ಏ ಶಿವನೇ..

manjula hulikunte

ಮಂಜುಳಾ ಹುಲಿಕುಂಟೆ 

ಏ ಶಿವನೇ ….
ನಿನ್ನ ರೂಪಗಳಿಗಾಗಿ ಎಲ್ಲೆಲ್ಲೋ ಹುಡುಕುವಾಗ
ಬೀದಿಬದಿಯಲ್ಲಿ ನಿಂತು ಸುಮ್ಮನೆ ಅಳುತ್ತಿದ್ದ
ಆ ಅನಾಥಮಗುವಿನಲ್ಲೊಮ್ಮೆ ಕಂಡಿದ್ದೆಯಲ್ಲಾ
ಅದೆಷ್ಟು ಮುಗ್ಧ ನೀನು…

shiva4ಇವರೆಲ್ಲಾ ಹೇಳುತ್ತಾರೆ ಶಿವನೇ
ನೀನೆಂದರೆ
ಕೈಯಲ್ಲಿ ಕೊಲ್ಲುವ ಅಸ್ತ್ರಗಳ ಹಿಡಿದು
ಸದಾ ಯುದ್ಧಕ್ಕೆ ನಿಂತವನಂತೆಯೇ ಕಾಣುತ್ತೀ ಎಂದು

ಅಲ್ಲಿ..
ಗುಲಾಭಿ ಮಾರುವ ಕಾಲಿಲ್ಲದ ಹುಡುಗಿಯ
ಹಾಲ್ಗೆನ್ನೆಯಲ್ಲಿ ಮುಗುಳ್‌ನಗುವಾಗುತ್ತೀಯಲ್ಲ
ಹಾಗೆಲ್ಲಾ ನೀನಷ್ಟು ಕಟುಕನಲ್ಲವೆಂದು ನಿಟ್ಟುಸಿರಿಟ್ಟು ನಿರಾಳವಾಗುತ್ತೇನೆ

ನಿನ್ನ ಹೆಸರಿನಲ್ಲೇ ಕೊಂದು ತಿನ್ನುವವರ ಕಂಡಾಗಲೆಲ್ಲಾ
ನಿನ್ನ ಮೇಲೆ ಇನ್ನಿಲ್ಲದಂತೆ ಸಿಟ್ಟಾಗುತ್ತೇನೆ ಶಿವನೆ
ಆ ಕ್ಷಣ ನೊಂದವರ ಒಣ ಗಂಟಲಿನ ದನಿಯಾಗಿ ನೀನು ಮೂಡುತ್ತೀಯಲ್ಲ
ಅವರ ಕೊರಳೊಳಗೆ ಡಮರುಗದ ಸದ್ದಾಗಿ ಉಳ್ಳವರ ಸದ್ದಡಗಿಸುತ್ತೀಯಲ್ಲ
ಹಾಗಷ್ಟೇ
ನನ್ನ ಶಿವನೂ ನೊಂದವರಿಗಾಗಿ ತುಡಿವ ಭಾವುಕನೆಂಬುದ ಕಂಡುಕೊಳ್ಳುತ್ತೇನೆ..

ನೀನೆಂದರೆ ಶಿವನೆ
ನೋವಾದಾಗಲೆಲ್ಲಾ ತಾಯ ಮಡಿಲಾಗುವ
ಹಸಿದ ದಿನಗಳಲ್ಲಿ ತಂದೆ ಹೆಗಲಾಗುವ
ಎಡವಿದಾಗಲೆಲ್ಲಾ ಕೈಯಿಡಿದು ನಡೆಸುವ
ಎಲ್ಲಾ ಬಂಧಗಳು ಆಂತರ್ಯದ ಬಂಧು..

ನಾನು ಹಸಿದು ಮಲಗುವ ರಾತ್ರಿಗಳನ್ನೆಲ್ಲಾ
ಶಿವರಾತ್ರಿಗಳೆಂದೇ ಆನಂದಿಸುತ್ತೇನೆ ಶಿವನೆ
ಹಸಿದವರ ಕಣ್ಣುಗಳಲ್ಲಷ್ಟೇ ನಿನ್ನ ಕಾರುಣ್ಯಗಳ ಕಾಣಬಲ್ಲೆ..

‍ಲೇಖಕರು admin

March 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: