ಅರ್ಚನಾ  ಎಚ್ ಓದಿದ ‘ಕೋವಿಡ್ ಕಥೆಗಳು’

ಶಿವಾನಂದರ ಕೋವಿಡ್ ಕಥೆಗಳೊಡನೆ…

ಅರ್ಚನಾ  ಎಚ್

ಹುಟ್ಟು ಸಾವುಗಳ ನಡುವಣ ಹೊಯ್ದಾಟವೇ ಜೀವನ..ಹುಟ್ಟಿನಿಂದಲೋ, ನಂಟಿನಿಂದಲೋ ಬಂದ ಬಂಧಗಳ ಲಾಲನೆ, ಪಾಲನೆ ಹಾಗೂ ಪೋಷಣೆ ಜೀವದ ಹೊಣೆ. ಕಳೆದೆರಡು ವರ್ಷದಿಂದ ಕೋವಿಡ್ ಕರಾಳತೆಯ ಭೀಭತ್ಸ ನರ್ತನಕ್ಕೆ, ಅಕಾಲ ದುರ್ಮರಣಕ್ಕೊಳಗಾದ ಲೆಕ್ಕವಿಲ್ಲದಷ್ಟು ಜೀವಗಳು ಸಂಗಾತಿಯನ್ನು , ಪೋಷಕರನ್ನು , ಹಸುಗೂಸನ್ನು  ಅಗಲಿದಾಗ, ಬೀದಿಗೆ ಬಿದ್ದ ಜೀವಗಳದೆಷ್ಟೋ..!? ತಂದೆ ತಾಯಿಯನ್ನು ಕಳೆದುಕೊಂಡು‌ ಅನಾಥವಾದ ಮಕ್ಕಳೆಷ್ಟೋ..!?

ಖಾಲಿ ಸರ್ಕಾರಕ್ಕೇ ಹಣೆಪಟ್ಟಿ ಕಟ್ಟಿ, ಹೊಣೆ ಮಾಡುತ್ತಾ ಶಿಳ್ಳೆ ಹೊಡೆಸಿಕೊಳ್ಳುವ  ಜನ ನಾಯಕರ ನಡುವೆ, ಹೊಸ ಯೋಜನೆ ತಂದು ಸಂಕಷ್ಟದಲ್ಲಿರುವ ಅನೇಕ ಕುಟುಂಬಗಳಿಗೆ ಸ್ಪಂದಿಸಿ ಪರೋಕ್ಷವಾಗ್ಯೂ, ನೇರವಾಗಿಯಾದರೂ ನೆರವಾಗುತ್ತಾ  ವಿಶಿಷ್ಟ , ವಿಭಿನ್ನ ಹಾಗೂ ಆದರ್ಶವಾಗಿ  ನಿಲ್ಲುವ ವ್ಯಕ್ತಿ ಶಿವಾನಂದ ತಗಡೂರು.. 

ಪತ್ರಕರ್ತರ ಸಾವಿನ ಸುದ್ದಿ ಅಲೆಯಂತೆ ಅಪ್ಪಳಿಸುವಾಗ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದ ಹಲವಾರು ಕುಟುಂಬಗಳ ಕಣ್ಣೀರು ಒರೆಸಿ, ಸರ್ಕಾರದಿಂದ ಪರಿಹಾರ ಧನ ಹಾಗೂ ನೈತಿಕ ಬೆಂಬಲ ನೀಡಿದ್ದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ..

ಸರ್ಕಾರದಿಂದ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಪರಿಹಾರನಿಧಿಯನ್ನು  ಕೊಡಿಸುವಲ್ಲಿ ಶಿವಾನಂದರು ಪಟ್ಟ ಶ್ರಮ,  ಒಕ್ಕೂಟದ  ಸದಸ್ಯರೆಲ್ಲಾ ಸೇರಿ ಪತ್ರಕರ್ತರ ಹಿತಾಸಕ್ತಿಗೆ ರೂಪಿಸಿದ  “ಆಪದ್ಭಾಂದವ” ಎಷ್ಟೋ ಕುಟುಂಬಗಳಿಗೆ ಬೆಳಕಾದ ಕರುಣಾಜನಕ ಕಟುವಾಸ್ತವದ  ಕಥೆಗಳೇ “ಶಿವಾನಂದ ತಗಡೂರು ಹೇಳಿದ ಕೋವಿಡ್ ಕಥೆಗಳು”..

” ಕೋವಿಡ್ ಈ ಪರಿಯಾಗಿ ಕಾಡಿ, ಜೀವ ಬೇಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ” ಎನ್ನುವ ಲೇಖಕರ ಮಾತು ಅಕ್ಷರಶಃ ಎಲ್ಲರ ಮನದಾಳದ ವೇದನೆಯನ್ನೇ ಬಿಂಬಿಸುತ್ತದೆ.. ಸಾಕ್ಷ್ಯಕಥೆಗಳ ಕಥಾಸರಮಾಲೆಯಿದು..

ಪುಸ್ತಕದ ಕೊನೆಯ ಪುಟದವರೆಗೂ ಕಥೆಗಳು ತಂತಾನೆ ಒಂದೇ ಸಮನೆ ಓದಿಸಿಕೊಂಡು ಹೋಗುತ್ತದೆ..

ಕರ್ಫ್ಯೂ, ಪ್ರತಿಭಟನೆ, ಹೋರಾಟ, ಸಾಂಕ್ರಾಮಿಕ ರೋಗ ಏನೇ ಇರಲಿ ಅಭಿಮನ್ಯುವಿನಂತೆ ಚಕ್ರವ್ಯೂಹಕ್ಕೆ ನುಗ್ಗಿ ಜನತೆಗೆ ಮಾಹಿತಿ ನೀಡುವ ಹರಸಾಹಸದ ಕೆಲಸ, ಮಾಧ್ಯಮ ಹಾಗೂ ಪತ್ರಕರ್ತರದ್ದು..ಬೇರೆ ಎಲ್ಲಾ ವೃತ್ತಿ ಕಾರ್ಮಿಕಬಂಧುಗಳಿಗೆ ಸಹಾಯಹಸ್ತ ಚಾಚುವ ಸರ್ಕಾರ ಪತ್ರಕರ್ತರ ಪಾಲಿಗೆ ಮರೀಚಿಕೆಯಾಗೇ ಉಳಿದಿತ್ತು.. ಇಂತಹ ಸಂದರ್ಭದಲ್ಲಿ ಶಿವಾನಂದರ  ಮುತ್ಸುದ್ದಿತನ  ಎಷ್ಟೋ ಕುಟುಂಬಗಳ ಕಣ್ಣೀರು ಒರೆಸಿದೆ…

ಪ್ರಸ್ತುತ ಕರ್ನಾಟಕ  ರಾಜ್ಯ ಕಾರ್ಯನಿರತ ಪತ್ರಕರ್ತರ  ಸಂಘದ  ಮಾನ್ಯ ಅಧ್ಯಕ್ಷರಾಗಿ ಸತತ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದು, ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಕಟಿಬದ್ಧರಾಗಿ  ಶ್ರಮಿಸುತ್ತಿರುವ ಶ್ರೇಯ ಶಿವಾನಂದರಿಗೆ ಸಲ್ಲುತ್ತದೆ..

ಹೊಸ ಯೋಜನೆಯನ್ನು, ಅದರ ರೂಪುರೇಷೆಗಳನ್ನು  ನೀಡಿ, ಅಧಿಕಾರಗಳ ಮನವೊಲಿಸಿ ಸಾಕಾರಗೊಳಿಸುವುದು ಅತ್ಯಂತ

ಕಷ್ಟಸಾಧ್ಯ.. ಅಧಿಕಾರಗಳ ಕಛೇರಿಗೆ ಚಪ್ಪಲಿ ಸವೆಸಬೇಕು..ನಕಾರ, ಅವಮಾನ, ನಿರ್ಲಕ್ಷ್ಯ ನಿಂದನೆಗಳ ನಡುವೆಯೂ ಛಲ ಬಿಡದೆ ಹೋರಾಡಬೇಕು.. ಅಗಾಧ ಪರಿಶ್ರಮದ ಬೆವರ ಹನಿಗಳ ಅಕ್ಷರರೂಪವೇ ಈ ಕೃತಿ.. ಬಹುರೂಪಿ ಪ್ರಕಾಶನವು ಚೊಕ್ಕವಾಗಿ ಮುದ್ರಿಸಿದ್ದು ಓದುಗರ ಮನಸೆಳೆವಲ್ಲಿ  ಸಫಲವಾಗಿದೆ..

ಶಿವಾನಂದ ತಗಡೂರು ಹೇಳಿದ ಕೋವಿಡ್ ಕಥೆಗಳು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

https://bit.ly/3z09Wlr

‍ಲೇಖಕರು Admin

May 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: