ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರೆರೇ ! ಹೇಳಲು ಮರೆತಿದ್ದೆ..

ಮೂರುವರೆ ಯುಗ…

ನಾಗೇಶ ಮೈಸೂರು

ಕಡೆಗೂ ಸಿಕ್ಕಿತು ರಹದಾರಿ
ತೆರೆದು ದಿಡ್ಡಿ ಬಾಗಿಲು
ಕಾಲದತ್ತ ನಡಿಗೆ
ಭೂತ-ಭವಿತ, ಪ್ರಸ್ತುತದಿಂದ.

click_aytu_kaviteಕಾಲ ಯಾನದ ಯಂತ್ರ
ಇಷ್ಟು ಸರಳ ಸುಲಭದ್ದೆಂದು
ಯಾವ ವಿಜ್ಞಾನಿಗೂ ಕೂಡಾ
ಇಲ್ಲಿತನಕ ಹೊಳೆದೇ ಇರಲಿಲ್ಲ !
ಪುಟ್ಟ ಬಾಲನೂ ಬೆನ್ನಲ್ಲಿ
ಹೊತ್ತು ನಡೆಯುವಾ ಜಗ
ಕಲ್ಪನೆಯ ಮೂಸೆಯಲಿ ಪಯಣ
ಹೆಜ್ಜೆಗೊಂದೊಂದೆ ತೆರೆದು ಹೆಬ್ಬಾಗಿಲು.

ಇಟ್ಟುಕೊ ಬೆನ್ನಿಗೆ ಆನಿಸಿ
ಕಪ್ಪು ಬಿಳುಪಾಗುತ ವಾಸ್ತವ
ಅದು ಭೂತಕೆ ನಡೆವ ವಿಧಾನ !
ತೆಗೆದಿಟ್ಟುಕೊ ಮುಂದೆ ಎದೆಗೆ
ಹೃದಯ ಬಡಿತದ ಕಡೆಗೆ
ಬಣ್ಣಬಣ್ಣ ರಂಗಿನ ಭವಿಷ್ಯದ ಜಾಗ !!
ಮತ್ತೇನಿಲ್ಲ ಕೀಲು, ಕಡ್ಡಿ, ಗುಂಡಿ
ಬೇಕೆಂದಾಗ ಮನಸೊಂದೆ ಅಡ್ಡಿ.

ಅರೆರೇ ! ಹೇಳಲು ಮರೆತಿದ್ದೆ

ಜೋತುಬಿದ್ದಾ ಕಾಲನೇಮಿ – ಮನಸು
ಜೊತೆಗೆ ಮೂರುವರೆ ಯುಗ ದಾಟಿದ್ದೂ
ಕಣ್ಣಿರದ ಬೆನ್ನಿಗೆ ಆತು ಕೂತೆ ;
ಹೊಂಡದಿಂದೆದ್ದು ಬಂದರು ಬೆನ್ನಲ್ಲೆ
ಕೂತು ತೆರೆದು ವಿಶಾಲ ಜಗ ವಿಸ್ತಾರ
ಕುದುರೆ ಮೈದಾನ ಕನಸು ಪ್ರಾಯ
ತಾನಾಗಿ ಅಶ್ವಮೇಧ ಯಾಗಾಶ್ವ.

ಕಂಡಿತೇನು ಹೆಜ್ಜೆ ಗುರುತು, ಸದ್ದು ?
ಅದೇ ಮಿಕ್ಕರ್ಧದ ನೇರ ಹಾದಿ.

‍ಲೇಖಕರು Admin

16 September, 2016

2 Comments

  1. Sangeeta Kalmane

    ಬಹಳ ಚೆನ್ನಾಗಿದೆ ಕಾಲನೊಂದಿಗಿನ ನಡಿಗೆ

    • Nagesha Mysore

      ಕಾಲದೊಂದಿಗೆ ಕಾಲ್ನಡಿಗೆಯಲ್ಲಿ ಕಾಲನನ್ನು ಅಧಿಗಮಿಸಿ ನಡೆಯುವ ಹುನ್ನಾರವೆ ಬದುಕಲ್ಲವೇ ? ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading