ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಿಷೇಕ ಬಳೆ ಹೊಸ ಕವಿತೆ- ಮತ್ತೊಬ್ಬ ಹುಚ್ಚ

ಅಭಿಷೇಕ ಬಳೆ ಮಸರಕಲ್

**

ಈ 

ಶಹರಕ್ಕೆ

ಬಂದ

ಮತ್ತೊಬ್ಬ ಹುಚ್ಚ

ಜಂಗಮ ಫಕೀರನ ಜೋಳಿಗೆ

ಹೆಗಲಿಗೇರಿಸಿಕೊಂಡು

ಗೋಡೆ ಕಟ್ಟುವ ಕೈಗಳಿಗೆ

ದ್ವೇಷ ಬಿತ್ತುವ ಮನಸುಗಳಿಗೆ

ಕತ್ತು ಸೀಳುವ ತಲ್ವಾರ್ ಗಳಿಗೆ

ಕಲ್ಲಂಗಡಿ ಒಡೆಯುವ ಕಲ್ಲೆದೆಗಳಿಗೆ

ಮದ್ದು ಗುಂಡು ಎಸೆಯುವ ಗಡಿಗಳಿಗೆ

ಮೈಲಿಗೆ ಎನ್ನುವ ಗುಡಿ ಮಸೀದಿ ಚರ್ಚ್ ಗಳಿಗೆ

ತಾಯಿಗಿಂತ ದೇವರು ದೊಡ್ಡವನು ಎನ್ನುವ ಧರ್ಮಗ್ರಂಥದ ಹಾಳೆಗಳಿಗೆ

ಮನುಷ್ಯ ಪ್ರೀತಿಯ

ಹಂಚಲು ಹೊರಟಿದ್ದಾನೆ

ಅರೇ

ಇವನೆಂಥ ಹುಚ್ಚ

ಇಲ್ಲಿ

ಪ್ರೀತಿ, ಮಾನವೀಯತೆ

ಕರುಣೆ, ಅಂತಃಕರಣ ಬಹು

ತುಟ್ಟಿ ಸರಕುಗಳು 

ಹೌದು

ಈ ದುನಿಯಾದಲ್ಲಿ 

ಹುಚ್ಚರಷ್ಟೇ ಪ್ರೀತಿಯನ್ನು ಹಂಚುತ್ತಾರೆ 

ಮತ್ತು ಮನುಷ್ಯರು ದ್ವೇಷವನ್ನು

‍ಲೇಖಕರು avadhi

18 January, 2024

1 Comment

  1. Bheemoji Rao Jagatap

    ಅವಧಿ ಬಗ್ಗೆ ಆಸಕ್ತಿ ಮೂಡಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading