ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನಿಗೆ ನಾನು..

-ವೀಣಾ ಪಿ. / ಹರಿಹರ


ಮನಕೆ-ಮನ ಬೆರೆತು
ಮೇರೆ
ಮೀರಿದುತ್ತುಂಗದ
ಪಲ್ಲಂಗದಲಿ
ನನಗೆ ಅವನು;
ಅವನಿಗೆ ನಾನು..
ಆತು..
ಕೂತು..
ಹೊಸೆದು..
ಬೆಸೆದು..
ಮಸೆದ ಭಾವಗಳ
ಮಥಿಸುತ್ತಲೊದಗಿದ
ನವನೀತ
ಕಾವ್ಯ-ಕುಡಿಗಳ ಸೃಜಿತಕ್ಕೆ
ಮಾತೆ ನಾ..
ಮತ್ತವನು ಪಿತನಾಗಿ
ಕಾಮಕೇಳಿಯ
ಗೊಡವೆಯಿರದ
ಭಾವಗಳ
ಬಸಿರಲ್ಲಿ
ಸಾವಿರದ
ಚೇತನವು
ನಿತ್ಯವೂ
ಹುಟ್ಟುತಿರೆ
ಇನ್ನೆಲ್ಲಿ ಬಂಜೆತನ!?

ಬಂಜೆ ನಾನಲ್ಲ..

‍ಲೇಖಕರು avadhi

28 August, 2020

2 Comments

  1. Dhanyashree P

    ಕವಿತೆಯನ್ನು ಕಂದನೆಂದೆಣಿಸಿರುವ ಭಾವ ವಿಶಿಷ್ಟ ಮತ್ತು ಹೃದಯಸ್ಪರ್ಶಿಯಾಗಿದೆ.
    ಅದ್ಭುತ ಸಾಲುಗಳು…

  2. Dhanyashree P

    ಕವಿತೆಯನ್ನು ಕಂದನೆಂದೆಣಿಸಿರುವ ಭಾವ ವಿಶಿಷ್ಟ ಮತ್ತು ಹೃದಯ ಸ್ಪರ್ಶಿಯಾಗಿದೆ.
    ಅದ್ಭುತ ಸಾಲುಗಳು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading