ಅದರೊಳಗೆ ನಾನೂ ಗಿರ ಗಿರ ಗಿರ ಗಿರ….

ಚೇತನಾ ತೀರ್ಥಹಳ್ಳಿ

ನಡೆಯುತ್ತ ನಡೆಯುತ್ತ ಹಾಗೇ ಅಂಗಾತ ಬಿದ್ದ ರೋಡು ಸುರುಳಿ ಸುತ್ತಿ, ಆಸುಪಾಸಿನ ಅಂಗಡಿಗಳೆಲ್ಲ ಅಡ್ಡಬಿದ್ದು, ಹೆಜ್ಜೆಹೆಜ್ಜೆಗೂ ಹಾದಿ ಮುಗಿದು, ಊರಿಗೂರೇ ಉಂಡೆಯಾಗಿ, ಭೂಮಿ ಬುಗರಿಯಂತೆ ರೊಂಯ್ಯನೆ ತಿರುಗಿ, ಅದರೊಳಗೆ ನಾನೂ ಗಿರ ಗಿರ ಗಿರ ಗಿರ….

ಹಾಗೇ ನಿಂತಿರುವೆ ಡಿವೈಡರಿನ ಮೇಲೆ. ಬಸ್ಸು ಕಾರುಗಳು ಸಾಲುಸಾಲು ಹೊಗೆಯುಗುಳುತ್ತ ಹೋಗುತ್ತಿವೆ. ನನ್ನೊಳಗೆ ಧಗಧಗ ಬೆಂಕಿ! ಅಸಹನೆಯ ಕುದಿ ಉಕ್ಕುತ್ತಿದೆ ಹಾಗೇ…
ದಿನಾ ಹೀಗೇ… ಆಫೀಸಿಗೆ ಹೋಗುವಾಗೆಲ್ಲ ಪುಟ್ಟ ಮಕ್ಕಳ ಹಾಗೆ. ಅವನ ಎಡತೊಡೆಯೇರಿ ಕುಂತು, ” ಇವತ್ತು ಹೋಗಲ್ಲ, ಯಾವತ್ತೂ ಹೋಗಲ್ಲ! ” ಅಂತ ಮುದ್ದುಗರೆಯಬೇಕನಿಸುತ್ತೆ. ಆದರೇನು? ನೂರೆಂಟು ಅನಿವಾರ್ಯತೆಗಳ ವಾಸ್ತವ ಛಟೀರನೆ ಕೆನ್ನೆಗೆ ಬಿಗಿದು ಎಚ್ಚರಿಸುತ್ತೆ. ಮತ್ತೆ ಅಳುಮೋರೆ ಹಾಕಿಕೊಂಡು ಬ್ಯಾಗೇರಿಸಿ, ಜುಟ್ಟು ಕುಣಿಸುತ್ತ ಹೊರಡುತ್ತೇನೆ.

* * *

ಕಾಲೇಜಿನ ದಿನಗಳು!
ನನ್ನ ಪಾಲಿಗೆ ಅಂಥದೇನೂ ಖಾಸ್ ಆಗಿರಲಿಲ್ಲ ಅವು. ಏನೇನೋ ತೋಚಿದ್ದು ಗೀಚುತ್ತ ನನ್ನ ಪಾಡಿಗೆ ಇದ್ದುಬಿಡುತ್ತಿದ್ದ ನನಗೆ ವಿಪರೀತ ಯಾವ ಮಹತ್ವಾಕಾಂಕ್ಷೆಗಳೂ ಇರಲಿಲ್ಲ.
ಈಗ ನೆನಪಾಗುತ್ತೆ. ನೆನಪಾಗಿ ನಗು ಬರುತ್ತೆ! ಅದರೊಟ್ಟಿಗೆ ಮುಖ ಹಿಂಡಿ, ಎರಡು ಹನಿ ಕಣ್ಣೀರೂ…

ಸೆಕೆಂಡ್ ಪಿ.ಯು. ಮುಗಿಯುತ್ತ ಬಂದಿತ್ತು. ಆಗ ಆಟೋಗ್ರಾಫ್ ಗಳದ್ದೇ ಕಾರುಬಾರು. ಅವುಗಳಲ್ಲಿ- ನನ್ನ ಇಷ್ಟದ ಬಣ್ಣ……, ನನ್ನ ಇಷ್ಟದ ತಿಂಡಿ…… ಇತ್ಯಾದಿ “ಫಿಲ್ ಇನ್ ದ ಬ್ಲ್ಯಾಂಕ್”ಗಳು!
ಅವುಗಳಲ್ಲಿ ಕಟ್ಟಕಡೆಯದು, ” ನನ್ನ ಜೀವನದ ಗುರಿ…..”
ನಾನು ನನ್ನ ಜಿಗಮಿಣಗಿ ಪೆನ್ನಿನಲ್ಲಿ ಶ್ರದ್ಧೆಯಿಂದ ತುಂಬಿದ್ದೆ; “ಒಳ್ಳೆಯ ಮಗಳು, ಹೆಂಡತಿ, ತಾಯಿ ಮತ್ತು ಗೃಹಿಣಿಯಾಗೋದು!”
ಕಾಲೇಜುಮೇಟುಗಳೆಲ್ಲ ಛೇಡಿಸಿ ಛೇಡಿಸಿ ನಕ್ಕಿದ್ದರು. “ಅರ್ಜೆಂಟಲ್ಲಿದಾಳಪ್ಪೋ!” ಅಂದು ಕಿಚಾಯಿಸಿದ್ದರು.

ನಿಜ. ಹಾಗೆಲ್ಲಾ ಸುಮ್ಮನೆ ಹೆಣ್ಣಾಗಿ ಇದ್ದುಬಿಡೋದು ಸುಲಭವಲ್ಲ ಅಂತ ಆಗ ನಂಗೆ ಖಂಡಿತ ಗೊತ್ತಿರಲಿಲ್ಲ.

* * *

ಈಗ ಮತ್ತೆ ಡಿವೈಡರಿನ ಮೇಲೆ….
ಆಚೀಚೆ ಒನ್ ವೇ ರಸ್ತೆಗಳು. ಹೋದ ದಾರಿಯಲ್ಲೇ ಮರಳಿದರೆ ಸಾಕಷ್ಟು ದಂಡ ಕಟ್ಟಬೇಕು, ನಷ್ಟ ಭರಿಸಬೇಕು!

ಅಗೋ! ಆ ಒಂಟಿ ಕಣ್ಣಿನ ಕಾರು ಹೋದಮೇಲೆ ರಸ್ತೆ ಹಾಯಬೇಕು. ” ಆಟೋ” ಕೂಗಬೇಕು.

ಮನೆಗೆ ಹೋಗಿ ಅಡುಗೆ ಮಾಡಲೇಬೇಕೆಂದೇನೂ ಇಲ್ಲ.
ಹೇಗೂ ಒಬ್ಬಳೇ. ಊಟ ಬೇಜಾರು.

‍ಲೇಖಕರು avadhi

April 8, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. leela sampige

    ಪ್ರೀತಿಯ ಚೇತನ,
    ನಾನೂ ಗಿರ ಗಿರ ಗಿರ…..ಓದಿದೆ. ಚೇತನ ಹೊಸಬಳು ಅನ್ನಿಸ್ತಾನೆ ಇಲ್ಲ! ಪರಿಚಿತಳು ನೀನೆಂದಲ್ಲ, ನಿನ್ನ ಭಾವಗಳು! ಬಹುವಚನ ಬಳಸಲಾಗಲಿಲ್ಲ ಕ್ಷಮಿಸು ಚೇತನ?
    ಲೀಲಾ ಸಂಪಿಗೆ.

    ಪ್ರತಿಕ್ರಿಯೆ
  2. malathi S

    Chetana,

    Lots to say but do not know where to begin. a part of everybody’s slice of life. Difference is you can write abt it and most cannot……
    Take care
    malathi S

    ಪ್ರತಿಕ್ರಿಯೆ
  3. Sree

    ಡಿವೈಡರಿನ ಮೆಲೆ ನಿಂತು…ಅಳುಮೋರೆ…ಬ್ಯಾಗೇರಿಸಿ ಜುಟ್ಟು ಕುಣಿಸುತ್ತಾ…ಕಾಲೇಜಿನ ಆಟೋಗ್ರಾಫ್…ಜೀವನದ ಗುರಿ…ಒನ್ ವೇ ರಸ್ತೆಗಳು, ಕಟ್ಟಬೇಕಾಗೋ ದಂಡ! ಅದ್ಭುತವಾಗಿದೆ! ಪುಟ್ಟ ಪುಟ್ಟ ಸಾಲುಗಳಲ್ಲಿ ಎಷ್ಟೆಲ್ಲ ಹೇಳ್ಬಿಡ್ತೀರಲ್ಲ!

    ಪ್ರತಿಕ್ರಿಯೆ
  4. chetana chaitanya

    ಲೀಲಾ ಮೇಡಂ, ಧನ್ಯವಾದ. ‘ನೀನು’ ಅಂದ ಪ್ರೀತಿಗೆ, ಮೆಚ್ಚುಗೆಗೆ.
    ಮಾಲತಿ, ಶ್ರೀ, ಇದು ನಮ್ಮೆಲ್ಲರ ಜೀವನದ ಮಾಮೂಲು ವಿಷಯ ಅಲ್ವಾ? ಅದಕ್ಕೆ ನಿಮಗೆ ಇಷ್ಟವಾಗತ್ತೆ. ಥ್ಯಾಂಕ್ಸ್.
    ವಂದೇ,
    ಚೇತನಾ

    ಪ್ರತಿಕ್ರಿಯೆ
  5. sudhakara

    hai chetana,
    nanu tumba dina ayatu nimma blag nodiralilla.aruna kavite hakidralla avaga nodidde.adesttu baritira anta ashraya agutte.kannada times ankana chennagide.
    thanx

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: