ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಎಂಬ ಗಂಧದ ಕೊರಡು

ಸಿಂಧು ಭಾರ್ಗವ

ಅಪ್ಪ ಎಂಬ ಗಂಧದ ಕೊರಡಿಗೆ
ತೇಯುವುದೇ ಕೆಲಸ
ಘಮವನು ನಂಬಿ‌ ನಡೆವ ಜೀವಗಳಿಗೆ
ಹರಡುವುದೇ ಕೆಲಸ//

ದುಡಿದು ದಣಿದು ಬೆವರ ಸುರಿಸಿ
ಮನೆ ಕಡೆಗೆ ನಡೆಯುವ
ನಗುಮುಖದ ಮಡಿದಿಯ
ಹಿತ ನುಡಿಗಳ‌ ಬಯಸುವ//

ನಾಳಿನ ಕನಸಿಗಳ ಹೆಣೆಯಲು
ಕಸೂತಿಯಲಿ ತೊಡಗುವ
ಬಣ್ಣದ ಬಯಕೆಗಳ ನೀಗಿಸಲು
ದೇಹವ ಹುಣ್ಣಾಗಿಸುವ//

ಅಪ್ಪ ಮಗುವಾಗುವ
ಮೊಮ್ಮಗುವಿನ ಆಟಪಾಠವ ನೋಡುತ
ಅಪ್ಪ ಮೌನಿಯಾಗುವ
ತನ್ನೆಲ್ಲ ಸೇವೆಯನು ನೆನೆಯುತ//

ಅಪ್ಪ ಬಯಸುವುದು ಹಿಡಿ ಪ್ರೀತಿ,
ಕಾಳಜಿ ತುಂಬಿದ ಮಾತನು
ಇಳಿವಯಸಿನ ತಂದೆಗೆ ನೀಡಿ
ಧೈರ್ಯ, ಭರವಸೆಯನು//

‍ಲೇಖಕರು Avadhi

18 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading