ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಿತಾ ಪಿ ಹೊಸ ಕವಿತೆ – ಎಳೆಯರ ಗೆಳೆಯ..

ಅನಿತಾ ಪಿ ತಾಕೊಡೆ

ಪರದೆಯೊಳಗೆ ಚಿತ್ರವಿಚಿತ್ರವಾಗಿ ಕಾಣಿಸಿ
ಪರಿಧಿಯೊಳಗೆಯೇ ದಿಗಿಲು ಮೂಡಿಸಿ,
ಆಪ್ತವಾಗುವ ಎಳೆಯರ ಗೆಳೆಯನಲ್ಲವೆ ನೀನು!

ಅಂಕೆಯ ಮೀರಿ ಬರುವಾಸೆ ನಿನಗೂ ಇರಬಹುದು
ನೋಡುವಾತುರ ಕಾತುರ ನಮಗೂ…!
ಬರುವೆಯಾದರೆ ಬಂದು ಬಿಡು
ನೀ ಇದ್ದ ಹಾಗಿಲ್ಲ ಇಂದು
ಸುಕೃತ ವಿಕೃತಗಳ ಅದಲು ಬದಲಿನಾಟವಿಹುದು ಎಲ್ಲೆಲ್ಲೂ!

ಇಲ್ಲೂ ನಿನ್ನಲ್ಲಿರುವಷ್ಟೆ ರೌದ್ರ ವೀರ ಭಯಾನಕ ಅದ್ಭುತ
ಸ್ಥಾಯಿ ಭಾವಗಳ ಹಲವು ತೆರಹಿನ ಮುಖಗಳು!
ಹಾಗೇ ಹುಡುಕಿದರೆ ಸಿಗದು
ಅರಿವಿನ ಪರಿಧಿಯೊಳಗೆ, ಅನುಭವದ ಮೂಸೆಯಲಿ
ಬದುಕಿನ ಏಗುಮಾಗಿನೊಳಗಣ್ಣು ತೆರೆಯಬೇಕು

ಇಲ್ಲಿ ಆಕಾರ ವಿಕಾರವಿದ್ದರೆ ಸಾಲದು
ಎಲ್ಲದರ ನಡುವೆ ಇರುವ ಹಾಗೆಯೇ
ನಗುವ ಬಗೆಯ ಕಲಿಯಬೇಕು
ಇತಿಮಿತಿಗಳ ಮರೆತು, ಹದವರಿತು
ನಗಬೇಕು ನಕ್ಕು ಹಗುರಾಗಬೇಕು
ನೋವಿನಲೂ ನಗುವ ಕಲೆ,
ಬದುಕಿನ ಪುಟಪುಟಗಳಲಿ ಕರಗತವಾಗಬೇಕು

‍ಲೇಖಕರು Admin

21 January, 2022

1 Comment

  1. Bhimarao

    ಕವಿತೆ ಯ ಭಾವ ಅರ್ಥ ವಾಗುತ್ತಿಲ್ಲ.ವಿವರಣೆ ಬೇಕು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading