ಅಪ್ಪನ ಕಣ್ಣಲ್ಲಿ ಉಗಾದಿಯ ಕನಸು

bidaloti ranganath

ಬಿದಲೋಟಿ ರಂಗನಾಥ್

ಅದು,
ಮಣ್ಣಿನ ಗೋಡೆ
ಸುಣ್ಣ ಬಳಿಯಲು
ಅಪ್ಪನ ಕಿಸೆಯಲ್ಲಿ
ನಯಾ ಪೈಸವಿರಲಿಲ್ಲ

questionsಮಕ್ಕಳು ಅಳುತಾವೆ
ಸರೀಕರ ಹೊಸ ಬಟ್ಟೆ ನೋಡಿ
ಕೂಲಿಗೆ ಕರಿಯೋರಿಲ್ಲ
ಬಿರು ಬೇಸಿಗೆ
ಹಳೆ ಬಟ್ಟೆ ಹೊಗೆಯಲು
ಅಮ್ಮಗೆ ಹುಷಾರಿಲ್ಲ.
ಹೊಟ್ಟೆಗೆ ಕೂಳಿಲ್ಲ.

ಬೇವಿನ ಮರದ ತಲೆಯ ತುಂಬಾ ಹೂವು
ಹೊಂಗೆಯ ತಂಪು ನೆರಳು
ಮಾವಿನ ಕಾಯಿಯ ಇಣುಕು
ಮನೆಯಲ್ಲಿ ಬಿರು ಬೇಸಿಗೆ

ಅನ್ನವಿಲ್ಲದ ನನಗೆ
ಹೋಳಿಗೆಯ ಕನಸು
ಐದು ಹತ್ತು ಪೈಸೆಯ ಕುಟ್ಟಾಟ ಮತ್ತು
ಎಂಟಾಣಿ ರೂಪಾಯಿ ಎತ್ತಾಟದ ಕನಸು
ದೊಡ್ಡವರ ಹೆಡ್ಡಾಟ ನೋಡುವ ಬಯಕೆ.

ನನ್ನಲ್ಲಿ ಕಾಸಿಲ್ಲ
ಆಟವ ನೋಡುತ
ಮಿಣ ಮಿಣ ಬಿಡುವ ದುಃಖದ ಕಣ್ಣುಗಳು
ಮುಂದೆ ನಿಂತಿವೆ
ದನಗಳಿಗೆ ಹುಲ್ಲಾಕಿಲ್ಲ ಎಂತೋದನೋ
ಎನ್ನವ ಅಪ್ಪನ ಭಯ.

ತಲೆ ಮೇಲೆ ಕೈ ಹೊತ್ತು
ಕೂತ ಅಪ್ಪಂಗೆ ಕೊಟ್ಟೆ ಐಡಿಯ
‘ನಡಿ ಹೋಗೋಣ’
ಅಕ್ಕಲ ಹೊಂಗೆ ಕಾಯಿ ಹಾಯಲು
ಕುಟ್ಟಿ ಬೀಜ ತಗೆದು ಮಾರಿ ಉಗಾದಿ
ಮಾಡೋಣ ಸರೀಕರಂತೆ.
ಇನ್ನು ಐದು ದಿನ ಐತೆ ಉಗಾದಿ.!

ಅಪ್ಪನ ಕಣ್ಣಲ್ಲಿ ಉಗಾದಿಯ ಕನಸು.
ನನಗೊ ಹೊಸ ಬಟ್ಟೆ ತೊಡುವ ತವಕ
ಹೊರಟೆವು ಲಘು ಬಗೆ .

ಬಯಲು ಬಯಲೆಲ್ಲಾ ತಿರುಗಿ
ಹೊಂಗೆಮರದ ನೆಲ ತಡಕಿ
ಕಾಯಿ ಕಾಯಿ ಕೂಡಾಕಿ ಕುಟ್ಟಿ ಮಾರಿ
ಮಾಡಿದೆವು ಉಗಾದಿ
ಬೆಲ್ಲ ಹುರುಳಿ ಮಿಶ್ರಿತ ಹೋಳಿಗೆ.!
ಪಕ್ಕದ ಮನೆಯಲಿ ತೊಗರಿ ಬೇಳೆಯ ಹೋಳಿಗೆ.
ಬೆಳ್ಳಗಿದೆ ಕೊಡು ಎಂದೆ
ಕೊಡಲ್ಲ ಎಂದು ತಲೆಯಾಡಿಸಿದ.
ಅಲ್ಲೇ ಹುಟ್ಟಿತೆ? ಬಡವ ಬಲ್ಲಿದ ಎನ್ನುವ ಭೇದ.!

ಅಂತೂ ಆಯಿತು ಉಗಾದಿ
ಸಂತೆ ಬಟ್ಟೆ ನಮಗೆ ತೊಡಿಸಿ.
ಕಾಸು ಕುಟ್ಟುವ ಕನಸು
ಸರೀಕರ ಆಟದ ಜೊತೆ ಮಣ್ಣಾಯಿತು.! ಬಡವರ ಚೌಕಾಬಾರ ಕಳೆ ನೀಡಿತು.

‍ಲೇಖಕರು admin

April 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. hanumantharaju c.s.

    ನೆನ್ನೆಯಿಂದ ನನ್ನ ಕಾಡುತ್ತಿದ್ದ, ನನ್ನ ಬಾಲ್ಯದಲ್ಲಿ ನಾ ಉಂಡ ಉಗಾದಿ ಯ ನೆನಪು ಯಥಾವತ್ತಾಗಿ ರಂಗನಾಥ್ ರ ಅಕ್ಷರಗಳಲ್ಲಿ ಇಂದು .!!ಖುಷಿಯಾಯ್ತು ಸರ್.ಧನ್ಯವಾದಗಳು.

    ಪ್ರತಿಕ್ರಿಯೆ
  2. ಬಿದಲೋಟಿ ರಂಗನಾಥ್

    ಧನ್ಯವಾದಗಳು ಸಿ ಎಸ್

    ಪ್ರತಿಕ್ರಿಯೆ
  3. narayanppam9@gmai

    ರಂಗನಾಥ ಸರ್ ಬಡವರ ಪಾಲಿಗೆ ಯುಗಾದಿ ಬರಲಾರದು. ಹಣವಂತರ ಮೆರೆದಾಟ.
    ನಿಮ್ಮ ಕವಿತೆ ನನ್ನ ಬದುಕಿನ ಹಲವು ಹಲವು ನೆನಪುಗಳನ್ನು ತಂದಿತು.ಅಳು ಬಂತು ಅತ್ತೆ. ಈ ಬಾರಿ ಹಬ್ಬ ಮಾಡಲಿಲ್ಲ. ಕವಿತೆ ಕಾಡಿತು ರಂಗಣ್ಣ

    ಪ್ರತಿಕ್ರಿಯೆ
  4. ಬಿದಲೋಟಿ ರಂಗನಾಥ್

    ಧನ್ಯವಾದಗಳು ನಾರಾಯಣಪ್ಪ ಸರ್ ಮತ್ತು ಅಕ್ಕ ಮಹಾದೇವಿ ಮೆಡಮ್

    ಪ್ರತಿಕ್ರಿಯೆ
  5. vasudeva nadig

    ee kaviteyallina bevu, bellavannu maresuvantide…van go na chitragalhu novinalli addhida kuncha vaadarae …ranganath padyagalhu sankatadalli saridaadida aksharagalhu…padya ulhisi biduva vishaada bega karagadhu..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: