ಆಕಾಶ್‌ ಆರ್‌ ಎಸ್‌ ನೋಡಿದ ‘ಜನ ಗಣ ಮನ’

ರಾಜಕೀಯ ಮತ್ತು ಪೊಲೀಸ್‌ ವ್ಯವಸ್ಥೆಯ ಚದುರಂದಾಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸಿನಿಮಾ

ಆಕಾಶ್‌ ಆರ್‌ ಎಸ್‌

ಸಿನಿಮಾ  ಜನರ ಮೇಲೆ ಪ್ರಭಾವ ಬೀರಿವಷ್ಟು ಯಾವ ಮಾಧ್ಯಮವು ಬೀರಲಾರದು.  ಸಿನಿಮಾ ಒಂದು ಬೃಹತ್‌ ಮಾಧ್ಯಮ ನಮ್ಮ ಆಲೋಚನೆಯನ್ನು ಹಾಗೂ  ಸಂದೇಶವನ್ನು ಸಮಾಜಕ್ಕೆ ತಿಳಿಸಲು ಮನುಷ್ಯನಿಗೆ ಸಿನಿಮಾಗಿಂತ ದೊಡ್ಡ ಕ್ಯಾನ್ವಸ್‌ ಮತ್ತೊಂದು ಇಲ್ಲ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದ ಚಿತ್ರರಂಗಗಳಾದ ತಮಿಳು, ತೆಲುಗು ಹಾಗೂ ಮಲೆಯಾಳಂ ಚಿತ್ರರಂಗಳು ದಿನೇ ದಿನೇ ಸಮಾಜದಲ್ಲಿ ಡೊಂಕನ್ನು ತಿದ್ದುವಲ್ಲಿ  ದಾಪು ಕಾಲು ಇಡುತ್ತಿದೆ.

ತಮಿಳಿನ ವಾಡಚನ್ನೈ, ಮದ್ರಾಸ್‌, ಜೈ ಭೀಮ್‌, ತೆಲುಗಿನ ಕಲರ್‌ ಪೋಟೋ,  ಮಲೆಯಾಳಂ ನ ನಾಯಟ್ಟು ಇಂತಹ ಸಿನಿಮಾಗಳ ಮೂಲಕ ಜನರನ್ನು ಎಚ್ಚರಿಸುವಂತ ಕೆಲಸ ಮಾಡುತ್ತಿದೆ.  ಇದು ಮುಂದುವರೆದಿದ್ದು ಮಲೆಯಾಳಂ ಚಿತ್ರರಂಗ  ಮತ್ತೊಂದು ಹೆಜ್ಜೆ ಮುಂದು ಹೋಗಿದೆ. 

ಇತ್ತೀಚಿಗೆ ತಾನೆ ಓಟಿಟಿಯಲ್ಲಿ ಬಿಡುಗಡೆಯಾದ ಮಲೆಯಾಳಂನ ಜನ ಗಣ ಮನ ಸಿನಿಮಾ ಪ್ರಸ್ತತ ದೇಶದ ರಾಜಕೀಯ ವ್ಯವಸ್ಥೆಯನ್ನು ಎಳೆ ಎಳೆಯಾಗಿ ಪರದೆ ಮೇಲೆ ಬಿಚ್ಚಿಟಿದೆ.  ಸಮಾಜದಲ್ಲಿನ ವ್ಯವಸ್ಥೆಯ ವಿರುದ್ದ ಪ್ರಶ್ನೆ ಮಾಡುತ್ತಾ, ವಿದ್ಯಾರ್ಥಿಗಳು ಶಿಕ್ಷಣ ಮುಖಾಂತ ಸ್ವಾತಂತ್ರ್ಯ ಪಡೆಯಬೇಕು ಎಂದು ಯುವಜನಾಂಗವನ್ನು ಉತ್ತೇಜಸುವ ಸೆಂಟ್ರಲ್‌ ಯೂನಿವರ್ಸಿಟಿಯ ಪ್ರಬಲ ಮತ್ತುಸಾಮಾಜಿಕ ಜವಾಬ್ದಾರಿಯುಳ್ಳ ಪ್ರಾಧ್ಯಾಪಕಿಯ ಹತ್ಯೆಯಾಗುತ್ತಾಳೆ.

ಇಲ್ಲಿಂದ  ಆರಂಭವಾಗುವ ಸಿನಿಮಾ ಕಥೆ ತಮ್ಮ ಪ್ರಾಧ್ಯಾಪಕಿಯ  ಸಾವಿಗೆ  ನ್ಯಾಯವನ್ನು ದೊರಕಿಸುವಲ್ಲಿ ಪತ್ರಿಭಟನೆಗೆ ಮುಂದಾಗುವ ವಿದ್ಯಾರ್ಥಿಗಳ  ಮೇಲೆ ಪೊಲೀಸರು ದಬ್ಬಾಳಿಕೆ ನಡೆಸುತ್ತಾರೆ. ಇಲ್ಲಿಂದ ಕಥೆಯ ತಿರುಳೆ ಬದಲಾಗುತ್ತದೆ.  ಈ ದೃಶ್ಯವನ್ನು ನೋಡುವಾಗ  ಕೆಲವು ವರ್ಷಗಳ ಹಿಂದೆ ನಡೆದ ಜೆಎನ್‌ಯು ಕ್ಯಾಂಪಸ್‌ ಘಟನೆ, ಉತ್ತರ ಪ್ರದೇಶದ ಮನೀಷ ಹತ್ಯೆಯಲ್ಲಿ ಅಲ್ಲಿನ ಪೊಲೀಸ್‌ ವ್ಯವಸ್ಥೆ ತೆಗೆದುಕೊಂಡ ನಿರ್ಧಾರ ಎಲ್ಲವನ್ನು ನೆನಪಿಸುವಂತೆ ಮಾಡುತ್ತದೆ.  ಸರ್ಕಾರದ ನಿಲುವೂಗಳು ಯಾವ ರೀತಿಯದ್ದು, ರಾಜಕೀಯ ಚದುರಂಗದಾಟದಲ್ಲಿ ಪ್ರಜೆಗಳನ್ನು ಯಾವ ದಾಳವಾಗಿ ಬಳಸಲಾಗುತ್ತದೆ  ಎಂಬುದು ತುಂಬಾ ಸೂಕ್ಷ್ಮವಾಗಿ ನಿರ್ದೇಶಕ ಚಿತ್ರಿಸಿದ್ದಾರೆ.

ಅಂತಿಮವಾಗಿ ಕಾನೂನಿನ ಕಟ್ಟಳೆಗೆ ಬರುವ ಈ ಕೇಸನ್ನು ವಕೀಲನಾದ ನಾಯಕ ಪೃಥ್ವಿರಾಜ್‌ ತೆಗೆದುಕೊಳ್ಳುತ್ತಾನೆ. “ ನೂರು ಅಪರಾಧಿಗಳಿಗೆ ಶಿಕ್ಷೆಯಾದರೆ ಪರವಾಗಿಲ್ಲ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು“ ಎಂಬ ನಿಟ್ಟಿನಲ್ಲಿ ಪ್ರಕರಣವನ್ನು ಕೈಗೆ ಎತ್ತಿಕೊಂಡು ಅದರ ದೋಷಗಳನ್ನು ಎಳೆಎಳೆ ಬಿಚ್ಚಿಡುವ ಮೂಲಕ ಅಮಾಯಕ ಯುವಕರಿಗೆ  ನ್ಯಾಯ ಕೊಡಿಸುವಲ್ಲಿ ಮುಂದಾಗುತ್ತಾನೆ.  ನ್ಯಾಯಾಲಯ ಆವರಣದಲ್ಲಿ ಪ್ರಕರಣ ವಿರುದ್ದವಾಗಿ ವಾದ ಮಾಡುತ್ತ,” ಸತ್ಯನ ಕಾಪಾಡೋಕೆ ಇರೊದ ಮಾಧ್ಯಮ ಅಥವಾ ಮಾಧ್ಯಮ ಹೇಳೊದೆಲ್ಲ ಸತ್ಯನಾ?” ಎಂಬ ಪ್ರಶ್ನೆ ಮೂಲಕ ಮಾಧ್ಯಮದ ಘನತೆಯನ್ನ ಪ್ರಶ್ನಿಸುವ  ನಾಯಕ ಪೃಥ್ವಿರಾಜ್‌ ತನ್ನ ಪಾತ್ರದಲ್ಲೆ ಪರಕಾಯ ಪ್ರವೇಶ ಮಾಡಿ ನೋಡುಗರ ಹಿಡಿದಿಟ್ಟುಕೊಳ್ಳುವಲ್ಲಿ  ಗೆದಿದ್ದಾರೆ.

ವ್ಯವಸ್ಥೆಯ ಎದುರಿಸಿ ಪ್ರಶ್ನೆ ಮಾಡಿದರೆ ಬಾಯಿ ಮುಚ್ಚಿಸುವ ರಾಜಕೀಯ, ಬೆರಳು ತೋರಿಸಿ ಮಾತನಾಡಿದರೆ ಕೈಗೆ ಬೇಡಿ ಹಾಕುವಂತ ರಾಜಕೀಯ ನಮ್ಮ ಸಮಾಜದಲ್ಲಿದೆ.  ಆದರೆ ನಮ್ಮನ್ನು  ಎಷ್ಟೇ ಬಾಯಿ ಮುಚ್ಚಿಸಿದರೂ ಯಾವ ಸುರಂಗದಲ್ಲಿ ನಮ್ಮನ್ನು ಕಟ್ಟಾಗಿದರು ಕೂಡ ಅವರ ವಿರುದ್ದ ಪ್ರಶ್ನೆ ಕೇಳುತ್ತಲೇ ಇರುತ್ತೇವೆ. ಯಾಕೆಂದರೆ ಈ ದೇಶ ಯಾರಪ್ಪ ಸ್ವತ್ತಲ್ಲ ಇದು ನಮ್ಮ ದೇಶ.  

ಇದು ರಾಜಕೀಯ ಇಲ್ಲಿ ಗೆಲ್ಲೊದಕ್ಕೆ ಏನು ಬೇಕಾದರೂ ಮಾಡಬಹುದು ಏನಾದರೂ ಅವಶ್ಯಕತೆ ಇದ್ದರೆ ನೋಟು ರದ್ದು ಮಾಡಬೇಕು. ಓಟು ರದ್ದು ಮಾಡಬೇಕು. ಯಾರು ನಮ್ಮನ್ನ ಪ್ರಶ್ನೆ ಮಾಡಲ್ಲ. 

ಒಬ್ಬ ರಾಜಕೀಯ ನಾಯಕನ ತುಂಬಾ ದೊಡ್ಡ ಆಯುಧ ಎಂದರೆ ಅಭಿಮಾನ  ಅದು ಪ್ರಜೆಗಳ ಅಭಿಮಾನ. ಇದೊಂದು ಅಡಿಕ್ಷನ್‌ ಅವರ ಯೋಚನೆಗಳನ್ನ, ಬುದ್ದಿವಂತಿಕೆಗಳನ್ನ ಬದಲಾಯಿಸುವಾಗ ಸಿಗುವ ಮತ್ತಿದೆ ನೋಡು  ಆ ಮತ್ತು ಏನಾದರು ತಲೆಗೆ ಏರಿದರೆ ಕಾರ್ಯಕರ್ತರಾಗುವುದಿಲ್ಲ ಭಕ್ತರಾಗುತ್ತಾರೆ ಎಂಬ ಸಂಭಾಷಣೆ ಮೂಲಕ ವಾಸ್ತವ ಸ್ಥಿತಿಯನ್ನು ತಿಳಿ ಹೇಳಿದ್ದಾರೆ. ಇಂತಹ ಅನೇಕ ಸಂಭಾಷಣೆಗಳು ಜನರಿಗೆ ನಾಟುವಂತೆ ಬರೆದಿದ್ದು, ನೇರವಾಗಿ ರಾಜಕಾರಣಿಗಳನ್ನ ಟೀಕೆಸಿದ್ಧಾರೆ.

 ನಿರ್ದೇಶಕ ಡೀಜೊ ಜೋಸೆ ಆಂಟೋನಿ  ಧೈಯ ಮೆಚ್ಚಲೆ ಬೇಕು. ಶರೀಸ್‌ ಮೊಹಮ್ಮದ್‌ ಬರೆದ ಕಥೆಯನ್ನು ಅಷ್ಟೇ ನೈಜ್ಯವಾಗಿ ತೆರೆಮೇಲೆ ತಂದಿದ್ದಾರೆ. ಪ್ರಬಲ ಮತ್ತು ಸಾಮಾಜಿಕ ಜವಾಬ್ದಾರಿಯಳ್ಳ ಪ್ರಾಧ್ಯಾಪಕಿಯಾಗಿ ಮಮತ ಮೋಹನ್‌ ಗಮನ ಸೆಳೆಯುತ್ತಾರೆ. ಪೊಲೀಸ್‌ ಮತ್ತು ರಾಜಕೀಯ ನಡುವಿನ ಸಂಬಂಧವನ್ನು ಬಿಂಬಿಸುವ ಪಾತ್ರವನ್ನು ಸೂರಜ್‌ ವೆಂಜಾರಮೋಡು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.  ಇಡೀ ತಂಡವೂ ಅಲೆಗೆ ವಿರುದ್ದವಾಗಿ ನಡೆದಿದ್ದು, ಇಂತಹ ಸಾಮಾಜಿಕ ನ್ಯಾಯದ ಕಥೆ ಹಂದರವನ್ನು ಚಿತ್ರವನ್ನಾಗಿ ನಿರ್ಮಿಸಿ ಸಮಾಜದಲ್ಲಿ ರಾಜಕೀಯ ವ್ಯವಸ್ಥೆಯನ್ನು ಪರದೆ ಮೇಲೆ ತಂದಿದ್ಧಾರೆ.

ಸಿನಿಮಾ ಪ್ರಚಾರ ಮಾಧ್ಯಮವಾಗಿ ಹಾಗೂ  ಮನರಂಜನೆಯ ಮಾಧ್ಯಮವಾಗಿ ಮಾತ್ರ ಉಳಿದಿದ್ದು, ಬರೀ ಲಾಭ ನಷ್ಟದ ಲೆಕ್ಕಚಾರದಲ್ಲೆ ಮುಳುಗಿಹೋಗಿದೆ. ಸಿನಿಮಾಗಳು ಇದರಿಂದ ಆಚೆ ಬರಬೇಕು. ಸಮಾಜದ ವ್ಯವಸ್ಥೆಯ ಕಡೆ ಮುಖ ಮಾಡಬೇಕು. ಬೇರೆ ಬೇರೆ ಭಾಷೆಗಳಲ್ಲಿ ಸಾಮಾಜಿಕ ಕಳಕಳಿ ಸಿನಿಮಾಗಳು ತಲೆ ಎತ್ತಿ ನಿಂತಿದೆ. ಆದರೆ ನಮ್ಮ ಕನ್ನಡ ಚಿತ್ರರಂಗ ಮಾತ್ರ ಇದರಿಂದ ಹಿಂದುಳಿದಿರುವು ವಿಷಾದನೀಯ. ಕನ್ನಡದಲ್ಲೂ ಇಂತಹ ಸಿನಿಮಾಗಳು ತೆರೆ ಮೇಲೆ ಬರಬೇಕು. ಸಮಾಜದಲ್ಲಿ ರಾಜಕೀಯ ವ್ಯವಸ್ಥೆಯನ್ನು ಸರಿ ಪಡಿಸುವಂತ  ಕೆಲಸ  ಸಿನಿಮಾಗಳಿಂದಲೂ ಆಗಬೇಕು. ಮಾತಿಗಿಂತ ದೃಶ್ಯರೂಪಗಳು ಹೆಚ್ಚು ಪರಿಣಾಮಕಾರಿಯಾದದ್ದುಎಂದು ಮಲೆಯಾಳಂ ಚಿತ್ರರಂಗ ಮತ್ತೆ ಮತ್ತೆ ತನ್ನ ಚಿತ್ರಗಳ  ಮೂಲಕ ಸಾಬೀತು ಮಾಡುತ್ತಿದೆ.

‍ಲೇಖಕರು Admin

June 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: