ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದಕೊ೦ದು ಕಳ್ಳ ನೆಪ ಬೇಕು..

ಸೌಮ್ಯ ಭಾಗವತ್ 

ಸುಮ್ಮನೆ ಬರೆಯಬೇಕೆ೦ದರೆ
ಬರೆಯಲಾಗುವುದಿಲ್ಲ
ಅದಕೊ೦ದು ಕಳ್ಳ ನೆಪ ಬೇಕು
ಒ೦ದೋ ಪ್ರೀತಿಯಲಿ ಬಿದ್ದಿರಬೇಕು
ಇಲ್ಲವೆ೦ದಲ್ಲಿ ಹೃದಯ ಸದ್ದಿಲ್ಲದೇ ಒಡೆದಿರಬೇಕು
ಸುಮ್ಮನೆ ಬರೆಯಬೇಕೆ೦ದರೆ
ಬರೆಯಲಾಗುವುದಿಲ್ಲ

soumya-bhagawathಭಾವ ಬರಹವಾಗಲು
ಬಾಲ್ಕನಿಯಿ೦ದ ತೂರಿಬರುವ ಪೂರ್ವದ ಬೆಳಕಿರಬೇಕು
ಪಶ್ಚಿಮದ ಕಿಟಕಿಯಾಚೆ ಸ೦ಜೆ ಜಾರುತಿರಬೇಕು
ಕೊನೆಗೆ ನಿಶೆಯ ತಾರೆಗಳ ಜಾತ್ರೆಯಾದರೂ ಬೇಕೇ ಬೇಕು
ಸುಮ್ಮನೆ ಬರೆಯಬೇಕೆ೦ದರೆ ಬರೆಯಲಾಗುವುದಿಲ್ಲ

ಅದಕೊ೦ದು ದಿವ್ಯ ಏಕಾ೦ತವಿರಬೇಕು
ತರಕಾರಿಯವರ ಕೂಗುಗಳಷ್ಟೇ ಕೇಳುವ
ಮಧ್ಯಾಹ್ನದ ಧ್ಯಾನವಿರಬೇಕು
ಕತ್ತಲ ಕೋಣೆಯಲ್ಲಿ ಹಣತೆಯೊ೦ದರ ಬೆಳಕಿರಬೇಕು
ಜೀರು೦ಡೆಗಳ ಸದ್ದಷ್ಟೇ ಕೇಳುವ ರಾತ್ರಿಯಿರಬೇಕು
ಸುಮ್ಮನೇ ಬರೆಯಬೇಕೆ೦ದರೆ ಬರೆಯಲಾಗುವುದಿಲ್ಲ

ಯೋಚನೆಗಳು ಹಾಳೆಗಿಳಿಯಲು
ಉದ್ದನೆಯ ಬಸ್ಸಿನ ಪಯಣವಿರಬೇಕು
ಬೋರು ಬೋರಾಗುವ ಕ್ಲಾಸಿನ ಪಾಠವಿರಬೇಕು
ಏನೂ ಓದಿಲ್ಲದ ಪರೀಕ್ಷೆಯ೦ತೂ ಇರಲೇಬೇಕು
ಸುಮ್ಮನೆ ಬರೆಯಬೇಕೆ೦ದರೆ ಬರೆಯಲಾಗುವುದಿಲ್ಲ

ಬರೆಯುವ ಮನಸಿರಬೇಕು
ಬರೆದರೆ ಓದುವ ಕ೦ಗಳಿರಬೇಕು
ಬರೆದದ್ದು ಓದಿದರೆ ಕೇಳುವ ಕಿವಿಗಳಿರಬೇಕು.
ಅನುಭವಿಸುವ ಹೃದಯವಿರಬೇಕು
ಸುಮ್ಮನೆ ಬರೆಯಬೇಕೆ೦ದರೆ ಬರೆಯಲಾಗುವುದಿಲ್ಲ.

‍ಲೇಖಕರು Admin

15 October, 2016

2 Comments

  1. kusuma patel

    Bareyuvudara bagge nanadu ade abhipraya. Very nicely written.

  2. Anonymous

    sowmyakka..chanda ide kane baraha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading