
ಅನುವಾದ: ಇಟಿಗಿ ಈರಣ್ಣ
ಮೂಲ: “ಕೋಶಿಶ್ ಕರ್ನೇ ವಾಲೋಂಕಿ ಕಭೀ ಹಾರ್ ನಹೀ ಹೋತೀ !”
ಓದಿದ್ದು: ಅಮಿತಾಬ್ ಬಚ್ಚನ್ (ಕರೋಡ್ ಪತಿ-ಯಲ್ಲಿ)
ಅಲೆಗೆ ಅಂಜುವ ನೌಕೆ ಎಂದೂ ದಡವ ಸೇರುವುದಿಲ್ಲ |
ಪ್ರಯತ್ನಶೀಲರಿಗೆಂದೂ ಸೋಲು ಆಗುವುದಿಲ್ಲ !!
ಸಣ್ಣ ಇರುವೆ, ದೊಡ್ಡಕಾಳನು ಹೊತ್ತು, ಮುಂದೆ ಸಾಗುವುದು !
ಏರುತ್ತ ಗೋಡೆಯನು, ನೂರು ಬಾರಿ ತಾ ಜಾರುವುದು !!
ಮನದ ವಿಶ್ವಾಸ ! ನರನಾಡಿಗಳಲಿ ಸಾಹಸ ತುಂಬುವುದು !
ಏಳುತ್ತ ಬೀಳುವುದು, ಬೀಳುತ್ತ ಏಳುವುದು, ಎದ್ದು ಸಾಗುವುದು !!
ಕೊನೆಗೂ ಅದರ ಶ್ರಮ, ವ್ಯರ್ಥವಾಗುವುದಿಲ್ಲ !
ಪ್ರಯತ್ನಶೀಲರಿಗೆಂದೂ ಸೋಲು ಆಗುವುದಿಲ್ಲ !!
ಮುಳುಗುಗಾರನು ಸಾಗರದಿ ಮುಳುಗು ಹಾಕುವನು ! 2
ಮುಳುಮುಳುಗಿ ನೂರುಸಲ, ಬರಿಗೈಲಿ ಬರುವನು !!
ಆಳದಲಿ ಇರುವ ಮುತ್ತು, ಸಹಜ-ಸುಮ್ಮನೆ ಸಿಗುವುದಿಲ್ಲ !! 2
ಆದರೂ, ಪ್ರತಿಸಲವು ಆತನಿಗೆ, ಬರಿಗೈಯೇ ಇರುವುದಿಲ್ಲ !
ಪ್ರಯತ್ನಶೀಲರಿಗೆಂದೂ ಸೋಲು ಆಗುವುದಿಲ್ಲ !!
ಅಸಫಲತೆಯೊಂದು ಸವಾಲು !! ಸ್ವೀಕರಿಸು ನೀ ಇದನು !! 2
ಕೊರತೆಯಾದುದು ಎಲ್ಲಿ ?? ನೋಡು, ಸರಿಪಡಿಸು ನೀ ಅದನು !!
ಸಫಲನಾಗುವವರೆಗೂ, ನಿದಿರೆ-ನೆಮ್ಮದಿಯ ತೊರೆ ನೀನು ! 2
ಸಂಘರ್ಷದೀ ಮೈದಾನ ಬಿಟ್ಟು, ಓಡಿ ಹೋಗದಿರು ನೀನು !!
ಏನೂ ಮಾಡಲಾಗದೇ, ಇಲ್ಲಿ ಜಯಜಯಕಾರವಾಗುವುದಿಲ್ಲ !!
ಪ್ರಯತ್ನ ಶೀಲರಿಗೆಂದೂ ಸೋಲು ಆಗುವುದಿಲ್ಲ !!!





0 Comments