ವಿಶಾಲ್ ಮ್ಯಾಸರ್
**
ಅತಿಯಾಗಿ ನೆಗಡಿಯಾದರೆ
ಮೂಗಿನ ನರ ಪಟ ಪಟ
ಒಡೆದುಕೊಳ್ಳುವಂತೆ
ಏನೇನಕ್ಕೊ ಮುನ್ಸೂಚನೆ
ಎಡದ್ದೋ, ಬಲದ್ದೋ
ರೆಪ್ಪೆ ಹಾರುತ್ತವಂತೆ
ಎಷ್ಟೋ ದೂರ ನಡೆದು ನಡೆದು
ಮತ್ತೆ ನಿಂತು, ಕುಂತು
ಗುರಿಯ ಕುರಿತು ಯೋಚಿಸುವಂತೆ
ಎಲ್ಲದಕ್ಕೂ ಎಲ್ಲವಕ್ಕೂ
ತೆಲೆಗುಣುಕಿ ಹಾಕಿದರೆ
ಅಂದುಕೊಳ್ಳುತ್ತಾರೆ ಒಪ್ಪಿದಂತೆ
ಅದೆಷ್ಟು ತೀವ್ರ ಬದುಕು
ಪ್ರತಿ ಗಾಳಿಗೂ ಅಲ್ಲಾಡಿ
ಎಲೆ ಉದುರಿ
ಗರಿ ಗೆದುರಿ
ಕುಣಿ ಕುಣಿದು
ನಕ್ಕಂತೆ ಅತ್ತಂತೆ
ಬದುಕಿ ಬದುಕಿ ಸತ್ತಂತೆ….!
0 ಪ್ರತಿಕ್ರಿಯೆಗಳು