ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಕಾಶ ಮತ್ತು ಭೂಮಿ ಭೇಟಿಯಾಗುವುದೆಂದರೆ..

ಆಕಾಶ ಮತ್ತು ಭೂಮಿ ಭೇಟಿಯಾಗುವುದೆಂದರೆ

ಬೀರು ದೇವರಮನಿ

ಭೂಮಿಯೊಂದಿರದಿದ್ದರೆ ಮನುಷ್ಯ ಕೂಡ ಸಾಯುತ್ತಿರಲಿಲ್ಲ

ಅವನನ್ನು ಹೂತಿಡಲು ಚೂರು ಜಾಗವೂ ಇರುತ್ತಿರಲಿಲ್ಲ..
ಅವನ ದೇಹವೊಂದು ಆಕಾಶದಂತೆ..
ಗರಿ ಬಿಚ್ಚಿ ಹಾರುವ ಪಕ್ಷಿಗಳ ಭಾಷೆಯನ್ನು ಸಲೀಸಾಗಿ ಅರ್ಥೈಸಿಕೊಳ್ಳುತ್ತಾನೆ .

ಅವನ ದೇಹ ಹೇಳುತ್ತಿದೆ
ಸ್ವರ್ಗದಿಂದ ಕಳಚಿ ಬಿದ್ದ ಎಲ್ಲ ವಸ್ತುಗಳಿಂದ ಈ ಭೂಮಿಯನ್ನು ಮಾಡಲಾಗಿದೆಯೆಂದು .

ಯಾರೊಬ್ಬರೂ ಅವನತ್ತ ನೋಡುತ್ತಿಲ್ಲ
ಪ್ರಮಾಣಿಕರಿಸುತ್ತಾನೆ ಪದೇ ಪದೇ ಗುರುತ್ವಾಕರ್ಷಣೆಯನ್ನು ಕೆಣಕಿ, ಧಿಕ್ಕರಿಸುತ್ತಾನೆ.
ಏನೂ ನಿರೂಪಿಸಲಾಗದಾಗ ತೆಪ್ಪಗೆ ಮನೆ ಕಡೆ ಹೊರಡುತ್ತಾನೆ .

ವ್ಯಕ್ತಿಯೊಬ್ಬ ಆಕಾಶವನ್ನು ತಲುಪಲಾರ
ಅಲ್ಲಿಂದ ಬೀಳುವ ಅನುಭವವನ್ನು ಅನುಭವಿಸಲಾರ…
ಇತ್ತ ಹಕ್ಕಿಗಳೆಲ್ಲವೂ ಕೂಡಿಕೊಂಡು ವಿಮಾನದ ಗಮ್ಯ ಹಾರಾಟದ ಕುರಿತು ನಿಬ್ಬೆರಗಿನಿಂದ ಮಾತನಾಡುತ್ತವೆ .

ಕೂಲಿಕಾರನೊಬ್ಬ ಕೋಣನಂತೆ ಹೊಲದಲ್ಲಿ ದುಡಿಯುವಂತೆ…
ಹಸುಗಳೆಲ್ಲವೂ ಸೇರಿಕೊಂಡು ಹಚ್ಚ ಹಸಿರಿನ ಹುಲ್ಲನ್ನು ತಿಂದು
ಕಸಾಯಿಕಾನೆಯಲ್ಲಿ ಕನಸು ಕಂಡಂತೆ .

ವ್ಯಕ್ತಿಯೊಬ್ಬ ವಿಮಾನದ ಹಾರಾಟದ ಕುರಿತು ಮಾತನಾಡಲಾರ
ಯಾಕೆಂದರೆ ಇಡೀ ನೆಲವೇ ದೇಹವನ್ನು ಹೊದಿಸಿರುವಾಗ ಆಕಾಶ ಕೂಡ ಇಲ್ಲವಾಗುತ್ತದೆ

ಈಗ ಆಗಸವೆಲ್ಲ ಖಾಲಿ ಖಾಲಿ… ಹಕ್ಕಿಗಳಿಲ್ಲದಂತೆ .
ಈ ಪವಿತ್ರ ಭೂಮಿಯನ್ನು ವಿಧ ವಿಧ ಹೂವುಗಳಿಂದ ಹೊದಿಸಲಾಗಿದೆ.

‍ಲೇಖಕರು avadhi

1 June, 2018

1 Comment

  1. Raju hegde

    ಉಹುಂ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading