ಈಕೆ ಲೀಲಾ ಸಂಪಿಗೆ..

ಈಕೆ ಲೀಲಾ ಸಂಪಿಗೆ.
-ತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿಯೊಬ್ಬಳು ಜನ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಕ್ಷೇತ್ರವನ್ನು ಆಯ್ದುಕೊಳ್ಳುತ್ತಾಳೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಲೀಲಾಗೂ ಸಹಾ ಇದು ಸಹಜವಾದ ಆಯ್ಕೆಯಾಗಿರಲಿಲ್ಲವೇನೋ. ಅಕಸ್ಮಾತ್ ಆಗಿ ಸಂಪರ್ಕಕ್ಕೆ ಬಂದ ಕ್ಷೇತ್ರವನ್ನು ಅಚ್ಚುಕಟ್ಟುತನದಿಂದ ಮುನ್ನಡೆಸಿದ್ದಾರೆ.

ಲೀಲಾ ಸಂಪಿಗೆ ಆಯ್ದುಕೊಂಡದ್ದು ಲೈಂಗಿಕ ಕಾರ್ಯಕರ್ತೆಯರ ಸುಖ ದುಃಖಗಳನ್ನು ಆಲಿಸುವ ಕೆಲಸವನ್ನು. ಈಕೆ ಎನ್ ಜಿ ಓ ಗಳ ರೀತಿಯಲ್ಲಿ ಇದನ್ನು ಮಹತ್ ಸಾಧನೆಯಾಗಿ ಬಿಂಬಿಸಿಕೊಳ್ಳಲಿಲ್ಲ. ಇಲ್ಲವೇ ಇದರ ಬೆನ್ನಟ್ಟಿ ಬೇಕಾದಷ್ಟು ವಿದೇಶಿ ಹಣವನ್ನೂ ಮಾಡಿಕೊಳ್ಳಲಿಲ್ಲ. ಇಲ್ಲಾ ಬಿಲ್ ಗೇಟ್ಸ್ ಗಳ ಬೆನ್ನಟ್ಟಿ ಏಡ್ಸ್ ಆಸ್ಪತ್ರೆ ತೆಗೆಯಲು ಮುಂದಾಗಲಿಲ್ಲ.

ಬದಲಿಗೆ, ತೀವ್ರ ಆಸಕ್ತಿಯಿಂದ ಪ್ರತಿಯೊಬ್ಬರ ಕಥೆಯನ್ನೂ ಆಲಿಸಿದರು. ಅದು ಬಿಚ್ಚಿಟ್ಟ ಲೋಕದಿಂದ ಬೆಚ್ಚಿ ಬಿದ್ದ ಅವರು ತಮ್ಮ ಇಡೀ ಸಮಯವನ್ನು ಅವರಿಗಾಗಿ ಮೀಸಲಿಟ್ಟರು. ಅವರ ಬದುಕು ಹಸನು ಮಾಡಲು ಯತ್ನಿಸಿದರು. ಇವರು ಕೇವಲ ತೋರಿಕೆಯ ಅದ್ಯಯನಕ್ಕೆ ಸೀಮಿತರಾಗಲಿಲ್ಲ. ಲೈಂಗಿಕ ವೃತ್ತಿನಿರತರ  ಬಗ್ಗೆಯೇ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪಡೆದರು.

ವಿದ್ಯಾರ್ಥಿ ಸಂಘಟನೆಯ ನಾಯಕತ್ವ ಹಾಗೂ ಪತ್ರಕರ್ತರಾಗಿ ಪಡೆದಿದ್ದ ಅನುಭವವನ್ನು ಲೈಂಗಿಕ ವೃತ್ತಿನಿರತರಿಗಾಗಿ ಧಾರೆ ಎರೆದರು.  ಲೈಂಗಿಕ ವೃತ್ತಿನಿರತರ ಬಗ್ಗೆ ಈಕೆಯ ಜ್ಞಾನ ಅಪಾರ. ಒಂದು ಒಲಂಪಿಕ್ಸ್ ನಲ್ಲಿ ಎಷ್ಟು ಕಾಂಡೋಮ್ ಗಳು ಬಿಕರಿಯಾಗುತ್ತದೆ ಎನ್ನುವುದರಿಂದ ಹಿಡಿದು ಬಳಸಿದ ಕಾಂಡೋಮ್ ಗಳು ಹೇಗೆ ಪರಿಸರಕ್ಕೆ ಹಾನಿ ಒಡ್ಡುತ್ತಿವೆ ಎನ್ನುವವರೆಗೆ ಈಕೆ ಆಲೋಚನೆ ಮಾಡಬಲ್ಲರು.

ಗಟ್ಟಿ ದನಿಯ ಲೀಲಾ ತಾವು ನಡೆದ ಹಾದಿಯಲ್ಲಿ ಪ್ರಬುದ್ಧರಾಗಿ ಬದಲಾದ ರೀತಿ ವಿಸ್ಮಯ ಹುಟ್ಟಿಸುತ್ತದೆ.

‍ಲೇಖಕರು avadhi

April 8, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗಾಣಧಾಳು ಶ್ರೀಕಂಠ

    ಲೀಲಾ ಸಂಪಿಗೆಯವರದ್ದು ಸಾಮಾಜಿಕ ಸೇವಾ ಲೋಕದಲ್ಲೊಂದು ಪರಿಚಿತ ಹೆಸರು.಻ವರು ಅಧ್ಯಕಯನ ಪ್ರಬಂಧ ಬರೆಯುವ ಸಂದರ್ಭದಲ್ಲಿ ನನ್ನ ಗೆಳೆಯರಿಂದ ಪರಿಚಯವಾಗಿತ್ತು. ಅವರ ಕಾರ್ಯವ್ಯಾಪ್ತಿ ಹಾಗೂ ಕ್ಷೇತ್ರಗಳ ಬಗ್ಗೆ ಪರಿಚಯವಿರಲಿಲ್. ಅವಧಿಯಲ್ಲಿನ ಮಾಹಿತಿ ನೋಡಿ ಆಶ್ಚರ್ಯವಾಯಿತು. ನಮಮ ಜಿಲ್ಲೆಯ ಹೆಣ್ಣುಮಗಳೊಬ್ಬಳ ಈ ಪರಿ ಸೇವಾ ಕ್ಷೇತ್ರದಲ್ಲಿ ವಿಸ್ತಾರಗೊಂಡಿರುವುದು ಹೆಮ್ಮಯ ವಿಷಯ. ಻ವರ ಬರಹದ ನಿರೀಕ್ಷೆಯಲ್ಲಿದ್ದೇನೆ. ಅವರಿಗೆ ಶುಭವಾಗಲಿ

    ಪ್ರತಿಕ್ರಿಯೆ
  2. ನಾ.ಸೋಮೇಶ್ವರ

    ಲೀಲಾ ಸಂಪಿಗೆಯವರಿಗೆ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು. ಲೀಲಾ ಅವರು
    ತಮ್ಮ ಪಿಎಚ್‍ಡಿ ಪ್ರಬಂಧವನ್ನು ಪ್ರಕಟಿಸಿದ್ದಾರೆಯೆ? ಪ್ರಕಟಿಸಿದರೆ ಒಳ್ಳೆಯದು.
    ಅವರಿಗೆ ಯಶಸ್ಸು ದೊರೆಯಲಿ.
    -ನಾಸೋ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: