ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಿಷೇಕ ಬಳೆ ಮಸರಕಲ್ ಕವಿತೆ- ಹಾಯ್ಕುಗಳು…

ಅಭಿಷೇಕ ಬಳೆ ಮಸರಕಲ್

ಹಳೇ ನೆನಪು
ಬಿಟ್ಟು ಹೋದ ಗೆಳತಿ
ನೊಂದ ಹೃದಯ

ಅವಳ ನಗು
ಆಗಾಗ ಬಿದ್ದ ಮಳೆ
ಎದೆಯಂಗಳ

ಕಾಲದ ಹಕ್ಕಿ
ಗುಟುರು ಹಾಕಿದಾಗ
ಜೀವನ ಕೊನೆ

ಬತ್ತಿದ ಕೆರೆ
ಮೀನುಗಳ ಮರಣ
ಔತಣ ಕೂಟ

ಹಿಮದ ಗೆರೆ
ಬಾನಿನ ಬಯಲಲಿ
ಬೆಳ್ಳಕ್ಕಿ ಸಾಲು

ನೆಲ ತಬ್ಬಿತು
ಮಳೆಯ ಹನಿಗಳ
ಪ್ರೀತಿಯಿಂದಲಿ

ಮಾಗಿಯ ಸಂಜೆ
ನನ್ನಾಕೆಯ ನೆನಪು
ತಂಪಾದ ಗಾಳಿ

‍ಲೇಖಕರು Admin

24 September, 2022

1 Comment

  1. prathibha nandakumar

    ನಿಮ್ಮ ಕವನಗಳು ಕುತೂಹಲಕಾರಿಯಾಗಿವೆ. ಈ ಸಂಜೆಯ ಬಯೋಡೇಟಾ…, ನಿನ್ನ ನೆನಪಿನ ಬೆಳಕು … ಮತ್ತು ಈ ಹಾಯ್ಕುಗಳು… ವೆರಿ ಗುಡ್.
    ನಿಮ್ಮ ಸಂಕಲನ ‘ಸಂತೆಯೊಳಗೆ ಸಿಕ್ಕ ಬುದ್ಧ’ ಸಿಗಬಹುದೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading