ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಜ್ಜಾ ಎಲ್ಲಿಗೆ ಹೊರಟಿರಿ… 

ನೂರುಲ್ಲಾ ತ್ಯಾಮಗೊಂಡ್ಲು

**

ಕಿಕ್ಕಿರಿದ ಜನರು ತುಂಬಿದ 

ಚೌಕದಲಿ 

ಮುದುಕನೊಬ್ಬ ಊರುಗೋಲ 

ಹಾಕಿ ನಡೆದಿದ್ದ 

ಸೊರಕು… ಸೊರಕು… 

ಪಿಳಿ ಪಿಳಿ ಕಣ್ಣುಗಳು 

ಆಕಾಶದಲಿ ಮಿನುಗುವ ಚುಕ್ಕಿಗಳಂತೆ 

ಓಹ್.. ಈದ್ ಮುಬಾರಕ್ 

ಈದ್ ಮುಬಾರಕ್.., ಈದ್ ಮುಬಾರಕ್…

ಆಪ್ ಕೊಭಿ.., ಆಪ್ ಕೋ ಬೀ… 

– 

ಈದ್ ಊಲ್ ಫಿತ್ರ್ ಮುಗಿಸಿದ ನಮಾಜಿ಼ಗಳು 

ಶುಭಾಶಯ ಕೋರುತಲಿದ್ದರು  

ಏಕೋ ಮತ್ತೆ 

ಕಣ್ಗಳು ಅವನತ್ತಲೇ ಹೊರಳಿದವು 

ಜನರು 

ಅತ್ತಿಂದಿತ್ತ ಇತ್ತಿಂದತ್ತ  

ಕೈ ಕೈ (ಮುಸಾಫಾ) ಮಿಲಾಯಿಸಿ, 

ಎದೆಗೆ ಎದೆ ತಾಕಿಸಿ ಸಂಭ್ರಮಿಸಿ

ನಸು ನಗೆ ಬೀರುತ್ತಲಿದ್ದರು 

ಏಕೋ ಹೃದಯ ಕಂಪಿಸಿತು 

ಅವನತ್ತ ನಡೆದೆ  

ಅಜ್ಜಾ ಎಲ್ಲಿಗೆ ಹೊರಟಿರಿ… 

ಅಜ್ಜನ ತುಟಿಗಳು ನಡುಗಿದವು 

‘ಎಲ್ಲಿಂದ ಬಂದೆನೋ ಅಲ್ಲಿಗೆ’ ಮಗಾ… 

ಧಗ ಧಗಿಸುವ ಬಿಸಿಲಲಿ ಒಬ್ಬರೇ 

ಯಾವೂರು… 

ಹ್ಞಾ, ‘ಇದೊಂದು ಅನಾಥ ಶರೀರ’  

– ಜೊತೆಗಿದೆ 

ಅಲೇಮಾರಿ ಫಕೀರನಿಗೆ ಬಿಸಿಲು, ಊರು 

ಇದೆಯಾ ಮಗಾ… 

ಏಕೋ ಎದೆಯಲಿ ಚೂರಿ ಇರಿದಂತಾಯಿತು 

ಇವತ್ತು ರಂಜಾನ್ 

ಹ  ಬ್ಬಾ….

ನಾಲಿಗೆ ಹೊರಳಲಿಲ್ಲ 

ಉಂಬಳಕೇ ಇಲ್ಲದವನಿಗೆ 

ಹಬ್ಬವೂ…? 

ಕರುಳು ಹಿಂಡಿ 

ಕಣ್ಗಳು ಒದ್ದೆಯಾದವು 

ಅಜ್ಜನ ಕೈ ಹಿಡಿದು 

ಬೇಡಿದೆ : 

ಕ್ಷಮಿಸಿ ಬಿಡು ಅಜ್ಜಾ ನಮ್ಮನ್ನು 

ಮಜ಼ಲೂಮ್, ಯತೀಮ್, ಗರೀಬರತ್ತ 

ನಮ್ಮ ಕೈಗಳು ಹೋಗದಿರುವುದಕ್ಕೆ 

ಈ ನಮ್ಮ ನಡುವಿನ ಅಂತರ 

ಬೆಳೆಸಿಕೊಂಡಿದ್ದಕ್ಕೆ  

‍ಲೇಖಕರು Admin MM

13 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading