ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನೇ ಕುಸುರಿಮಾಡಿದ ಮುತ್ತು ಹಾಗೇ ಉಳಿಸಿಕೊಂಡಿದ್ದೇನೆ…

ಮಂಜುಳಾ ಹುಲಿಕುಂಟೆ

love boysಇಲ್ಲ ಕಣೋ
ಈಗೀಗ ಅನಿಸುತ್ತದೆ
ನೀನೆಂದೂ ಅಪರಿಚಿತನಾಗೆ ಇರಬೇಕಿತ್ತು
ಕದ್ದು ಕದ್ದು ನಿನ್ನ ನೋಡುವಾಗಿನ ಆ ಕಾತುರ
ಅಪರಿಚಿತಳಾಗೆ ನಿನ್ನೆದುರು ಮೆಲ್ಲಗೆ ಸಾಗಿಬಿಡುವ ಆತುರ
ಎಲ್ಲವೂ ಹಸಿಯಾಗೇ ಉಳಿಯಬೇಕಿತ್ತು

ನನ್ನಾಳದ ಪ್ರತೀ ಮಾತು
ನಿನ್ನೊಳಗೆ ಹುಟ್ಟುಪಡೆಯುವ ಕೌತುಕಕ್ಕೆ
ಬೆರಗುಗೊಳ್ಳುತ್ತಲೇ ಕಾಯ್ದುಕೂರಬೇಕಿತ್ತು….

ಉಸಿರು ಬಿಗಿಹಿಡಿದು
ಜಾತ್ರೆ ನಡುವಿನಲಿ
ನಿನ್ನ ಕದ್ದು ಕಂಡುಕೊಳ್ಳಬೇಕಿತ್ತು
ಮಾತಿನ ಹಾದಿ ತಿಳಿಯದೇ
ಕೈಹಿಸುಕಿಕೊಳ್ಳುತ್ತಾ ಸಣ್ಣಗೆ ಬೆವರಬೇಕಿತ್ತು…

peacock paint

 

 

 

ಬರೆಯದಿರಲೆಂದೇ ಬೆರಳ ಸುಟ್ಟಿಕೊಂಡಿದ್ದೇನೆ
ಬೆರಳ ತುದಿ ಬೆರಗೂ ಮಡಿದಿದೆ
ಮತ್ತೆ ಮಿಡಿಯುವ ಮೋಹಕ್ಕೆ ಮೊಗ್ಗಾಗಲಾರೆ .

peacock paint

 

 

 

ಕುಳಿಕೆನ್ನೆ ಆಳದಲ್ಲಿ
ಅವನಿಟ್ಟುಹೋದ
ಮುತ್ತೊಂದ ತಡಕಿಕೊಳ್ಳುತ್ತೇನೆ
ಒಡಲಾಳದಲಿ ಅವನೇ ಕುಸುರಿಮಾಡಿದ ಮುತ್ತು
ಆ ಹೊತ್ತಿನ ನೆನಪಿಗೆ ಹಾಗೆ ಉಳಿಸಿಕೊಂಡಿದ್ದೇನೆ…

 

 

‍ಲೇಖಕರು admin

17 December, 2015

3 Comments

  1. ಶಮ, ನಂದಿಬೆಟ್ಟ

    ವಾಹ್…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading