ಇಲ್ಲಿ ಎರಡು ಫೋಟೋಗಳಿವೆ ಈ ಎರಡು ಫೋಟೋಗಳ ಮಧ್ಯೆ ಸಾಕಷ್ಟು ನೀರು ಗಂಗಾ ನದಿಯಲ್ಲಿ ಹರಿದು ಹೋಗಿದೆ. ಅಷ್ಟೇ ಅಲ್ಲಾ ವೋಲ್ಗಾ ದಲ್ಲಿಯೂ .. ಇಲ್ಲಿರುವವರು ಯಾರೆಂದರೆ ನೋ ಡೌಟ್.. ನಮ್ಮ ವೀರಣ್ಣ ಮಡಿವಾಳರ.
ಒಂದು ಕಾಲಕ್ಕೆ ಹುಬ್ಬಳ್ಳಿ ಧಾರವಾಡದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ವೀರಣ್ಣ ಅವರನ್ನು ಹೀಗೆ ನೋಡಬಹುದಿತ್ತು. ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ ಜೊತೆಗೆ ಓಡಾಡಿ ಪುಸ್ತಕದ ನಂಟು ಎಲ್ಲರಿಗೂ ಇರುವಂತೆ ನೋಡಿಕೊಳ್ಳುತ್ತಿದ್ದರು. ಅದು ಅವರಿಗೆ ಈಗಲೂ ಖುಷಿಯ, ಹೆಮ್ಮೆಯ ವಿಷಯ. ಈಗಲೂ ಅಂತಹ ಸಂದರ್ಭ ಬಂದರೆ ವೀರಣ್ಣ ಮಡಿವಾಳರ ಅದಕ್ಕೆ ಹಾರುತ್ತಾರೆ.
ಕಾಲ ಉರುಳಿತು..
ಧಾರವಾಡದ ನೆಲದೊಳಗೆ ಗುಪ್ತಗಾಮಿನಿಯಾಗಿ ಶಾಲ್ಮಲೆ ಎಷ್ಟು ಹರಿದಳೋ ಗೊತ್ತಿಲ್ಲ. ಈಗ ಅದೇ ಪುಸ್ತಕದ ಮುಂದೆ, ಅದೇ ಖದರ್ ನೊಂದಿಗೆ ಅವರ ಮಗಳು ಕುಳಿತಿದ್ದಾಳೆ.
ಫೋಟೋ ಇರಬೇಕು.. ನೆನಪು ಹರಡಲು ಆಲ್ವಾ ಎರಡು ತಲೆಮಾರಿನ ಕೊಂಡಿಯಾಗಿ..






0 Comments