
ಭವ್ಯ ಪಟೇಲ್
ಅವಳಲ್ಲಿ
ಸತ್ತ ಪ್ರೀತಿಯ ಸಾಕುತ್ತಿದ್ದಾಳೆ
ಇವಳಿಲ್ಲಿ
ಖಾಲಿ ತೊಟ್ಟಿಲ ತೂಗುತ್ತಿದ್ದಾಳೆ
ದುಃಖದ ಬುನಾದಿಯೋ
ಸಂಭ್ರಮಕ್ಕೆ ನಾಂದಿಯೋ
ನಿನ್ನ ಭಾವಕಿಡೆನು ಹೆಸರ
ನಿನ್ನೊಳಗೆ ನೀ ಬಂಧಿಯು
ಕಣ್ಣ ಹೊಳಪಿನೊಂದು
ಕಿರಣ ದೂರದೂರ ಸಾಗಿದೆ
ಸಣ್ಣ ಆಸೆಯೊಂದು ಹಿಗ್ಗಿ
ಬರುವ ದಾರಿ ಕಾದಿದೆ
ಕೊಟ್ಟ ತಂಪು ಸಣ್ಣ ಗರಿಕೆ
ತಿಳಿಸೀತೆ ಹೆಮ್ಮರಕೆ
ಯಾರ ಋಣದ ಕಾರಣಕೆ
ತಿಳಿದೀತೆ ಜಗಕೆ
ಎರೆಡು ಅಂತ್ಯದಲ್ಲೆ ಆದಿ
ಬೇರು ಕಣದಲವಿತಿದೆ
ನಿನ್ನ ನಗುವಿದ್ಯಾರ ಬರಹ!
ಬದುಕ ಬದುಕಬೇಕಿದೆ 🙂





0 Comments