ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳ ಹೆಸರು ಬರೆಯುವಾಗ ನಡುಗುವ ಕೈಗಳು…

‘ದೊಡ್ಡಾಂವ’

IMG_4180

ಲಕ್ಷ್ಮಿಕಾಂತ ಇಟ್ನಾಳ

1
ಅವಳ ಹೆಸರು ಬರೆಯುವಾಗ
ನಡುಗುವ ಕೈಗಳು
ಹೃದಯ ಬಾಯಿಗೆ, ಮಿಂಚು ಕಣ್ಣಲ್ಲಿ
ಕಾಗದದಲ್ಲಿ ಅರಳಿದವಳ ಗುಂಗು ಮೈಯಲ್ಲಿ,
ಯಾರಿಗೂ ಕಾಣದಲ್ಲಿ
ಕಣ್ಣು ಮುಚ್ಚಿ ಕೆನ್ನೆಗೊತ್ತಿಕೊಳ್ಳುವಲ್ಲಿ
ಮೈಯೆಲ್ಲ ಕಂಪನ, ರೋಮಾಂಚನ,
ಧಮನಿ ಧಮನಿಗಳಲ್ಲಿ ಬಿಸಿದೇನೋ ಸಂಚಲನ,
ತಪ್ಪಿದ ಕೈಕಾಲುಗಳ ನಿಯಂತ್ರಣ,
ಅರೆಮತ್ತಿನ ಉನ್ಮತ್ತ ಕ್ಷಣ
ಸಂವೇದನೆಯಲ್ಲಿ ಅನಿಗ್ರಹ ಕಂಪನ
ಅರೆ, ಇದೇನು?
‘ಥೂ’ ಹೊಲಸು!
ಮನವೆಲ್ಲ ದುಗುಡ
ಸಂಕೋಚದ ಪಾಪಪ್ರಜ್ಞೆ
ಅರುಹಲಾರದ ಕುಸಿತ
ಶಾಲೆಗೆ ಹೋಗುವಾಗ,
ನಾಚಿ, ಅಂಜುತ್ತ ಗೆಳೆಯನಿಗೆ
ಕಿವಿಯಲ್ಲಿ ಉಸಿರಿದೆ,
ನಿನಗೂ ಆಯಿತೆ ‘ಅದು’
ನಕ್ಕು ಹೇಳಿದ
ನೀನೀಗ ‘ದೊಡ್ಡಾಂವ’ ಆದೆ.

‍ಲೇಖಕರು G

13 September, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading