ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಣ್ಣಾ ಅದು ಹೀಗಾಯಿತಣ್ಣ

raghavendra hegadekar1

ರಾಘವೇಂದ್ರ ಹೆಗಡೇಕರ್

ಅಣ್ಣಾ ಅದು ಹೀಗಾಯಿತಣ್ಣ
ಬೆಳಿಗ್ಗೆಯಿಂದಲೇ
ಎರಡು ಕಾಲು ಸೇರಿಸಿ
ಗಟ್ಟಿಯಾಗಿ ಕಟ್ಟಿದ್ದರು
ಪಾದಗಳಿಗೆ ರಕ್ತ ತಲುಪದೇ
ಅದು ತಣ್ಣಗಾಗಿತ್ತು

1faa528dd8cfe811a739dee92854b048ಅದಕ್ಕೆ ಮುಂಚೆ
ನಿನ್ನೆ ರಾತ್ರಿಯೆ ಬೇಗನೆ
ಹಿಡಿದು ಬುಟ್ಟಿಯಲ್ಲಿ
ಕತ್ತಲಲ್ಲಿ ಬಚ್ಚಿಟ್ಟಿದ್ದರು.
ರಾತ್ರಿಯಿಡಿ ಕಾಳು
ನೀರಿಲ್ಲದೆ ಉಪವಾಸ
ಬರಿ ನೀರು ನೀರು
ಹೊರಗೆ ಹೊರಬಂತು

ಆಮೇಲೆ ಎರಡು ರೆಕ್ಕೆಯನ್ನು
ಮೇಲಕ್ಕೇರಿಸಿ
ಕತ್ತರಿ ಕುಣಿಕೆ ಹಾಕಿ
ತೂಗು ಬಿಟ್ಟಿದ್ದರು .

ಹತ್ತಾರು ಹರ ದಾರಿ
ದೂರ ಮೈಲಿ ಗಾಳಿಯಲ್ಲಿ
ತೇಲಿಸಿಕೊಂಡು ಹೋಗಿ
ನಮ್ಮಂತೆ ಬಿದ್ದಿದ್ದ ನೂರಾರು
ಅಮಾಯಕಂಗಳ ಜತೆ
ನಿತ್ರಾಣವಾಗಿ ಎಸೆದರು,

ಓಹೋ ಇದು ಯಾವುದೋ
ಊರ ಜಾತ್ರೆ ಗದ್ದುಗೆ
ನನ್ನಂತೆ ಬಣ್ಣ ಬಣ್ಣದ
ಗರಿತುಪ್ಪಳಗಳನ್ನೇ ಹೊದ್ದ
ಮನ ಮೋಹಕ ರಥ
ನಮ್ಮವರ ಬಿಸಿಯುಸಿರು
ಭೂಮಿ ಬೆಂಕಿಯ ಕಾವಲಿ
ಮೇಲಿಂದ ರಣ ಬಿಸಿಲು
ಪಾಳಿ ಬಂದ ಕೂಡಲೇ
ನನ್ನ ಎಳೆ ಕತ್ತು ಮುರಿದರೋ
ಇಲ್ಲ ಕೊಯ್ದರೋ
ಗೊತ್ತಾಗಲಿಲ್ಲ
ಒದ್ದಾಡಲು ತ್ರಾಣವಿರಲಿಲ್ಲ
ನಿಧಾನವಾಗಿ ಜೀವನದಲ್ಲಿ
ಮೊದಲು ಸಾರಿ ನಾನು
ತಲೆಯಿಲ್ಲದೆ ನಿದ್ದೆಗೆ ಜಾರಿದೆ .

‍ಲೇಖಕರು admin

17 April, 2016

1 Comment

  1. Sangeeta Kalmane

    ಛೆ ಈ ಮೂಕ ಪ್ರಾಣಿಗಳಿಗೆ ಎಂಥಾ ಗತಿ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading