ಅಷ್ಟು ಗಟ್ಟಿಯಾಗಿ ಕಟ್ಟದಿರಿ ಮನೆಗಳನ್ನು

ನೇಹಾ ಭಾವಸಾರ್ (ಹಿಂದಿ)

ಕನ್ನಡಕ್ಕೆ: ಉತ್ತಮ ಯಲಿಗಾರ

ಅಷ್ಟು ಗಟ್ಟಿಯಾಗಿ ಕಟ್ಟದಿರಿ ಮನೆಗಳನ್ನು
ಬೆಳೆಯಲು ಬಿಡಿ ಒಂದು ಪುಟ್ಟ ಗಿಡ
ಇಣುಕಿ ನೋಡಲಿ ಅದು
ಮನೆಯಲ್ಲಿ ಏನೇನು ಬೆಳೆದಿದೆ ಎಂದು
ಬರಲು ಬಿಡಿ ಚಿಟ್ಟೆಗಳನ್ನು
ಋತುವಿನ ಅತಿಥಿಯಾಗಿ

ಮಳೆಯ ಕಾರಂಜಿ
ಮಣ್ಣಿನ ಅಂಗಳವನ್ನು ಚುಂಬಿಸಿದಾಗ
ಬೆರೆಯಲಿ ಸೇವಂತಿಯ ಸುಗಂಧ
ಮಣ್ಣಿನ ಗಂಧದೊಂದಿಗೆ

ಧೂಪ ಸುವಾಸನೆ ಬೀರಲು
ತುಳಸಿಯ ಸಸಿಗೆ ಮತ್ತೆ ಜೀವ ತುಂಬಲಿ

ನಿಮ್ಮ ಆಲಿಶಾನ್ ಬಂಗಲೆಗಳು ಸೋಕಿಕೊಳ್ಳಲಾರವು
ರಾತ್ರಿಯಿಡಿ ಮಾರ್ಬಲ್ ಅಂಗಳದ ಮೇಲೆ
ಸುರಿಯುವ
ಕಣ್ಣೀರ ಹನಿಗಳನ್ನು!

ಮನೆಗಳನ್ನು ಅಷ್ಟು ಗಟ್ಟಿಯಾಗಿ ಕಟ್ಟದಿರಿ

ಕಳೆದುಕೊಳ್ಳುವದು
ಒಳಗಿನ ಶಬ್ದ
ಹೊರಗಿನ ಕೋಲಾಹಲದೊಂದಿಗಿನ
ತಾದ್ಯಾತ್ಮ

ಸೌಂಡ್ ಪ್ರೂಫ್ ಬಾಗಿಲುಗಳು
ಪಾರ್ಕಿನಲ್ಲಿ ಆಡುವ ಮಕ್ಕಳ ಧ್ವನಿಯನ್ನು ಕೇಳದೆ
ಬರಿ ತಾನೇ ತೆರೆದು ಮುಚ್ಚಿಕೊಂಡಾಗ ಹೊಮ್ಮುವ
ಚೀ ಚೀ ಧ್ವನಿಯನ್ನು ಮಾತ್ರ ಗುರುತಿಸುವವು

ಹೊಳೆಯುವ ಶುಭ್ರ ಗೋಡೆಗಳು
ಕಣ್ಣು ಕಳೆದುಕೊಂಡು ಬಿಡುವವು
ತಮ್ಮ ಹೊಳಪಿನಿಂದಲೇ

ನಿರ್ಜೀವ ಗೋಡೆಗಳು
ಪರಸ್ಪರ ಕೈಗಳನ್ನು ತಡಕಾಡಿ
ಕತ್ತಲು ಕವಿದ ಅಪಾರ್ಟ್ಮೆಂಟ್ ನಲ್ಲಿ
ಬೆಳಕಿಂಡಿಯನ್ನು ಹುಡುಕುವವು
ಮತ್ತೆ, ಹಸಿದ ವ್ಯಕ್ತಿಯಂತೆ ಮುಗಿಬೀಳುವವು
ಬಿಸಿಲಿನ ಒಂದು ತುಂಡು ಕಾಣಿಸಲು

ಲಿಫ್ಟಿನ ಬಟನ್ ಒತ್ತುತ್ತಾ
ಮೇಲೆ ಕೆಳಗೆ ಹೋಗುವ ಮಕ್ಕಳು
ಮರೆತು ಬಿಡುವರು
ಮರಳಲ್ಲಿ ಮನೆ ಮಾಡುವದನ್ನು

ಒಳಗೆ ಬರಲು ಹಾತೊರೆಯುವ
ಹಟವಾದಿ ಮಗುವಿನಂತೆ ಚಿಮ್ಮುವ
ಮುಗ್ಧ ಮಳೆಯ ಚಿಲುಮೆ
ಕಿಟಕಿಯ ವಾಟರ್ ಪ್ರೂಫ್ ಗಾಜಿಗೆ
ತಲೆ ಚಚ್ಚಿಕೊಂಡು
ಆತ್ಮಹತ್ಯೆ ಮಾಡಿಕೊಳ್ಳುವದು

ಏರ್ ಕಂಡೀಷನರ್ ಗಳು
ಕಿಟಕಿ ಮುಚ್ಚಲು ಬಾಧ್ಯ ಮಾಡಿ
ನಿಲ್ಲಿಸಿಬಿಡುವವು
ಒಂದು ಅಳಿಲಿನ
ಆಗಮನ ನಿರ್ಗಮನ

ಮನುಷ್ಯರು ಕಡಿಮೆ ಆಗುವದರಿಂದ
ದೃಷ್ಟಿಗೆ ರೂಢಿಯಾಗುವದು
ಬರಿ ಗೋಡೆಗಳಿಗೆ ತಾಕಿ ಮರಳುವದು

ಖಿನ್ನತೆಯಿಂದ ಆದ ಗಾಯಗಳು
ಭರಿಸುವವು
ವೈದ್ಯರ ಜೋಳಿಗೆಯನ್ನು

ಸತ್ತ ಬೆರಳುಗಳು ಹುಡುಕುವವು
ಪತ್ರಿಕೆಯ ಹೆಡ್ ಲೈನ್ ಗಳಲ್ಲಿ
ಗಗನಚುಂಬಿ ಅಪಾರ್ಟ್ಮೆಂಟಿನ
5ನೇ ಮಹಡಿಯ
ಎಷ್ಟೋ ದಿನದಿಂದ ಮುಚ್ಚಿದ
ಫ್ಲ್ಯಾಟ್ ಅಲ್ಲಿ
ಡ್ರಗ್ಸ್ ಓವರ್ ಡೋಸ್ ನಿಂದ
ಆದ ತನ್ನದೇ ಮೃತ್ಯುವನ್ನು

ಕಟ್ಟಡಗಳನ್ನು ಇನ್ನೂ ಎತ್ತರವಾಗಿಸುವ ಹುಚ್ಚು
ಮಕ್ಕಳಿಂದ ಅವರ ಸೂರನ್ನು ಕಸಿದುಕೊಳ್ಳುವದು

ಚಂದ್ರ ಹತಾಶನಾಗಿ
ಮರದ ಟೊಂಗೆಯ ಮೇಲೆ ಕುಳಿತು
ಚಾಕಿಂದ ಬಿಡಿಸುವನು ಗಾಳಿಪಟದ ಚಿತ್ರ

ತಾರೆಗಳನ್ನು ವೀಕ್ಷಿಸಲು ಹೋಗುವದಿಲ್ಲ ಯಾರೂ!
ಬರಿ ಕೆಲವು ಆತ್ಮಘಾತುಕ ಜನ ಹೋಗುವರು
ಶರೀರದಿಂದ ಮುಕ್ತಿ ಪಡೆಯಲು
ಮೇಲೆ
ಇನ್ನೂ ಮೇಲೆ
ಇನ್ನೂ ಮೇಲೆ

ನೀವು
ಜೀವಂತವಾಗಿರಬೇಕೆಂದರೆ
ಮನೆಗಳನ್ನು ಅಷ್ಟು ಗಟ್ಟಿಯಾಗಿ ಕಟ್ಟದಿರಿ
ಹುಲ್ಲು ಬೆಳೆಯಲಿ ಅಲ್ಲಿ ಇಲ್ಲಿ

ಮನೆ ಉಸಿರಾಡಲಿ.

‍ಲೇಖಕರು Avadhi

June 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಣೆ

ಆಣೆ

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: