ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರಿಷಡ್ವರ್ಗ ಎಂಬ Murder Mystery…

ಎ ಬಿ ಪಚ್ಚು

ಇಲ್ಲಿ ಕೆಲವರು ಕೆಟ್ಟವರು. ಹಾಗಂತ ಬಾಕಿ ಉಳಿದ ಎಲ್ಲರು ಒಳ್ಳೆಯವರು ಎಂದು ಅರ್ಥ ಕೂಡ ಅಲ್ಲ! ಸಂಧರ್ಭಕ್ಕೆ ತಕ್ಕಂತೆ ಕೆಲವರು ಸ್ವಲ್ಪ ಕೆಟ್ಟವರು.. ಮತ್ತೆ ಕೆಲವರು ತುಂಬಾನೇ ಕೆಟ್ಟವರು!! ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ.. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಮನುಷ್ಯನ ಪ್ರಮುಖ ಆರು ಗುಣಗಳೆನಿಸುವ ಈ ಅರಿಷಡ್ವರ್ಗಗಳೇ ಈ ಮೂವಿಯ ಪ್ರಮುಖ ಕಥೆ.

ಖಂಡಿತವಾಗಿಯೂ Murder Mystery ಕಥೆಯೇ ಹೌದು ಇದು. ಇದರ ಕೊಲೆಯನ್ನು ಮೂವಿ ಶುರುವಾಗುವುದಕ್ಕಿಂತ ಮೊದಲೇ ನೀಟ್ ಆಗಿ ಮಾಡಿ ಮುಗಿಸಿಟ್ಟಿರುತ್ತಾರೆ. ಕೊಲೆ ನಡೆದ ಜಾಗದಲ್ಲಿ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಕೂಡ! ಆದರೆ ಅವರೇ ಕೊಲೆಗಾರರಾ? ಅದು ಗೊತ್ತಿಲ್ಲ! ಹಾಗಾದರೆ ಯಾರು? ಅದರ ಬೆನ್ನು ಹಿಡಿದೇ ಈ ಕಥೆ ಸಾಗುತ್ತದೆ. ಒಬ್ಬೊಬ್ಬರ ಒಂದೊಂದು ಕಾಣುವ ಮುಖದ, ಮುಖವಾಡದ ಹಿಂದಿನ ಅಸಲಿ ಮುಖದ ಪರಿಚಯವಾಗುತ್ತಲೇ ಹೋಗುತ್ತದೆ.

ಪೋಲಿಸರ ತನಿಖೆ ಕೂಡ ಎಕ್ಸ್‌ಲೆಂಟ್ ಅಂತ ಕಥೆಯ ಮಧ್ಯದಲ್ಲೊಮ್ಮೆ ಅನ್ನಿಸಿ ಬಿಡುವುದಿದೆ. ಆದರೆ ಕೊನೆಯಲ್ಲಿ ಅಲ್ಲ!! ಎಲ್ಲರೂ ಅರಿಷಡ್ವರ್ಗಗಳಿಂದ ಹೊರತಾಗಿಲ್ಲ ಎನ್ನುವುದೇ ಇದರ ಮೈನ್ ಥೀಮ್! ಅರಿಷಡ್ವರ್ಗ ಈ ಮೂವಿಯನ್ನು ಅರವಿಂದ್‌ ಕಾಮತ್ ನಿರ್ದೇಶನ ಮಾಡಿದ್ದಾರೆ.

ಅವಿನಾಶ, ಸಂಯುಕ್ತಾ ಹೊರನಾಡ್, ನಂದಗೋಪಾಲ್, ಮಹೇಶ್, ಅನುಜ ಆಳ್ವ ನಾಯ್ಕ್, ಅರವಿಂದ್‌ ಕುಪ್ಲಿಕರ್ ರವರ ಅಭಿನಯವಿದೆ. ಪೋಲಿಸ್ ಪಾತ್ರದಲ್ಲಿ ಅಭಿನಯಿಸಿದ ನಂದಗೋಪಾಲ್ ಕಮ್ಮಿ ಮಾತು, ತೀಕ್ಷ್ಣ ನೋಟ ನಿಮಗೂ ಇಷ್ಟ ಆಗಬಹುದು. ವಿಶ್ವ ಸಿನಿರಂಗದಲ್ಲಿ ಕೂಡ ಈ ಮೂವಿ ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದೆ.

‍ಲೇಖಕರು Avadhi

24 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading