ಅಮೆರಿಕಾದಲ್ಲಿ ಮನೆ- ಮನ ಹುಡುಕುತ್ತಾ..

ಮನೆ – ಮನಗಳ ನಡುವೆ

ಪ್ರಕಾಶ ಕಡಮೆ

ನ್ಯೂಜೆರ್ಸಿಯ Bridgewater ನ ಆಸು ಪಾಸಿನಲಿ ಮನೆಗಳ ಮಾರಾಟ, ಕೊಳ್ಳುವಿಕೆಯ ವಿಧಿ-ವಿಧಾನಗಳ
ಕುರಿತಾಗಿ ಸಂತೋಷ್ ತೋರಿಸುವದಾಗಿ ಹೇಳಿದ್ದರಿಂದ ಮೊನ್ನೆ ರವಿವಾರ ಕಾವ್ಯಾಳನ್ನೊಳಗೊಂಡು ಸುನಂದಾಳೊಂದಿಗೆ ದಾರಿಗುಂಟ ಕಾರಿನಲಿ ಹೊರಟೆವು. ರವಿವಾರ ರಜೆಯಾದ್ದರಿಂದ ಈ ಪ್ರಕ್ರಿಯೆ ರಜೆಯಂದೇ
ನಡೆಯುವದು ಸ್ವಾಭಾವಿಕವೇ.

ಕಂಪೌಂಡಿನ ಎದುರಿನ Open House ಫಲಕ ನಮ್ಮನ್ನು ಅಲ್ಲಿದ್ದ ಏಜೆಂಟನೊಂದಿಗೆ ಸ್ವಾಗತಿಸಿತು.
ಮನೆ ಪ್ರವೇಶಿಸುತ್ತಿದ್ದಂತೆಯೇ ಬಾಗಿಲಲ್ಲೇ, ನಮ್ಮ ನಮ್ಮ ಬೂಟುಗಳಿಗೆ ಅಳವಡಿಸಿಕೊಳ್ಳಲು ಪ್ಲ್ಯಾಸ್ಟಿಕ್
ಚೀಲಗಳು ಸಿದ್ಧವಾಗಿ ನಿಂತಿದ್ದವು ಸ್ವಚ್ಛತೆಯ ದೃಷ್ಟಿಯಿಂದ . ಮಾರಾಟ ಮಾಡಲು ನಿಶ್ಚಯಿಸಿದ್ದರಿಂದ
ಓನರ್ ಮನೆ ಖಾಲಿಮಾಡಿ ಏಜಂಟನಿಗೇ ಹಸ್ತಾಂತರಿಸಲಾಗಿತ್ತು

ನಗುಮೊಗದಲೇ ಸ್ವಾಗತಿಸಿದ ಅವನು ಮನೆಯ ಕುರಿತಾಗಿ ವಿವರವಾದ ಮಾಹಿತಿ ನೀಡಿ ಒಳಗೆ ಬೀಳ್ಕೊಟ್ಟ. ಇಲ್ಲಿಯ ಮನೆಗಳ ಗೋಡೆಗಳು ನಮ್ಮಲ್ಲಿಯಂತೆ ಕಲ್ಲು ಇಟ್ಟಂಗಿಗಳಿಂದ ನಿರ್ಮಿತವಲ್ಲ ; ಅದೇನಿದ್ದರೂ ಕಟ್ಟಿಗೆಯ ಹಲಗೆಗಳೇ. ಸ್ವಚ್ಛತೆ ಮತ್ತುತಾಳಿಕೆಯ ದೃಷ್ಟಿಯಿಂದ ಒಂದೊಂದೂ ಹೆಜ್ಜೆಗಳನೂ ಸೂಕ್ಷ್ಮತೆಯಿಂದ ಇಟ್ಟು ಗೋಡೆಗಳಿಗೆ ಕೈ ತಾಕದಂತೆ ನಡೆಯಬೇಕು. ನಾನೆಲ್ಲಿ ಇಲ್ಲಿಯ ಕಾಯ್ದೆ ಉಲ್ಲಂಘಿಸಿಬಿಡುವನೋ ಎಂದು ಸುನಂದಾಳ ಕಣ್ಣುಗಳು ನನ್ನನ್ನೇ ಕಾಯುತಿತ್ತು .

ಮನೆಗಳೆಲ್ಲಾ ತೋರಿಸಿದ ಆ ಏಜೆಂಟ ಅಲ್ಲಿಯ ಕಾಯ್ದೆಕಾನೂನಿನ ವಿಧಿ ವಿಧಾನಗಳನ್ನೂ ನಗುಮೊಗದಿಂದಲೇ
ವಿವರಿಸಿದ. “ನಮಗೆ ಸಮೀಪದಲ್ಲೇ ಮನೆ ಇದೆ ಗೆಳೆಯನಿಗಾಗಿ ಮನೆಹುಡುಕುತಿರುವೆ ” ಎಂದು ಸಂತೋಷ್ ನುಡಿದಾಗ ಮುಖದಲಿ ಯಾವುದೇ ಬೇಸರ ವ್ಯಕ್ತ ಪಡಿಸದೇ That’s all right ಎಂದು ನಮ್ಮನ್ನು ಬೀಳ್ಕೊಟ್ಟ ಅವನಿಗೆ ಇನ್ನೋರ್ವ ಗ್ರಾಹಕರು ಕಾಯುತಿದ್ದರು . ಇಲ್ಲಿ ಮನೆಗಳನ್ನು ಕೊಳ್ಳುವ ಮಾರಾಟ ಮಾಡುವವರ ನಡುವೆ ಏಜಂಟರದೇ ಕಾರುಬಾರು. ಅವರು ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವರು .

ಈಗಿರುವ Bridgewater ನ ಮನೆಗಿಂತ ಹಿಂದೆ ಐದು ವರ್ಷಗಳ ಕಾಲ ಇವರು ಹೈಲೆಂಡ ಪಾರ್ಕಿನಲಿ
ವಾಸಿಸುತ್ತಿದ್ದರಂತೆ. ಕಾವ್ಯ ನಮಗೆ ಆಗಾಗ ವೀಡಿಯೋ ಕಾಲಿನಲಿ, ಆಗಸದಿಂದ ಬರ್ಫಿನ ಸುರಿಮಳೆ, ಜಿಂಕೆಗಳ
ಓಡಾಟ , ತಾನು ಗ್ಯಾಲರಿಯಲಿ ನಿಂತಿದ್ದು ಎಲ್ಲವನ್ನೂ ಹೇಳುತಿದ್ದರಿಂದ ನನಗೂ ಆ ಮನೆ ನೋಡಿ ಬರುವ
ಆಸೆಯಾದ್ದರಿಂದ ಹಿಂದೆ ಇದ್ದ ಮನೆ ಕಡೆ ಪಯಣಿಸಿದೆವು.

ಇಲ್ಲಿ ಮಾನವ ಸಂಬಂಧಗಳೇ ಹೀಗೆ. ಎಲ್ಲರೂ ತಮ್ಮತಮ್ಮ ಕೆಲಸದಲ್ಲೇ ತಲ್ಲೀನ. ನಮ್ಮೂರಲ್ಲಾದರೆ,
ಐದು ವರ್ಷಗಳ ಕಾಲ ತಮ್ಮೊಂದಿಗಿದ್ಧ ಅದೂ ಬಸುರಿ ಹೆಣ್ಮಗಳು ಬಂದಾಗ ಅಕ್ಕಪಕ್ಕದ ಮನೆಯವರಿಗೆಲ್ಲಾ ಸಂಭ್ರಮ ಸಂತೋಷ… ಉಪಹಾರದೊಂದಿಗೆ ಸೀರೆಯ ಉಡುಗೊರೆ. ಈಗ ಇಲ್ಲಿ ಯಾರೊಂದಿಗೂ ಮಾತಿಲ್ಲ,
ಯಾರೂ ಗಮನಿಸಿಯೇ ಇಲ್ಲ, ಕಾವ್ಯಳಿಗಂತೂ ಏನೂ ಅನಿಸೇ ಇಲ್ಲ.

ಕಾವ್ಯಾಳನ್ನು ಗಮನಿಸಿದ ಗ್ಯಾಲರಿಯ ಮೇಲೆ ಕುಳಿತ ಬೆಕ್ಕೊಂದು “ಮಿಯಾಂವ್” ಎಂದು ಚಂಗನೆ ಹಾರಿ
ಮತ್ತೆ ತನ್ನ ಮನೆಯೊಳಗೇ ಸುತ್ತುತ್ತಿತ್ತು .

‍ಲೇಖಕರು avadhi

February 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: