ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳ ಹೃದಯಕ್ಕೆ ಮುಟ್ಟುವ ಮುನ್ನವೇ..

ಕಣ್ಣೀರು

ಆಭಿಲಾಷ್ ಟಿ ಬಿ
ತಿಪಟೂರು

 

ನಾನು ಆಡಿದ ಪದಗಳನ್ನೇ ಹೀರಿಬಿಟ್ಟಿಯಲ್ಲೆ ಗಾಳಿ|
ಅವಳ ಹೃದಯಕ್ಕೆ ಮುಟ್ಟುವ ಮುನ್ನವೇ|
ಮನಸ್ಸಿನ ಮಾತು ಹೊರಗೆ ಬಂದಿಲ್ಲ ಎಂದು ಕಾರಣ ಹೇಳಬೇಡ|
ಮೂಕವೇದನೆಯ ನೋವು ಅರ್ಥವಾಗದಷ್ಟು ಕ್ರೂರಿ ನೀನಲ್ಲ
ಅಂದು ಭಾವಿಸಿರುವೆ ||

ಸಾಗರವನ್ನೇ ತುಂಬಿಸುವ ಮೋಡಗಳನ್ನು |
ಹೊತ್ತು ಸಾಗುವ ನಿನಗೆ ,ನನ್ನ ಕಣ್ಣೀರು ಭಾರವಾಯಿತೆ |
ಹತ್ತು ಇಪ್ಪತ್ತು ಕಣ್ಣೀರು ಬಿದ್ದರೂ |
ಅವಳಿಗೆ ಕೆನ್ನೆಯ ಮೇಲೆ ಒಂದೂ ಸೋಕಿಲ್ಲವಂತೆ|

ಆದರೂ ನೀನು ಬಹಳ ಕ್ರೂರಿ|
ನನ್ನ ಸಂದೇಶ ಸಾಗಿಸದಿದ್ದರೆ ನನ್ನ ಪ್ರೀತಿ ಹೋದಿತಷ್ಟೆ|
ಮಳೆ ಮೋಡಗಳನ್ನು ಕಾಯುತ್ತಾ ಕುಳಿತ ರೈತನ ಬಳಿಗೆ|
ಕರುಣೆಯಿಲ್ಲದೆ ಅವನ ತಲೆಯ ಮೇಲೆ ಸಾಗುವೆ ,ನಾಲ್ಕು ಹನಿಗಳನ್ನೂ ಸುರಿಸದೆ |

 

‍ಲೇಖಕರು admin

12 June, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading