ಅಬ್ಬಾ, ಈ ಲೋಕವೇ..

sandhyarani3ಒಂದು ನೃತ್ಯ ನಾಟಕ ಇದೆ, ನಾಲ್ಕಾರು ನೃತ್ಯಗಳನ್ನು ಹಲವಾರು ಎಳೆಗಳಿಂದ ಪೋಣಿಸಿ ಹೇಳುವ ಕೆಲಸ ನಿರೂಪಕನದು. ಅದಕ್ಕೆ ನೀವು ಸ್ಕ್ರಿಪ್ಟ್ ಬರೀಬಹುದಾ ಅಂತ ಅನುರಾಧ ನನ್ನನ್ನು ಕೇಳಿದಾಗ ನನಗೆ ಒಂದೇ ಸಮಯದಲ್ಲಿ ಹೆದರಿಕೆ ಮತ್ತು ಥ್ರಿಲ್ ಎರಡೂ ಆಯಿತು. ಲೇಖನ ಬರೆಯುವುದು ಬೇರೆ, ಸ್ಕ್ರಿಪ್ಟ್ ಬರೆಯುವುದು ಬೇರೆ. ಅದು ಇದುವರೆಗೂ ನಾ ಮಾಡದ ಕೆಲಸ, ಹಾಗಾಗಿಯೇ ಹೆದರಿಕೆ, ಮತ್ತು ಆ ಕಾರಣಕ್ಕಾಗಿಯೇ ಥ್ರಿಲ್ ಎರಡೂ ಆಯಿತು. ಹೂ ಅಂದು ಬಂದೆ. ಹತ್ತು ದಿವಸಗಳು ಸಮಯ ಇದ್ದವು, ಮೊದಲ ಎಂಟು ದಿನಗಳನ್ನು ಆರಾಮಾಗಿ ಕಳೆದು, ಕೊನೆಯ ಎರಡು ದಿನಗಳಲ್ಲಿ ಬರೆದೆ, ಕಳಿಸಿದೆ. ಬದಲಾವಣೆ ಸೂಚಿಸಿದರು, ಮಾಡಿದೆ, ತಿದ್ದಿದೆ, ಕಳಿಸಿದೆ. ನಿನ್ನೆ ಅದರ ಗ್ರ್ಯಾಂಡ್ ರಿಹರ್ಸಲ್.

ನನ್ನದೇ ಮಾತುಗಳನ್ನು ಅಭಿಜಿತ್ ಬಾಯಲ್ಲಿ ಕೇಳುವಾಗ ಅದು ಕೊಟ್ಟ ಸಂತಸವೇ ಬೇರೆ. ಮೊದಲ ದೃಶ್ಯದಲ್ಲಿ ಅನುರಾಧ ಒಬ್ಬರೇ ಚದುರಂಗ ಬಲದ ನಟನೆ ಮಾಡುವಾಗ ನಾನು ಮೂಕವಿಸ್ಮಿತಳಾಗಿ ನಿಂತಿದ್ದೆ. ಯುದ್ಧ ಬೆಂಗಳೂರನ್ನು ಕಟ್ಟಿದ ಬಗೆಯನ್ನು ಹೇಳುತ್ತಲೇ ಯುದ್ಧದ ನಿರರ್ಥಕತೆಯನ್ನೂ ಹೇಳಬೇಕಿತ್ತು, ಜೊತೆಗೆ ಯುದ್ಧವನ್ನು ನಗರೀಕರಣಕ್ಕೂ ಸಮೀಕರಿಸಬೇಕಿತ್ತು. ಕಸ್ತೂರಬಾ ರಸ್ತೆಯಲ್ಲಿನ ಈ ಮ್ಯೂಸಿಯಂ ಸುತ್ತಾ ಓಡಾಡುತ್ತಾ ಕಲಾವಿದರು ನಮ್ಮನ್ನೆಲ್ಲಾ ಇನ್ನೊಂದು ಲೋಕಕ್ಕೇ ಕರೆದುಕೊಂಡು ಹೋಗಿದ್ದರು.

ರೂಪಕದ ಪ್ರದರ್ಶನ ಡಿಸೆಂಬರ್ 11, 12, 13 ಬೆಂಗಳೂರು ಮ್ಯೂಸಿಯಂ ನಲ್ಲಿ. ಮಧ್ಯಾಹ್ನ 3 30 ಕ್ಕೆ  .

ನಿನ್ನೆ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೂ ಅಭಿನಂದನೆಗಳು.

Thank You Anuradha Venkataraman for making me explore a new media of expression, Thank you Abhijith Revathi for giving expression to my words, Thank you Rosy D’Souza

ನಿನ್ನಿನ ಪ್ರದರ್ಶನದ ಕೆಲವು ಚಿತ್ರಗಳು ಇಲ್ಲಿವೆ.

sandhya museum7

sandhya museum1

sandhya museum6

sandhya museum2

sandhya museum4

sandhya museum5

sandhya museum8

‍ಲೇಖಕರು admin

November 21, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: