ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ…

ಅಪ್ಪನ ನೆನಪಾದಾಗಲೆಲ್ಲ

ರುಕ್ಮಿಣಿ ಎನ್.

ತುಂಬು ಬಸುರಿಯ
ಹಾಡು ಹಗಲಲ್ಲೇ
ದೂರ ದೇಶದಿ ತೊರೆದು ನಡೆದ
ಆ ಬೇಜವಾಬ್ಧಾರಿ ಗಂಡಸು
ನೆನಪಾಗುತ್ತಾನೆ

heದಿನ ಬೆಳಗಾದರೆ
ಹೊಡೆದು ಬಡಿದು ಕಣ್ಣೀರು ಕುಡಿಸಿ
ರಾತ್ರಿಯಷ್ಟೇ
ತನ್ನ ದೇಹ ತೀಟೆಗೆ
ಅವಳನ್ನ ಬಯಸುತ್ತಿದ್ದ ಕಾಮುಕ
ನೆನಪಾಗುತ್ತಾನೆ

ಉಣಬಡಿಸಿದ ಅನ್ನದಲಿ
ವಿಷವಿರಬಹುದೆಂಬ ಮನಸ
ಕ್ರಿಮಿಗೆ ಕಿವಿಗೊಟ್ಟು
ಅವಳುಂಡು ನಂತರ ತಿಂದುತೇಗಿದ
ಆ ಸಂದೇಹಿ ನೆನಪಾಗುತ್ತಾನೆ

ದುಡಿದು ತಂದು
ಹಿರೆತನ ಮಾಡುವ ಬುದ್ಧಿ ದೂರವಿರಲಿ
ಸಗಣಿ ಬಾಚಿದರೆ ಕೈ ನಡುಗುತ್ತದೆಂದ
ಆ ಮಹಾ ಸೋಮಾರಿ
ನೆನಪಾಗುತ್ತಾನೆ

ತಾಯಿಯಿಂದ
ಮಕ್ಕಳ ಬೇರ್ಪಡಿಸಿ
ಮತ್ತಾರಿಗೋ ಅವ್ವ ಅಂತನಿಸಿ
ಹೆತ್ತ ಕರುಳ ಹಿಂಡಿದ ಆ ನಿರ್ದಯಿ
ನೆನಪಾಗುತ್ತಾನೆ

ಇವನ ಭಯಕಂಜಿ
ಕತ್ತಲು ಕೋಣೆಯ ಮೂಲೆಯಲಿ
ಅವಿತುಕೊಳ್ಳುತ್ತಿದ್ದ
ಆ ಮುಗ್ಧ ಹಸುಳೆಗಳು ನೆನಪಾಗುತ್ತಾರೆ

ಹೌದು..
ಅಪ್ಪ ಅಂದಾಗೆಲ್ಲ ಇವನೇ ನೆನಪಾಗುತ್ತಾನೆ

ಜೊತೆಗೆ,

ನೂರು ಬಾಯಿಯ ನೂರು ಮಾತನು
ತನ್ನೊಡಲೊಳಗೆ ಅಟ್ಟು
ಸ್ವಾಭಿಮಾನದ
ಬದುಕ ಹುಟ್ಟು ಹಾಕಿದ
ಆ ಮಹಾತಾಯಿ ನೆನಪಾಗುತ್ತಾಳೆ.

 

‍ಲೇಖಕರು Admin

19 June, 2016

2 Comments

  1. Sangeeta Kalmane

    ಅಪ್ಪನ ಸ್ಥಾನ ಕಲುಷಿತವಾಗುತ್ತಿರುವುದು ಈ ಕಾಲದ ದುರಂತ! ಚೆನ್ನಾಗಿ ಬರೆದಿದ್ದೀರಾ.

  2. Anonymous

    Ekistu bejaragi bardidira …….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading