸ್ಪ್ಯಾನಿಷ್ ಮತ್ತು ಕತಲಾನ್ ಭಾಷೆಗಿಂತ ಬರಿ ಇಂಗ್ಲೀಷ್ ರಾರಾಜಿಸುತ್ತಿತ್ತು.

ವಿಮಾನ ನಿಲ್ದಾಣದ ಹತ್ತಿರ ಕತಲೂನ್ಯಾ ಹೋರಾಟದ ಸಣ್ಣ ಸುಳಿವು ಸಹ ಇರಲ್ಲಿಲ್ಲ. ಸುತ್ತಿಗೆ, ಕತ್ತಿ ಹಿಡಿದು ಯಾರೂ ತಿರುಗಾಡುತ್ತಿರಲ್ಲಿಲ್ಲ, ಟಿಪ್ಸ್ ಕೊಡಲೇಬೇಕೆಂದು ಅಲ್ಲಿನ ಕೆಫೆಟೇರಿಯಾದಲ್ಲಿ ತಾಕೀತು ಮಾಡಿದ್ದರು. ಆಟೋದವರ ಹತ್ತಿರ ಒನ್ನಂಡಾಫ್ ಎಂದು ಗಲಾಟೆ ಮಾಡುತ್ತಿದ್ದ ಹುಡುಗಿ ತೆಪ್ಪಗೆ ಅಲ್ಲಿ ಬಿಲ್ಲಿನ ಸ್ವಲ್ಪ ಪರ್ಸಂಟೇಜನ್ನು ಅಲ್ಲಿಡುವಾಗ ಹೊಟ್ಟೆಯೆಲ್ಲಾ ಉರಿಯುತ್ತಿತ್ತು.

ಒಂದೊಂದು ಯುರೋವನ್ನು 70ರಿಂದ ಗುಣಿಸಿ “ಅಯ್ಯೋ ಏನು ಮಾಡೋದು ಕಾಫಿಗೆ ಇಷ್ಟಾಯಿತು, ಅದರ ಜೊತೆ ಇದು ಬೇರೆ” ಎಂದು ಗೋಳಾಡುವ ಇಂಡಿಯನ್ನರ ಪೈಕಿ ಹುಡುಗಿಯೂ ಒಬ್ಬಳಾಗಿದ್ದಳು. ಹೀಗೆ ತಾನು ಬಂದ ಮೊದಲ ದಿವಸವನ್ನು ನೆನಪಿಸಿಕೊಂಡು ತನಗಿರುವ ಸ್ವಾತಂತ್ರ್ಯದ ಬಗ್ಗೆ ಹೆಮ್ಮೆ ಪಟ್ಟಳು. ಆದರೆ ಆರ್ವೆಲ್ ಬರೆದ ಯುದ್ಧ ಮಾಡುವ ಹುಮ್ಮಸ್ಸಿನಲ್ಲಿ ಇರುವ ಕಣ್ಣುಗಳನ್ನು ಇಲ್ಲಿಯೂ ನೋಡಿದ್ದಳು.

ತೀರ 21-22 ವರ್ಷದ ಹುಡುಗ ಹುಡುಗಿಯರು ಹಾಗೇ ಇದ್ದರು. ಎಲೆನಾ ಹುಡುಗಿಗಿಂತ ಚಿಕ್ಕವಳಾದರೂ ಅವಳಲ್ಲಿ ಆ ಹುಮ್ಮಸ್ಸಿತ್ತು. ತಾನು ಮಿಲಿಟರಿಗೆ ಸೇರುವ ಆಸೆಯೂ ಇದೆ ಎಂದು ಹೇಳಿದಾಗ ಸಹಜವಾಗಿಯೇ ಆಶ್ಚರ್ಯಚಕಿತಳಾದಳು. ಹಾಗೆಯೇ ಮುಂದೆ ಹೋಗಿ ಎರಡನೇ ಅಧ್ಯಾಯಕ್ಕೆ ಹೋದಾಗ. ಅರಗಾನಿನಲ್ಲಿ ಆರ್ವೆಲ್ ಇದ್ದ ಕ್ಷಣಗಳನ್ನು ಬರೆದಿದ್ದ.

ಅಲ್ಲಿ ಆತನಿಗೆ ಪ್ರತಿ ಮನೆಯ ಮುಂದೆ ಫ್ಯಾಸಿಸ್ಟ್ಗಳೇ ಇಲ್ಲಿಂದ ತೊಲಗಿ ಎಂದು ಬರೆದ್ದದ್ದು ಅವನಿಗೆ ಈ ಊರಿನ ಚಿತ್ರಣ ಸರಿಯಾಗಿ ಸಿಕ್ಕಿತು ಎಂದು ಬರೆದಿದ್ದ. ಒಂದರೆಕ್ಷಣದಲ್ಲಿ ಒಂದು ಬುಲೆಟ್ ಸಹ ಅವನಿಗೆ ಹೊಡೆಯದೇ ಮಿಸ್ ಆಯಿತು. ಅಂದರೆ ಆಗಲೂ ರಸ್ತೆಯಲ್ಲಿ ಮಿಲಿಟರಿಯವರು ಗಸ್ತು ತಿರುಗುತ್ತಿದ್ದರು ಸಿಕ್ಕಾಪಟ್ಟೆ ಕಾಟವನ್ನೂ ಕೊಡುತ್ತಿದ್ದರು ಎಂಬುದನ್ನು ವಿಸ್ತಾರವಾಗಿ ಆರ್ವೆಲ್ ಬರೆದಿದ್ದಾನೆ.

ತನಗೆ ಗುಂಡು ಹೊಡೆದಾಗ ಆತನಿಗೆ ಆದ ಅನುಭವವನ್ನು ಹೀಗೆ ಬರೆದಿದ್ದಾನೆ “Everything was very blurry. There must have been about two minutes during which I assumed that I was killed. And that too was interesting—I mean it is interesting to know what your thoughts would be at such a time. My first thought, conventionally enough, was for my wife.

My second was a violent resentment at having to leave this world which, when all is said and done, suits me so well. I had time to feel this very vividly. The stupid mischance infuriated me. The meaninglessness of it! To be bumped off, not even in battle, but in this stale comer of the trenches, thanks to a moment’s carelessness!

I thought, too, of the man who had shot me—wondered what he was like, whether he was a Spaniard or a foreigner, whether he knew he had got me, and so forth. I could not feel any resentment against him. I reflected that as he was a Fascist I would have killed him if I could, but that if he had been taken prisoner and brought before me at this moment I would merely have congratulated him on his good shooting. It may be, though, that if you were really dying your thoughts would be quite different.”

ಅಂದರೆ 1936ಕ್ಕೂ 2016ಕ್ಕೂ ಯಾವುದೇ ವ್ಯತ್ಯಾಸವಿಲ್ಲ ಅನ್ನುವ ಹಾಗಾಯಿತು. ಅಷ್ಟು ವರ್ಷವಾದರೂ ಇನ್ನೂ ಈ ಹುಚ್ಚಿನಿಂದ ಈ ದೇಶ ಆಚೆಯೇ ಬಂದಿಲ್ಲ ಎಂಬುದನ್ನು ಅರಿತು ಹುಡುಗಿಗೆ ದಿಗಿಲಾಯಿತು. ಅರೆ ಇದು ಬದಲಾಗದಿರುವ ಕಥೆಯಾ ಎಂದು.

ಆರ್ವೆಲ್ಲಿನ ಬರಹದಲ್ಲಿ ಏನೋ ಹೊಳಹು ಸಿಕ್ಕಿತೆಂದು ಸಂತೋಷದಿಂದ ಹುಡುಗಿ ಓದುತ್ತಿದ್ದಾಗಲೇ ಮೂರನೇ ಅಧ್ಯಾಯದಲ್ಲಿ ಸ್ಪೇನಿನ ಮಿಲಿಟರಿಯನ್ನು ಹಿಗ್ಗಾಮಗ್ಗಾ ಹೊಗಳೋದಕ್ಕೆ ಶುರು ಮಾಡಿದಾಗ ಹುಡುಗಿಗೆ ಒಂದರೆಕ್ಷಣ ಇರುಸುಮುರುಸಾಯಿತು. ಈ ಮನುಷ್ಯ ಯಾರ ಕಡೆ, ಸುಮ್ಮನೆ ಹೋಮೇಜ್ ಎಂದು ಬರೆದು ಇದಕ್ಕೆ ತಿಥಿ ಮಾಡುತ್ತಿದ್ದಾನಾ ಎಂದು ಕೋಪದಿಂದಲೇ ಓದುತ್ತಿದ್ದಳು.

ಸ್ಪೇನಿನ ಸೈನ್ಯದವರು ಅತ್ಯಂತ ಶಿಸ್ತಿನವರು , ಇದರಲ್ಲಿ ಗಂಡು ಹೆಣ್ಣು ಎಂಬ ಬೇಧವಿಲ್ಲದೇ ತಮ್ಮ ನೆಲಕ್ಕಾಗಿ ಹೋರಾಡಿದ್ದಾರೆ ಎಂದು ಬರೆದು ಅವರು ಫ್ಯಾಸಿಸ್ಟ್ ಆದರೂ ಹೋರಾಟದಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ನೀಡಿದ್ದಾರೆ. ಹೆಣ್ಣುಮಕ್ಕಳು ಎರಡು ಪಾರ್ಟಿಗಳಲ್ಲೂ ಅಂದರೆ ಸ್ಪೇನಿನವರಲ್ಲೂ ಕತಲೂನ್ಯದ ಹೋರಾಟದಲ್ಲಿ ತುಂಬಾ ಶಿಸ್ತುಬದ್ಧವಾಗಿ ನಡೆದುಕೊಂಡಿದ್ದಾರೆ.

ಹೆಣ್ಣುಮಕ್ಕಳು ಹೋರಾಟಗಳಲ್ಲಿ ಅದೆಷ್ಟು ತೊಡಗಿಸಿಕೊಳ್ಳುತ್ತಾರೋ ಅಷ್ಟು ಹೊಸ ವಿಚಾರಗಳು , ಬೇರೆ ಬೇರೆ ಅನುಭವಗಳಾಗುತ್ತದೆ ಎಂದು ನಂಬಿದ್ದೇನೆ ಅದಕ್ಕೆ ಈ ಫ್ಯಾಸಿಸ್ಟ್ ಸರ್ಕಾರಕ್ಕೆ ಇಷ್ಟು ಬಲ ಬಂದಿದೆ ಎಂದು ಬರೆದಾಗ ಹುಡುಗಿಗೆ ಆಶ್ಚರ್ಯವಾಯಿತು. ಆಗಲೂ ಹೆಣ್ಣುಮಕ್ಕಳ ಈಕ್ವಲ್ ಪಾರ್ಟಿಸಿಪೇಷನ್ ಅವರನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗಿದೆ ಎಂದು ನಕ್ಕಳು.

ಎಲೆನಾ ಈ ದೇಶದ ಮುಂದಿನ ಅಧ್ಯಕ್ಷೆ ಆಗುತ್ತಾಳೆ ಎಂಬ ಅಪಾರ ನಂಬಿಕೆ ಹುಡುಗಿಗೆ ಇತ್ತು. ಇಲ್ಲೇ ಪಿ ಎಚ್ ಡಿ ಮಾಡುವ ಎಷ್ಟೋ ಹೆಣ್ಣುಮಕ್ಕಳು ಅಮೇರಿಕಾಗೆ ಮೈಗ್ರೇಟ್ ಆಗುವುದಿಲ್ಲ ಎಂದು ಪಣ ತೊಟ್ಟಿದ್ದರು . ಹೀಗೆ ಹೆಣ್ಣುಮಕ್ಕಳು ಬಹಳ ದೊಡ್ದ ಸ್ಟ್ಯಾಂಡ್ ತೆಗೆದುಕೊಂಡು ಅಲ್ಲಿ ನೆಲೆ ನಿಂತಿದ್ದರಿಂದ ಈ ಮೂವ್ಮೆಂಟ್ ಬಹಳ ಸ್ಟ್ರಾಂಗಾಗಿದೆ ಎಂದು ಹುಡುಗಿ ಅರಿತಿದ್ದಳು.

ಅರ್ವೆಲ್ ಒಮ್ಮೊಮ್ಮೆ ಕತಲನ್ನರಿಗೆ ಸಪೋರ್ಟಾಗಿ, ಇನ್ನು ಕೆಲವೊಮ್ಮೆ ಸ್ಪೇನಿನವರ ದಬ್ಬಾಳಿಗೆಯನ್ನು ಒಂದು ವಿಲಕ್ಷಣ ನೋಟದಿಂದ ನೋಡುತ್ತಾ ಮತ್ತೆ ತಾನು ಹೊರಗಿನವನು ಎಂದು ಆಗಾಗ ಸಾರುತ್ತಾ ತನ್ನ ಪುಸ್ತಕದಲ್ಲಿ ಟಿಪ್ಪಣಿ ಬರೆದುಕೊಂಡಿದ್ದ. ಹಾಗೆ ನೋಡಿದರೆ ಆರ್ವೆಲ್ ಎಲ್ಲಾ ವಿಷಯಗಳ ಬಗ್ಗೆ ತುಲನೆ ಮಾಡಿಯೇ ಬರೆದಿದ್ದ.

ಈ ಜಗಳ ದಲ್ಲಿ ಚರ್ಚುಗಳು ಪಾಪ ಮಧ್ಯ ಸಿಕ್ಕಿಹಾಕಿಕೊಂಡಿದ್ದವು ಎಂದು ವಿಸ್ತಾರವಾಗಿ 4 ಮತ್ತು 5ನೇ ಅಧ್ಯಾಯದಲ್ಲಿ ಬರೆದು, “ಒಂದೇ ದೇವರನ್ನ ಪೂಜಿಸುವ ಆರಾಧಿಸುವ ಒಂದೇ ಧರ್ಮದವರು ತಮ್ಮ ದೇವರು ವೈರುಧ್ಯಗಳನ್ನ ಒಪ್ಪಿಕೊಂಡಿದ್ದಾನೆ ಎಂದು ತಮ್ಮ ತಮ್ಮ ಚರ್ಚುಗಳಲ್ಲಿ ಘಂಟಾಘೋಷವಾಗಿ ಹೇಳಿದರು.

ಅಂದರೆ ಒಂದೇ ದೇವರು ಇಬ್ಬರ ಹೋರಾಟವನ್ನು ಮಾನ್ಯ ಮಾಡಿದ್ದಾನೆ ಎಂಬರ್ಥದಲ್ಲಿ ಪ್ರಾರ್ಥನಾ ಸಭೆಯಲ್ಲಿ ತಿಳಿಸುತ್ತಿದ್ದರು” ಎಂದು ಆರ್ವೆಲ್ ಬರೆಯುವಾಗ ಆತ ಅದೆಷ್ಟು ಸ್ತೂಲವಾಗಿ ಈ ದೇಶವನ್ನ ಅಧ್ಯಯನ ಮಾಡಿದ್ದಾನೆ ಎಂದು ಅರಿವಾಗುತ್ತದೆ.

115 ದಿವಸಗಳ ಕಾಲ ಯುದ್ಧಭೂಮಿಯಲ್ಲಿ ಆತ ಕಳೆದ ದಿವಸಗಳನ್ನು ಮೆಲುಕು ಹಾಕಿದ್ದಾನೆ. ಅಂದರೆ ತನ್ನನ್ನು ಡೆಪ್ಯೂಟ್ ಮಾಡಿದ್ದೇ ಯಾವುದೋ ಕೆಲಸಕ್ಕೆ ಆದರೆ ಸರ್ವಾಧಿಕಾರವನ್ನ ಮಣಿಸುವ ಮನಸ್ಸು ಅವನಲ್ಲಿ ಬಂದಿರುತ್ತದೆ. ಈತ ಬಾರ್ಸಾ ಬಿಡುವ ಹೊತ್ತಿಗೆ ಪ್ರಜಾಫ್ರಭುತ್ವವೇ ಶ್ರೇಷ್ಟ ಎಂದು ಹೇಳುವ ಮಟ್ಟಕ್ಕೆ ಅವನ ಅಭಿಪ್ರಾಯ ಬದಲಾಗಿತ್ತು.

ಹೀಗೆ ಹೋಮೇಜ್ ಟು ಕತಲೂನ್ಯ ಒಬ್ಬ ಹೊರಗಿನವನು ಕೊಡುವ ಎಲ್ಲಾ ಅಭಿಪ್ರಾಯಗಳನ್ನ ಕೊಟ್ಟು ಒಂದು ಮಟ್ಟಕ್ಕೆ ಈ ಹೋರಾಟವನ್ನು ಬಹಳವಾಗಿ ಸಮರ್ಥಿಸಿಕೊಂಡಿದ್ದ. ಹುಡುಗಿ ಎಲೆನಾಳನ್ನು ಹುಡುಕಿಕೊಂಡು ಹೊರಟಳು, ಅವಳ ಊರಿನ ಬಗ್ಗೆ ಬರೆದಿದ್ದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವಳು ಪಟ್ಟ ಕಷ್ಟವನ್ನ ಪ್ರಶಂಸೆ ಮಾಡಿ ಥ್ಯಾಂಕ್ಸ್ ಹೇಳಬೇಕೆಂದು ಹೊರಟರೆ, ಅಲ್ಲಿ ಕಂಡಿದ್ದೇ ಬೇರೆ ವಿಷಯ..

|ಮುಂದಿನ ಸಂಚಿಕೆಯಲ್ಲಿ|

November 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: