ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಘ ಕವಿತೆ – ಸೋಡಾ ಬುಡ್ಡಿ Harry Potter..

ಅನಘ

ದಾರದಿಂದ ಬಿಗಿದ ಕನ್ನಡಕ ತೊಟ್ಟ
ಪುಟ್ಟ ಹುಡುಗ ಟಿ.ವಿ ಪರದೆಯ
ಮೇಲೆ ಸಿನಿಮಾ ನೋಡದೇ
ಕನಸುಗಳ ನೋಡುತ್ತಾ ಬೆಳೆದ
ಮಾಯಾ ಲೋಕದ ಶಾಲೆಯೊಂದರಲ್ಲಿ
ತನ್ನಂತೇ ಕನ್ನಡಕ ತೊಟ್ಟ ಬಾಲಕ
ಸೋಡಾ ಬುಡ್ಡಿ ಎಂದೆನಿಸಿಕೊಳ್ಳದೇ
Potter ಇಂದೆಲ್ಲರೂ ಕೊಂಡಾಡುತ್ತಿದ್ದ
ಮಾಯಾಲೋಕದ ಕನಸು
ಅವನ ಮನಸಿನಲ್ಲಿ ಮೆಲ್ಲನೆ
ಮೊಳಕೆಯೊಡೆಯತೊಡಗಿತು
Harry Potter snitch ಹಿಂದೆ
ಹೊರಟಂತೇ ಅವನೂ ಹೊರಟ
ಕಂಡ ಕನಸ ಕೈಲಿ ಹಿಡಿಯಲು
ಮಾಯೆ… ಕನಸು…
ಸಾಕಾಗಿತ್ತೇನೋ…
ಚಿಕ್ಕವನಾಗೆ ಇದಿದ್ದರೆ
ಆದರೆ ಇರಲು ಬಿಡುವವರಾರು?

ದಿನ ಕಳೆದಂತೆಲ್ಲಾ
ಅವನು ಬೆಳೆದಂತೆಲ್ಲಾ
ಮಳಕೆಯೊಡೆದ ಕನಸು ಕದಡಿತು
ಸೋಡಾಬುಡ್ಡಿ ತೊಟ್ಟವರೆಲ್ಲ
Harry Potter ಆಗೋಲ್ಲ ಎಂಬ
ಅರಿವು ಹಠಾತ್ತನೆ ಮೆದುಳಿಗೆ ಅಪ್ಪಳಿಸಿತು
ಮಾಯೆ… ಕನಸು…
ನೇಸರನ ಶಾಖಕ್ಕೆ
ಮುಂಜಾವಿನ ಮಂಜಿನಂತೆ ಕರಗಿಹೋಯಿತು
ನೀರಸ ಬದುಕಿನ ಬವಣೆಗಳನೆಲ್ಲ
ನೇಸರನು ತೆರೆದಿಡುತ್ತಾ ಹೋದ
ಒಂದೊಂದಾಗೇ
ಕನಸೆಲ್ಲಾ
ಮಾಯವಾಯಿತು

ಸುಮಾರು ವರ್ಷಗಳುರುಳಿದವು
ಕನಸು… ಮಾಯೆ…
ಮರೆತುಹೋಗಿತ್ತು…
ಆದರೆ ಈಗ Harry Potterನಂತೆ
ಗುಂಡಗಿನ ಕನ್ನಡಕದ ಜೊತೆ
ಕಪ್ಪು gown ಅನ್ನು ತೊಟ್ಟಿದ್ದ
ಆ ಯುವಕ
Hogwarts ಅಲ್ಲಿರಲಿಲ್ಲ
High Court ಅಲ್ಲಿದ್ದ
ಕೈಯಲ್ಲಿ wand ಇರಲಿಲ್ಲ
file ಇತ್ತು
ಟಿ.ವಿ ಪರದೆಯಲ್ಲಿ ಕಂಡಂತೆ
ಇಲ್ಲೂ ಎಲ್ಲಾ Greek and Latin ಅಲ್ಲಿ
ಮಾತನಾಡುವವರೇ
“Expectro Petronum”
“Injuria Sine Damnum”
ಕಠಿಣಾತಿಕಠಿಣ spell ಗಳಿಗೆ
Harry Potter “Expelliarmus”
ಎನ್ನುತ್ತಿದ್ದಂತೆ
ಮಾರುದ್ದದ ವಾದಕ್ಕೂ ಅವನು
“Adjournment” ಎನ್ನುತ್ತಿದ್ದ
ಮಾಯೆ… ಕನಸು… ಬದುಕು…
ಮುಂಜಾವಿಗೆ ಮಂಜು ಮುಸುಕಿತ್ತು
ನೇಸರನೂ ಇದ್ದ

‍ಲೇಖಕರು avadhi

28 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading