ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳನ್ನೆಬಿಸಬೇಡ, ಈಗಷ್ಟೇ ಮಲಗಿದ್ದಾಳೆ..

ಒರಲೆಗೆ-

chaitrika sridhar hegde

ಚೈತ್ರಿಕಾ ಶ್ರೀಧರ್ ಹೆಗಡೆ
 ಕಂಚೀಮನೆ

ಅವಳನ್ನೆಬಿಸಬೇಡ
ಈಗಷ್ಟೇ ಮಲಗಿದ್ದಾಳೆ..
ಮತ್ತೆ ನಿನ್ನ ಕಂಡರೆ ಕಂಗಾಲಾಗುತ್ತಾಳೆ.

ಬಾ.. ಈ ಗೋಡೆ ಮೇಲೆ
ಗೂಡು ಕಟ್ಟು..

design2ಕವಿತೆಗಳ ಗೀಚಿ..ಗೀಚಿ..
ಮಡಸಿಟ್ಟ ಪಟ್ಟಿ ಬಸಿರಲ್ಲಿ
ಎಲೆಗಳಿನ್ನೂ ಬೇರು ಬಿಟ್ಟಿಲ್ಲ!
ಕಾದು ಕಾದು ಅಕ್ಷರಗಳು ಅತ್ತವು
ಪುಟಗಳೂ ನೆಂದವು..

ಹೋಗದನು ಮೆಲ್ಲ ಮುತ್ತಿಕೊ
ಓರೆ ಕೋರೆ ಮೆದ್ದು
ಒಂದಿಷ್ಟು ಹಸಿವನಿಂಗಿಸಿಕೊ..

ಬೇಕಾದರೆ ಈ ಎದೆ ತೇವಕೂ ಹಬ್ಬು;

ಅವಳ ಮಾತ್ರ ಎಬ್ಬಿಸಬೇಡ..
ಗೊಣಗಿ ಗೊಣಗಿ
ಗುಡಿಸಿಬಿಡುತ್ತಾಳೆ..
ದಿನವೆಲ್ಲ ಸಿನುತ್ತಿರುತ್ತಾಳೆ..

ಹಸಿವಾದಾಗೆಲ್ಲ
ಚೂರು ಚೂರೆ ಮೆಲ್ಲು ಈ ಗೋಡೆಯ..

ಲಡ್ಡಾಗಿ ಉದುರುವಾಗ
ನಮ್ಮ ನಡುವಿನಂತರ ಕರಗಿ
ಕಂತಬಹುದೇನೊ ಹಸಿವು..

ಹೀಗೆ ಕುಂತು ಪಟ್ಟಾಂಗ
ಹೊಡೆವುದ ಬಿಟ್ಟು
ಬಂದೀ ಗೋಡೆ ತುಂಬ
ತಂಬು ಹೂಡು..

ಹಬ್ಬುತಿರು ನಿತ್ಯ….

‍ಲೇಖಕರು admin

14 March, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading