ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವುಗಳ ಜಾಗಕ್ಕೆ ನಾವು ಹೋಗಿ ಮನೆ ಕಟ್ಟಿಕೊಂಡಿದ್ದೇವೆ…

ಲೋಕೇಶ್ ಮೊಸಳೆ 

ಅಪ್ಪ, ಅಮ್ಮ ಬೆಳೆದ 12 ಕೆಜಿ ಸಿಹಿ ಕುಂಬಳ/ ಸೋರೆಕಾಯಿ.

ನಮ್ಮ ಮನೆಸುತ್ತ ನೆರೆ-ಹೊರೆಯ ನಿವೇಶನದಲ್ಲಿ ನುಗ್ಗೆ, ಪಪ್ಪಾಯ, ರಾಗಿ, ತೊಗರಿ, ಗೆಣಸು, ಅವರೇಕಾಯಿ, ಹುರುಳಿ, ಬದನೆ, ಬೆಂಡೆ, ಬೀನ್ಸ್…. ಟೊಮೊಟೊ, ಮೆಣಸಿನಕಾಯಿ, ತರಾವರಿ ಸೊಪ್ಪುಗಳು,….ಹಲವು ರೀತಿಯ ಬಾಳೆ ಹೀಗೆ ಹಲವು ತರಕಾರಿಗಳನ್ನ ಕಳೆದ 8ವರ್ಷಗಳಿಂದ ಬೆಳೆದು ಗೆಳೆಯರಿಗೆ- ನೆಂಟರಿಗೆ ಕೆಲವೊಮ್ಮೆ ಆರ್ಗ್ಯಾನಿಕ್ ಶಾಪ್ ಗಳಿಗೆ ಕೂಡ ಮಾರಲು ಕೊಟ್ಟಿದ್ದೇವೆ.

ಪಕ್ಕ ಬೆವರುಸುರಿಸಿ ಬೆಳೆದ ರೀತಿಯಿಂದಾಗಿ ಅಪ್ಪನ ಖಾಯಿಲೆ ಗುಣವಾಗಿದೆ.

ರಾಸಾಯನಿಕ ಮುಕ್ತ ಸಹಜ ಕೃಷಿ ನಮ್ಮದು…. ಮನೆ ಸುತ್ತ ಹೂವಿನ ಗಿಡಗಳು…. ಇದೆಲ್ಲ ಜೊತೆಗೆ ಮನೆ ಸುತ್ತ ಹಲವು ಜಾತಿಯ ಪಕ್ಷಿಗಳು…. ನವಿಲು ನರಿಗಳನ್ನೂ ನೋಡಿರುವೆ. ಒಮ್ಮೆ ಚಿರತೆ ನಮ್ಮ ನಾಯಿಯನ್ನು ತೆಗೆದುಕೊಂಡು ಹೋಗಿದೆ. ಕಾಡು ಹಂದಿಗಳು ಮನೆ ಸುತ್ತ ಮೈದಿವೆ. ಎಷ್ಟೋ ಸಾರಿ ಹಾವುಗಳು ಮನೆಯೊಳಗೂ ಅಂಗಳದಲೂ ಬಂದಿವೆ.

ಇವೆಲ್ಲ ಯಾಕೆಂದರೆ ಸಾವಿರಾರು ವರ್ಷಗಳಿಂದ ಬದುಕುತ್ತಿದ್ದ ಅವುಗಳ ಜಾಗಕ್ಕೆ ನಾವು ಹೋಗಿ ಮನೆ ಕಟ್ಟಿಕೊಂಡಿದ್ದೇವೆ…. ನಿಜಕ್ಕೂ ಇಲ್ಲಿನ ವನ್ಯಜೀವಿಗಳೊಂದಿಗೆ ಬದುಕು ಸಹ್ಯವಾಗಿದೆ…

‍ಲೇಖಕರು avadhi

27 October, 2019

2 Comments

  1. ಗೀತಾ ಎನ್ ಸ್ವಾಮಿ

    ಲೋಕೇಶ್ ಮೊಸಳೆಯವರ ಮನೆಯ ಸೊಬಗನ್ನು ನಮ್ಮ ತಿಪಟೂರಿನಲ್ಲಿ ವಾಸವಾಗಿರುವ ಕವಿ ಎಸ್ ಗಂಗಾಧರಯ್ಯ ಅವರ ಬಾಯಲ್ಲಿ ತುಂಬಾ ಸಲ ಕೇಳಿದ್ದೇನೆ. ತುಂಬಾ ಸಹಜವಾಗಿ ಬರೆದಿದ್ದೀರಿ ಸರ್. ನೈಜತೆಯ ಬದುಕೇ ಹೀಗೆ ಹೆಚ್ಚು ಕಾಡುತ್ತದೆ

  2. T S SHRAVANA KUMARI

    ಇಂಟರೆಸ್ಟಿಂಗ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading