ಅತ್ಯಾಚಾರದ ವಿಚಾರಣೆಯನ್ನು ಹಾಸ್ಯ ಪ್ರಸಂಗವೆಂಬಂತೆ ಆಡಿದ್ದೀರಿ..

-FASMAW
(Forum Against Social Media Assaults on Women)

ವಿಧಾನ ಸಭೆ ಅಧ್ಯಕ್ಷರಾದ
ಶ್ರೀ ರಮೇಶ್ ಕುಮಾರ್ ಅವರಿಗೆ,

ಇಂದು ಸದನದಲ್ಲಿ ಅತ್ಯಾಚಾರ ಸಂತ್ರಸ್ತರನ್ನು ಅತ್ಯಂತ ಹಗುರವಾಗಿ ಪರಿಗಣಿಸಿ, ಅತ್ಯಾಚಾರದ ವಿಚಾರಣೆಯನ್ನು ಹಾಸ್ಯ ಪ್ರಸಂಗವೆಂಬಂತೆ ಆಡಿರುವ ನಿಮ್ಮ ಮಾತುಗಳನ್ನು ಬಲವಾಗಿ ಖಂಡಿಸುತ್ತೇವೆ.

ವಿಧಾನಸಭೆಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತು, ಸದನದ ಸದಸ್ಯರ ಮಾತು, ನಡಾವಳಿಗಳನ್ನು ಘನತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಮರೆತು ನೀವು ಹೀಗೆ ಮಾತನಾಡಿರುವುದು ಬಹಳ ಖೇದಕರ.

ಆ ಮಾತುಗಳನ್ನು ತಮಾಷೆಯೆಂಬಂತೆ ನಗುತ್ತಾ ಆಸ್ವಾದಿಸಿದ ಸದನದ ಘನ ಸದಸ್ಯರ ಹೀನ ಮನಸ್ಥಿತಿ ಮತ್ತು ಇಂತಹದ್ದನ್ನು ಕಂಡೂ ಖಂಡಿಸದೆ ಉಳಿದ ಮಹಿಳಾ ಸದಸ್ಯರ ನಿಷ್ಕ್ರಿಯತೆ ಸಹಾ ಅಷ್ಟೇ ಖಂಡನೀಯ.

ನೀವು ಆಡಿರುವ ಮಾತುಗಳಿಗೆ ಸದನದಲ್ಲಿ ಕ್ಷಮೆ ಕೇಳಬೇಕು. ಇಲ್ಲವೇ ರಾಜಿನಾಮೆ ನೀಡಬೇಕು. ನಿಮ್ಮಂತಹ ಅಸೂಕ್ಷ್ಮ ಮನಸ್ಸಿನ ಸಭಾಧ್ಯಕ್ಷರು ನಮ್ಮ ರಾಜ್ಯಕ್ಕೆ ಖಂಡಿತ ಬೇಡ.

ಕೊನೆಗೊಂದು ಮಾತು.‌ “ನನಗೆ ಹೆಂಗಸರ ಬಗ್ಗೆ ಬಹಳ ಗೌರವ ಇದೆ. ಅವರನ್ನು ಎಂದೂ ಅಗೌರವದಿಂದ ನಡೆಸಿಕೊಂಡಿಲ್ಲ” ಇತ್ಯಾದಿ ಮಾತುಗಳನ್ನು ದಯವಿಟ್ಟು ಆಡಬೇಡಿ. ಅಂತಹ ಯಾವ ಸಮರ್ಥನೆಗಳೂ ಬೇಡ.

ನೀವು ಆಡಿರುವ ಮಾತು ಹೊಣೆಗೇಡಿತನದ ಮಾತು ಎನ್ನುವುದನ್ನು ಒಪ್ಪಿಕೊಂಡು ಕ್ಷಮೆ ಕೇಳಿ. ಇಲ್ಲವೆ ರಾಜಿನಾಮೆ ನೀಡಿ.

‍ಲೇಖಕರು avadhi

February 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Asha Latha

    ಹೌದು ನಿನ್ನೆ ದೂರದರ್ಶನ ವೀಕ್ಷಿಸಿದಾಗ ನನ್ನ ಅನಿಸಿಕೆಯು ಇದೆ ಆಗಿತ್ತು. ಸಭಾಧ್ಯಕ್ಷರು ಅತ್ಯಾಚಾರ ವಿಚಾರಣೆಯನ್ನುತುಂಬಾ ಹಾಸ್ಯಾಸ್ಪದವಾಗಿ ಮಾತನಾಡಿರುವುದು ಮನಸ್ಸಿಗೆ ತುಂಬಾ ಬೇಸರವಾಯುತು. ಆ ವಿಚಾರಣೆಯ ನೋವು ಅತ್ಯಾಕಾರಕ್ಕೆ ಒಳಪಟ್ಟ ಹೆಣ್ಣುಮಕ್ಕಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಇದು ಖಂಡಿತ ಹಾಸ್ಯದ ವಿಷಯವೇ ಅಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: