ಅಪ್ಪನಿಗೆ
ಚೈತ್ರಿಕಾ ಶ್ರೀದರ್ ಹೆಗಡೆ
ಹೊತ್ತು ಹೋಗದೆ
ಪಗಡೆ ಮಣೆ ಎಳೆದುಕೊಂಡು
ಕವಡೆ ಕುಲುಕುತ್ತ
ಕಾಯಿ ನಡೆಸುವ ನೀನು
ಅದೇಕೆ ಹಾಗೇ ಬೆಚ್ಚುತೀ
ಅಲ್ಲೆಲ್ಲೋ ಮರ ಎಲೆ ಉದುರಿಸಿದ ಸದ್ದಿಗೆ?
ಬೇಗ ಆಡಿ ಮುಗಿಸು,
ಕುರ್ಚಿ,ದಿಂಬು,ಚಾಪೆ ಹರಗಾಣವನೆಲ್ಲ
ಪಟ್ಟಗಿಡುವುದಿದೆ ನನಗೆ..
ಜೊತೆಗೆ ಕಾರಣ ಹುಡುಕುವುದಿದೆ
ಈ ಮಳೆ ಹೊಯ್ಯುವುದಕ್ಕೆ,
ನೆಲ ಹಿಂಜುವುದಕ್ಕೆ,
ನೀನು ಹುಚ್ಚಂಪರಿ
ಕವಳ ಹಾಕುವುದಕ್ಕೆ…
ಬೀಡಿಕಟ್ಟು ಬಚ್ಚಿಟ್ಟ ಮೇಲು
ಅದೇಕೆ ಹಾಗೆ ಕಡ್ಡಿ ಗೀರುತ್ತ
ಮನೆಯೆಲ್ಲ ಹುಡುಕುತ್ತೀ,
ಬಾ.. ಸ್ನಾನಕ್ಕೂ ಮೊದಲೇ
ಹಚ್ಚಿ ಹೋಗುತ್ತೀನಿ ಕಪ್ಪು ಬಣ್ಣವ
ಕೂದಲಿಗೆ..
ಮುಕ್ಕು ಹಿಡಿದ ಗಡ್ಡಕ್ಕೂ ಚೂರು..
ಆಮೇಲೆ ನೆಲ ಒರೆಸುವುದಿದೆ..
ಬಟ್ಟೆ ಒಗೆಯುವುದಿದೆ…
ಅಯ್ಯೋ ನಿನ್ನ ದೊರಗು
ದುಪ್ಪಟಿಯ ಹಿಂಡಲಾಗುವುದಿಲ್ಲ..
ಕಿಸೆಯಲ್ಲಿನ ದುಡ್ಡು,ಚೀಟಿಯೆನ್ನೆಲ್ಲ
ನೆನಪಿಟ್ಟು ತೆಗೆದಿಡಲಾಗುವುದಿಲ್ಲ..
ಅರೇ ಇಲ್ಲಿನೋಡು
ಮತ್ತೊಂದು ನಿರಿಗೆ ಬಿದ್ದಿದೆ
ತುಟಿ ಪಕ್ಕ..!
ಹೆದರಬೇಡ ಆ ಹಳದಿ ಎಲೆ
ಉದುರೊವಾಗ ಸಂಜೆಯಾಗುತ್ತೆ..
ಅಷ್ಟು ಹೊತ್ತಿಗೆ ನೀನು
ಲುಂಗಿ ಪಕ್ಕೆಯಲ್ಲಿರೊ ಕವಳ
ಕೀಳುತ್ತ ಅಮ್ಮನ ಗೋರಿ ಕಡೆ
ಹೋಗಿ ಬರಬಹುದು…
ಅವಳು ನಿನ್ನೆಯಂತೆ ಮುಖ
ಮುಖ ನೋಡುವುದಿಲ್ಲ..
ಗುರುತು ಹಿಡಿದು ಮಾತಾಡಿಸುತ್ತಾಳೆ,
ಬೀಡಿ ವಾಸನೆ ಬಂದರೂ ಸಾಕು
ಜಗಳ ಹೊಡೆದೇ ಕಳಿಸುತ್ತಾಳೆ…





ಅಪ್ಪ (ಮತ್ತು ಅಮ್ಮನ) ಕುರಿತಾದ ಆಪ್ತವೆನಿಸುವ ಕವಿತೆ. ಹೊಸ ಕವಿಯೊಬ್ಬಳ ಆಗಮನ ಈ ಮುಂಜಾನೆ.
ಕೆ.ವಿ.ತಿರುಮಲೇಶ್
ಧನ್ಯವಾದ ಸರ್…
ಅಪ್ಪನ ವೃದ್ಯಾಪ್ಯದ ಹೊಸ್ತಿಲನ್ನು ಧ್ವನಿಸುವ ಅಪೂರ್ವ ಕವಿತೆ ರಚಿಸಿರುವ ಚೈತ್ರಿಕಾ ಅವರಿಗೆ ಅಭಿನಂದನೆಗಳು,
ಕುಂವೀ
ಧನ್ಯವಾದ ಸರ್..
ದೊಡ್ಡವರೆಲ್ಲ ಹೇಳಿದ ಮೇಲೂ ನನ್ನದೊಂದು ಅನಿಸಿಕೆ.ಮಧುರ ಮುಂಜಾನೆಯಲ್ಲಿ ತುಂಬ ಆಪ್ತ ಕವಿತೆ. ಅಭಿನಂದನೆಗಳು.
Chai 🙂
bahala chendavaagi barediddeera, Ishtavayathu kavithe. Abhinandanegalu.
ಕಣ್ಞಿಗೆ ಕಟ್ಟುವ ಚಿತ್ರಗಳು ಚೈತ್ರಿಕಾ . . . ಅಭಿನಂದನೆ 🙂
ಕಾವ್ಯದ ಸಹಜ ನಡೆಯೆ ಪಿಸುಮಾತಿಂತೆ ಓದಿಸಿಕೊಳ್ಳುತ್ತಿವೆ .
ಕವಿತೆ ಚೆನ್ನಾಗಿದೆ
ಕಣ್ಣಿಗೆ ಕಟ್ಟುವಂತಹ ಕವಿತೆ … ಚೆನ್ನಾಗಿದೆ …
ಆಪ್ತವಾದ ಕವಿತೆ
ಅಪ್ಪನ ಆಸ್ಥೆಯ ನೈಜ ಚಿತ್ರಣ
ಮೆಲ್ಲನೆ ಧ್ವನಿಗೂಡಿದೆ.
ಅಭಿನಂದನೆಗಳು.
Tumba channagide…………Abhinandanegalu
olleya kavite..tumba istavayitu
ಮೆಚ್ಚಿದ ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು
wah. kavite tumba tumba tumba chennagide. innastu mattastu bareyiri
ಪದ್ಯ ತುಂಬಾ ಇಷ್ಟವಾಯ್ತು
ಕವಿತೆ ತುಂಬಾ ಚೆನ್ನಾಗಿದೆ; ಅಭಿನಂದನೆಗಳು.
chaitrika ji, kavanavendare idu. tumba ishtavayitu.
gatti kavite..abhinandanegalu