ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು ನಿಜವಾಗಿ ಬಂದಿರಲಿಲ್ಲ…

-ರಾಜು ಹೆಗಡೆ

ಅಗಮನ

ಒಂದು ಚಳಿ ಇಳಿಯುವ ಸಂಜೆ

ಅವಳು ಬಂದಳು

ಬಗಲಲ್ಲಿ ಮಗು

ಏನೇನೊ ಮಾತುಕತೆ

ನಡುನಡುವೆ

ಮಗುವಿನ ಜತೆ

ಉಲ್ಲಲ್ಲಾಯಿ

ನಾನೂ ಕೂಡ

 

ರೂಮು ತುಂಬ ಹರಡಿರುವ

ಪಾತ್ರೆ ಪಗಡೆ, ಕಸ ಗಿಸ, ಪುಸ್ತಕ ಗಿಸ್ತಕ

ಇತ್ಯಾದಿ

ಅವಳು ಕೇಳಿದಳು

ಆಗಿಲ್ಲವೆ ಇನ್ನು…

ಇಲ್ಲ…

ಚೂರು ನಕ್ಕಳು, ಜತೆಗೆ

ಮಂಚದ ಅಂಚಿಗೆ ಬಂದ

ಮಗುವ ಎತ್ತಿಕೊಂಡಳು

ನಂತರ ತುಸು ಹೊತ್ತು

ಅದು ಇದು ಆಡುತ್ತ

ಕತ್ತಲಾಯಿತು ಎಂದಳು

ಹೊರಗೆ ನೋಡುತ್ತ.

ಹೌದು,ಸಂಜೆ ಕತ್ತಲಾಗಿತ್ತು

ಹಕ್ಕಿ ಚಿಕ್ಕೆಯಾಗಿ ಹಾರಿಹೋಗಿತ್ತು.

 

ಬಾಗಿಲಲಿ ನಿಂತೆ

ಅಲ್ಲಿಂದಿಲ್ಲಿಗೂ ರಸ್ತೆಯ ಮೇಲೆ

ದೀಪದ ಮಾಲೆ

ನಡೆದಾಡುವ ಸಾಲೆ!

ಆದರೆ ಅವಳು ಮಾತ್ರ

ಎಲ್ಲೂ ಕಾಣಲಿಲ್ಲ

 

ಯಾಕೆಂದರೆ

ಅವಳು ನಿಜವಾಗಿ ಬಂದಿರಲಿಲ್ಲ.

—0—

 

‍ಲೇಖಕರು avadhi

12 November, 2011

5 Comments

  1. Gubbachchi Sathish

    ಉಲ್ಲಲ್ಲಾಯಿ ಚೆನ್ನಾಗಿದೆ.

  2. Rankusa

    i’m not into poetry and highly allergic to the so called ‘navya.’ (or to say, anything that comes prefixed with ‘modern— such as modern poetry, modern art, and so on…) but still, loved these four lines! and may be for the first time (except Van Gogh’s art) loved that painting too!

    ಆದರೆ ಅವಳು ಮಾತ್ರ
    ಎಲ್ಲೂ ಕಾಣಲಿಲ್ಲ

    ಯಾಕೆಂದರೆ
    ಅವಳು ನಿಜವಾಗಿ ಬಂದಿರಲಿಲ್ಲ.

    well, i thought the painting must be the creation of the artists over here, and was quite amused and feeling proud! but came to know that it’s a painting created by the Canadian artist Ru th Palmer, titled “Meeting in the Middle VI.” hope she’s not gonna sue you for copyright infringement. and also hoping that the above four lines that i loved, are at least, your own creation….

    regs,
    -r

    • raju hegade

      nanu adnnu nODilla.

  3. Rankusa

    ಇಲ್ಲಿ ನಿಮ್ಮ ಕವಿತೆ ಮಧ್ಯ ಇದೆಯಲ್ಲ painting, “ಹೊರಗೆ ನೋಡುತ್ತ” and “ಹೌದು,ಸಂಜೆ ಕತ್ತಲಾಗಿತ್ತು” ಅನ್ನೋ ಸಾಲುಗಳ ಮಧ್ಯೆ, ಅದೇ ಆ painting.

  4. raju hegade

    thank u

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading