ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಳುವ ಸಂತೆಗೆ ಹೋಗಿ ನಗುವಿಗೆ ಚೌಕಾಸಿ ನಡೆಸುವ..’ ವೈಶಾಲಿ ಹೆಗ್ಡೆ ಕವನ

ವೈಶಾಲಿ ಹೆಗ್ಡೆ


ಹತ್ತಾರು ಕಣ್ಣ ಪಾಪೆಗಳಲಿ
ಹೊಚ್ಚ ಹೊಸ ಹಾಡೊಂದು ಹುಟ್ಟುವಾಗ
ಅರ್ಥವಾಗದ ವ್ಯಾಕರಣ ಹೇಳಿಕೊಟ್ಟಂತೆ –
ಇಲ್ಲಿನ ಗುಣಾಕಾರ.
ಅಳುವ ಸಂತೆಗೆ ಹೋಗಿ
ನಗುವಿಗೆ ಚೌಕಾಸಿ ನಡೆಸುವ
ಬಿಕನಾಸಿಗಳು ನಾವಿಲ್ಲಿ
ಅಂಗಡಿಯಲಿಲ್ಲದ ವಸ್ತುವ ಬಣ್ಣದ ಬ್ಯಾಗಡಿ
ಸುತ್ತಿ ಮೆತ್ತಿ ಬಿಡುವ ಛಾತಿಯಿಲ್ಲದಿರೆ
ಸಂತೆಯಲಿ ನಿಲ್ಲಲು ನಾಲಾಯಕ್ಕು ನೀ
ಪರದೇಶಿ ಪೆದ್ದನಂತೆ ಹೊರನಿಂತೆಯೋ
ನೀನೆ ಆಗಿಬಿಡುವೆ ಬಣ್ಣದ ಬ್ಯಾಗಡಿ ಸುತ್ತಿಟ್ಟ ಇಲ್ಲದ ಸಾಮಾನು
 

‍ಲೇಖಕರು G

28 August, 2014

3 Comments

  1. Mahendra

    ಶ್ರೀಮಥಿ ವೈಶಲಿ ಹ್.
    ನಮಸ್ಕಾರ.
    ಈ ಮಾತುಗಳ ಅರ್ಥವೆನು, ತಿಳಿಸಿದರೆ ವಂದಿಸುವೆ.
    ಅಳುವ ಸಂತೆ, ಬಿಕನಾಸಿ, ಬ್ಯಾಗಡಿ.
    ನಾನೋರ್ವ ಪರದೇಶಿ ಪೆದ್ದನೆ?
    ಅಮಿತ ಧನ್ಯವಾದಗಳು.
    ವಿಶ್ವಾಸದಲಿ
    ವಿಜಯಶೀಲ

  2. Mahendra

    kShamisi tappu vyaakaraNa: thi > ti’.

  3. mmshaik

    uttama kavana…hidisitu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading